ಚಿಕ್ಕಮಗಳೂರು: ಗುಜರಾತ್ ಚುನಾವಣೆ ರ್ಣಗೊಳ್ಳುವವರೆಗೆ ಸಂಸತ್ತಿನ ಚಳಿಗಾಲದ ಅ ಧಿವೇಶನ ಕರೆಯದಿರಲು ಬಿಜೆಪಿ ಆಲೋಚಿಸುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಸಂಸತ್ತನ್ನು ಎದುರಿಸುವ ಸಾಹಸಕ್ಕೆ ಪ್ರಧಾನಿ ಈಗ ಮುಂದಾಗುವುದಿಲ್ಲ. ಸಂಸತ್ ಅ ಧಿವೇಶನವನ್ನು ನ.15ಕ್ಕೆ ಕರೆಯಲು ನಿಗದಿಪಡಿಸಿದ್ದು, ನಂತರ 21ಕ್ಕೆ ಮುಂದೂಡಲಾಗಿದೆ. ಬಿಜೆಪಿಗೆ ನೋಟು ಅಮಾನ್ಯಿàಕರಣ, ಜಿಎಸ್‌ಟಿ ಸೃಷ್ಟಿಸಿರುವ ದೇಶವ್ಯಾಪಿ ಗೊಂದಲಗಳಿಂದ ಪಾರಾಗಲು ಗುಜರಾತ್ ಚುನಾವಣೆ ಪೂರ್ಣಗೊಳ್ಳುವವರೆಗೆ ಕರೆಯದೆ ಇರುವ
ಸಂಭವವಿದೆ ಎಂದರು.
ದೇಶದ ಅರ್ಥ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಕಪ್ಪು ಹಣ ಹೊರ ತರುವುದಾಗಿ ಹೇಳುತ್ತಿದ್ದ ಪ್ರಧಾನಿ ಈಗ ಅವರ ಪಕ್ಷದವರೇ ತೆರಿಗೆ ರಹಿತ ದೇಶಗಳಲ್ಲಿ ಹೂಡಿಕೆ ಮಾಡಿರುವುದು ಗೊತ್ತಾಗುತ್ತಿದ್ದಂತೆ ಅದಕ್ಕೆ ಉತ್ತರಿಸಲಾಗದೆ ಲೋಕಸಭಾ ಕಲಾಪ ಕರೆಯುವುದನ್ನು ಮುಂದೂಡುತ್ತಿದ್ದಾರೆ. ಬಿಜೆಪಿ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದೆ ಕೇವಲ ದ್ವೇಷದ ರಾಜಕಾರಣಕ್ಕೆ ಮುಂದಾಗಿದೆ. ಯಾವ ಅಭಿವೃದ್ಧಿ ಕೆಲಸಗಳಾಗಲಿ, ಸಮಾಜಕ್ಕೆ ಪೂರಕವಾಗುವ ಯೋಜನೆಗಳನ್ನಾಗಲಿ ತರಲು ಸಾಧ್ಯವಾಗುತ್ತಿಲ್ಲ. ದೇಶದ ಜನಕ್ಕೆ ಈಗ ಬಿಜೆಪಿಯ ಸಹಜ ಬಣ್ಣದ ಅರಿವಾಗುತ್ತಿದೆ ಎಂದರು. ನೋಟು ಅಮಾನ್ಯಿಕರಣ ಹಾಗೂ ಜಿಎಸ್‌ಟಿಯಿಂದ ಯಾವ ಸಾಧನೆಯೂ ಆಗಲಿಲ್ಲ ಎಂದರು.
ಸಚಿವ ಜಾರ್ಜ್ ಅವರ ಮೇಲೆ ಎಫ್‌ಐಆರ್ ದಾಖಲೆಯಾದ ನಂತರ ರಾಜೀನಾಮೆ ಪಡೆದು ಕಾಂಗ್ರೆಸ್ ಇತರ ಪಕ್ಷಗಳಿಗೆ ಮಾದರಿಯಾಗಬಹುದಿತ್ತಲ್ಲವೇ ಎಂಬ ಪ್ರಶ್ನೆಗೆ, ಮಾದರಿ ಆಗಬೇಕಾದುದು ನಿಜ. ಆದರೆ ಜಾರ್ಜ್ ಪ್ರಕರಣದಲ್ಲಿ ಈ ಹಿಂದೆಯೇ ತನಿಖೆಯಾಗಿ ಅವರು ತಪ್ಪಿತಸ್ಥರಲ್ಲ ಎಂಬುದು ಖಚಿತವಾಗಿದೆ. ಈಗ ಅವರ ಮೇಲೆ ಬಿಜೆಪಿ ಎಫ್‌ಐಆರ್ ದಾಖಲಿಸುವಂತೆ ಮಾಡಿದೆ. ಕೇಂದ್ರ ಸರ್ಕಾರದ ಸಂಸ್ಥೆಗಳಾದ ಸಿಬಿಐ ಸೇರಿದಂತೆ ಆದಾಯ ತೆರಿಗೆ, ಎನ್‌ಐಎ ಎಲ್ಲವನ್ನೂ ರಾಜಕೀಯ ಕಾರಣಗಳಿಗಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಹಾಗಾಗಿ ಜಾರ್ಜ್ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ತನಿಖೆಯಾಗಿ ಸೂಕ್ತ ಸಾಕ್ಷ್ಯಧಾರಗಳು ಹೊರ ಬಂದರೆ ಆಗ ರಾಜೀನಾಮೆ ನೀಡಲು ಪಕ್ಷವೇ ಸೂಚಿಸುತ್ತದೆ ಎಂದರು. ನಾನು ಎಂದೂ ಟಿಪ್ಪುವನ್ನು ಕ್ರೂರಿ ಎಂದು ಹೇಳುವುದಿಲ್ಲ. ಅವನೊಬ್ಬ ದೇಶಭಕ್ತ. ಅದನ್ನು ಈ ದೇಶದ ರಾಷ್ಟ್ರಪತಿಗಳು ಸಹ ಮೊನ್ನೆ ರಾಜ್ಯಕ್ಕೆ ಬಂದಾಗ ಉಚ್ಚರಿಸಿದ್ದಾರೆ. ನಾನು ರಾಷ್ಟ್ರಪತಿಗಳ ಮಾತನ್ನು ಅನುಮೋದಿಸುತ್ತೇನೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಜನರು ತೋರಿಸುತ್ತಿರುವ ಸ್ಪಂದನೆ ನೋಡಿದರೆ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡುವುದು ಖಚಿತವೆನಿಸುತ್ತಿದೆ. ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಕಾರ್ಯಕರ್ತರು ಮನೆ ಮನೆಗೆ ತೆರಳಿ ವಿವರಿಸಲು ಆರಂಭಿಸಿದರೆ ಅದನ್ನು ಜನರೇ ಪೂರ್ಣಗೊಳಿಸುತ್ತಿದ್ದಾರೆ ಎಂದರು. ತಮ್ಮ ಒಂದು ತಿಂಗಳ ರಾಜ್ಯದ ವಿವಿಧ ಭಾಗಗಳ ಪ್ರವಾಸದಲ್ಲಿ ಕಾರ್ಯಕರ್ತರು ಮಾಡುತ್ತಿರುವ ಕೆಲಸ ತೃಪ್ತಿ ತಂದಿದೆ ಎಂದರು. ಅಭಿವೃದ್ಧಿ ಮತ್ತು ಸಾಮಾಜಿಕ ಸಮತೋಲನ ತರುವಲ್ಲಿ ಉತ್ತಮ ಸಾಧನೆ ಮಾಡಿದೆ. ಆದರೆ ಕೇಂದ್ರ ಸರ್ಕಾರ ಕಳೆದ ಮೂರೂವರೆ ವರ್ಷಗಳಲ್ಲಿ ನೀಡಿದ ಭರವಸೆ ಏನಾಗಿದೆ? ಕೇಂದ್ರದ ಸಂಪುಟದಲ್ಲಿ ಸಚಿವರ, ಸಂಸದರ ಹೆಸರೇ ಪ್ಯಾರಡೈಸ್ ಪೇಪರ್ನಲ್ಲಿ ಬಂದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ನಾವು ಉತ್ತರ ಕೇಳುತ್ತಿದ್ದೇವೆ ಎಂದರು.