Advertisement

ಪ್ರಧಾನಿ ರಾಜೀನಾಮೆಗೆ ಒತ್ತಾಯ

10:21 AM Sep 24, 2018 | Team Udayavani |

ಕಲಬುರಗಿ: ರಫೆಲ್‌ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ಎಸಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ರವಿವಾರ ಜೇವರ್ಗಿ ಪಟ್ಟಣದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಯುವ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಪಟ್ಟಣದ ಬಸವೇಶ್ವರ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

Advertisement

ರಫೆಲ್‌ ಯುದ್ಧ ವಿಮಾನ ಖರೀದಿಯಲ್ಲಿ 41 ಸಾವಿರ ಕೋಟಿ ರೂ. ಬೊಕ್ಕಸಕ್ಕೆ ಹಾನಿ ಮಾಡಿದ್ದಲ್ಲದೇ ಅವ್ಯವಹಾರ ಎಸಗಲಾಗಿದೆ. ಮುಖ್ಯವಾಗಿ ಕೇಂದ್ರ ರಕ್ಷಣಾ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿ ರಫೆಲ್‌ ವಿಮಾನ ಖರೀದಿ
ಮಾಡಿದೆ. ಈ ಕುರಿತು ಸಂಸತ್ತು ಹಾಗೂ ರಾಜ್ಯಸಭೆಯಲ್ಲಿ ವಿಪಕ್ಷ ಕಾಂಗ್ರೆಸ್‌ ಪ್ರಶ್ನೆ ಕೇಳಿದ್ದಲ್ಲದೇ ವಾಗ್ಧಾಳಿ ನಡೆಸಿದ್ದರೂ
ಪ್ರಧಾನಿಯಾಗಲಿ, ರಕ್ಷಣಾ ಸಚಿವರಾಗಲಿ ಯಾವುದೇ ಉತ್ತರ ನೀಡಿಲ್ಲ. ಇದನ್ನು ಜನತೆ ಮುಂದಿಡಲು ಯುವ ಕಾಂಗ್ರೆಸ್‌ ಪಕ್ಷ ಹೋರಾಟಕ್ಕೆ ಇಳಿದಿದೆಪುರಸಭೆ ಮಾಜಿ ಸದಸ್ಯ ಮರೆಪ್ಪ ಸರಡಗಿ ಹೇಳಿದರು.

ಹಿಂದಿನ ಸರ್ಕಾರ 126 ವಿಮಾನ ಖರೀದಿಸಲು ನಿರ್ಧರಿಸಲಾಗಿತ್ತು. ಆದರೆ ಈಗಿನ ಕೇಂದ್ರ ಸರ್ಕಾರ ಏಕಾಏಕಿ ರಕ್ಷಣಾ ಇಲಾಖೆಯ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ದುಬಾರಿ ದರದಲ್ಲಿ ಒಂದೊಂದು ವಿಮಾನಕ್ಕೆ 529 ಕೋಟಿ ರೂ. ನಂತೆ 36 ವಿಮಾನಗಳನ್ನು ಅನೀಲ ಅಂಬಾನಿ ರಿಲಾಯನ್ಸ್‌ ಕಂಪನಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಖರೀದಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.

ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. ರವಿ ಕೋಳಕೂರ, ಮಾಜೀದ ಶೇಠ ಗಿರಣಿ, ಯುವ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಬೂದಿಹಾಳ, ಪ್ರಧಾನ ಕಾರ್ಯದರ್ಶಿ ರಿಯಾಜ ಪಟೇಲ, ಬಸಣ್ಣ ಸರಕಾರ, ಕಾಸಿಂಪಟೇಲ್‌ ದಖನಿ, ರಾಜಶೇಖರ ಮುತ್ತಕೋಡ, ಬಸವರಾಜ ಲಾಡಿ ಮುಂತಾದವರಿದ್ದರು.

 ಶಹಾಬಾದ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಫೆಲ್‌ ಯುದ್ಧ ವಿಮಾನಗಳ ಖರೀದಿಯಲ್ಲಿ ಹಗರಣ ಎಸಗಿರುವುದರಿಂದ ಕೂಡಲೇ ಕೇಂದ್ರದ ನರೇಂದ್ರ ಮೋದಿ ಅವರು ಹಾಗೂ ರಕ್ಷಣಾ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ನಗರದ ಯುವ ಕಾಂಗ್ರೆಸ್‌ ವತಿಯಿಂದ ರವಿವಾರ ನೆಹರು ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಹಣಮಂತ ಹರಸೂರ್‌ ಮಾತನಾಡಿ, ರಫೆಲ್‌ ಹಗರಣದಲ್ಲಿ ನರೇಂದ್ರ ಮೋದಿ ಅಂಬಾನಿ ಪರ ಕೆಲಸ ಮಾಡಿದ್ದಾರೆ ಎಂದು ಫ್ರಾನ್ಸ್‌ ದೇಶದ ಮಾಜಿ ಅಧ್ಯಕ್ಷ ಓಲಾಂಡ್‌ ಹೇಳಿದ್ದಾರೆ. ಉದ್ಯಮಿ ಅಂಬಾನಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರಕ್ಷಣಾ ವಿಚಾರದಲ್ಲೂ ಹಗರಣ ಮಾಡಿರುವುದು ಬಯಲಿಗೆ ಬಂದಿದೆ ಎಂದು ಆಪಾದಿಸಿದರು. ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು.ಇಂಧನ ಬೆಲೆ ಕಡಿಮೆ ಮಾಡುತ್ತೇನೆ. ಕಪ್ಪು ಹಣವನ್ನು ದೇಶಕ್ಕೆ ತಂದು ಎಲ್ಲರ ಖಾತೆಗೆ ಹಾಕುತ್ತೇನೆ. ಬಡವರನ್ನು ಉದ್ಧಾರ ಮಾಡುತ್ತೇನೆ ಎಂದು ಹೇಳಿದವರು ಈವರೆಗೂ ಏನೂ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಮುಖಂಡ ಡಾ| ಅಹ್ಮದ್‌ ಪಟೇಲ್‌, ಶರಣಬಸಪ್ಪ ಪಗಲಾಪುರ ಮಾತನಾಡಿ, ಪ್ರಧಾನಿ ಮೋದಿ ಜನಸಾಮಾನ್ಯರ ಹಿತರಕ್ಷಣೆಯನ್ನು ಸಂಪೂರ್ಣ ಕಡೆಗಣಿಸಿದ್ದು, ಕೇವಲ ಶ್ರೀಮಂತರ ರಕ್ಷಣೆ ಮಾಡುತ್ತಿದ್ದಾರೆ
ಎಂದು ಆಪಾದಿಸಿದರು.

ಯುವ ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮತೀನ್‌ ಬಾದಲ್‌, ನಗರ ಪ್ರಧಾನ ಕಾರ್ಯದರ್ಶಿ ಮ. ಇಮ್ರಾನ್‌, ಅನ್ವರ ಪಾಷಾ ನಸರೋದ್ದಿನ್‌, ಶಕೀಲ್‌ ಇಂಗಳಗಿ, ನಾಗರಾಜ ಕರಣಿಕ್‌, ಮ. ಜಾವೀದ್‌, ಜಿಲಾನಿ ಷಾ, ರಾಜು
ಶರಣಪ್ಪ, ಮೆಹಬೂಬ, ಮ.ಬಾಕರೋದ್ದಿನ್‌, ಸಂದೀಪ ಮುಟ್ಟತ್ತಿ, ಮ.ಮಸ್ತಾನ್‌, ಮ.ಫಯಾಜ್‌, ಸಯ್ಯದ್‌ ಜಹೀರ್‌, ಶೇರ ಅಲಿ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next