ವಾರಾಣಸಿ: “ಭಾರತದಲ್ಲಿ ಆಂಗ್ಲರು ಜಾರಿಗೊಳಿಸಿದ ಶಿಕ್ಷಣ ಪದ್ಧತಿ, ಕೇವಲ ಬ್ರಿಟಿಷರ ಅಗತ್ಯಗಳನ್ನು ಪೂರೈಸಲು ಬೇಕಿದ್ದ ಸೇವಕರ ನೇಮಿಸಿಕೊಳ್ಳಲು ರೂಪಿಸಲಾಗಿದ್ದ ಶಿಕ್ಷಣ ವ್ಯವಸ್ಥೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದು, “ಇಂದಿನ ಮಕ್ಕಳ ಅಗತ್ಯತೆಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಪೂರೈಸುತ್ತದೆ’ ಎಂದು ಹೇಳಿದರು.
ವಾರಾಣಸಿಯಲ್ಲಿ, ಎನ್‌ಇಪಿ ಬಗೆಗಿನ 3 ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, “ಬ್ರಿಟಿಷರ ಶಿಕ್ಷಣ ಪದ್ಧತಿಯಲ್ಲಿ ಸೇವಕರ ಪಡೆ ನಿರ್ಮಿಸು ವುದೇ ಮಹತ್ವದ ಗುರಿಯಾಗಿತ್ತು. ಸ್ವಾತಂತ್ರ್ಯ ಬಂದ ಅನಂತರ ಅವರು ಜಾರಿ ಗೊ ಳಿ ಸಿದ್ದ ಶಿಕ್ಷಣ ಪದ್ಧತಿಯಲ್ಲಿ ಕೊಂಚ ಬದಲಾವಣೆ ಮಾಡಲಾಯಿತಾದರೂ ಹಲವಾರು ವಿಚಾರಗಳು ಹಾಗೆಯೇ ಮುಂದು ವರಿದವು. ಆದರೆ ದೇಶಕ್ಕೆ ಈಗ ದೇಶ ವನ್ನು ಅಭಿವೃದ್ಧಿಪಥದತ್ತ ಕೊಂಡೊ ಯ್ಯಬಲ್ಲ ಮಾನವ ಸಂಪನ್ಮೂಲವನ್ನು ನೂತನ ಶಿಕ್ಷಣ ಪದ್ಧತಿಯಡಿ ರೂಪಿಸುವ ಅನಿವಾರ್ಯತೆಯಿದೆ’ ಎಂದರು.
“ಇಂದಿನ ಮಕ್ಕಳು ಯಾರು ಏನೇ ಹೇಳಿದರೂ ಅದನ್ನೊಮ್ಮೆ ಗೂಗಲ್‌ನಲ್ಲಿ ಪರೀಕ್ಷಿಸಿ ಮಾತನಾಡುತ್ತಾರೆ. ಚರ್ಚೆಗಳಲ್ಲಿ ಪಾಲ್ಗೊಳ್ಳಲು ಗೂಗಲ್‌ನಿಂದ ಮಾಹಿತಿ ಪಡೆಯುತ್ತಾರೆ. ಇವರು ಉನ್ನತ ಶಿಕ್ಷಣಕ್ಕೆ ಬರುವಾಗ ಅವರ ಅಂದಿನ ಅಗತ್ಯತೆಗಳಿಗೆ ತಕ್ಕಂಥ ಕ್ಯಾಂಪಸ್‌ಗಳನ್ನು ರೂಪಿಸುವುದು ಇಂದು ನಮೆಲ್ಲರ ಜವಾಬ್ದಾರಿ’ ಎಂದು ಮೋದಿ ಅಭಿಪ್ರಾಯಪಟ್ಟರು.
“ಎನ್‌ಇಪಿಯು ಭಾರತೀಯ ಮಕ್ಕ ಳಿಗೆ ತಮ್ಮ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಲು ಆದ್ಯತೆ ನೀಡುವುದರ ಜತೆಗೆ ಅವರಿಗೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧಿಸಲು ಅಣಿಗೊಳಿಸುತ್ತದೆ. ಹೊಸ ಶಿಕ್ಷಣ ವ್ಯವಸ್ಥೆಯು ಭಾರತವನ್ನು ಮುಂದೊಂದು ದಿನ ಖಂಡಿತವಾಗಿಯೂ ವಿಶ್ವದ ಶ್ರೇಷ್ಠ ವಿದ್ಯಾಭ್ಯಾಸದ ತವರಾಗಿ ಪರಿವರ್ತಿಸುತ್ತದೆ’ ಎಂದು ಮೋದಿ ಆಶಿಸಿದರು.
ಶಂಕುಸ್ಥಾಪನೆ: ವಾರಾಣಸಿಯ ಸಂಪೂರ್ಣಾನಂದ ಕ್ರೀಡಾಂಗಣದಲ್ಲಿ 1,774 ಕೋಟಿ ರೂ.ಗಳ ವಿವಿಧ ಮೊತ್ತದ ಯೋಜ ನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಅವರು, “ಅಭಿವೃದ್ಧಿ ಎಂದರೆ ಕೇವಲ ಥಳುಕು- ಬಳುಕಲ್ಲ. ಅದು ಬಡವರ, ದಲಿತರ, ಸೌಲಭ್ಯ ವಂಚಿತರ, ಆದಿವಾಸಿ ಗಳ, ನಮ್ಮ ತಾಯಿ -ಸಹೋದರಿಯರ ಅಭ್ಯುದಯವಾಗಿರುತ್ತದೆ’ ಎಂದರು.