ಮಾರ್ಚ್ 24ರಂದು ರಾತ್ರಿ ’21 ದಿನಗಳ ಭಾರತ ಲಾಕ್‌ಡೌನ್’ಗೆ ಕರೆಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ, ಇದೀಗ ದಾಖಲೆ ನಿರ್ಮಿಸಿದೆ. ಐಪಿಎಲ್ ಪೈನಲ್‌ಗಿಂತ ಹೆಚ್ಚು ವೀಕ್ಷಣೆ ಪಡೆದ ಭಾಷಣ ಇದಾಗಿದೆ.
ಹೌದು, ಮೋದಿ ಅವರು ದೇಶವನ್ನುದ್ದೇಶಿಸಿ ಮಾತಾಡುತ್ತಾರೆಂದರೆ, ಜನರಿಗೆ ಏನೋ ಕುತೂಹಲ. ಈ ಹಿಂದೆ ನೋಟು ಅಪನಗದೀಕರಣ ಘೋಷಣೆ, 370 ಕಲಂ ರದ್ದತಿ ಭಾಷಣ, ತೀರಾ ಇತ್ತೀಚೆಗೆ ಮಾಡಿದ್ದಂಥ ಜನತಾ ಕರ್ಫ್ಯೂ ಭಾಷಣಗಳು ಹೆಚ್ಚು ವೀಕ್ಷಣೆಯನ್ನು ಹೊಂದಿದ್ದವು.
ಈಗ ’21 ದಿನಗಳ ಭಾರತ ಲಾಕ್‌ಡೌನ್’ ಭಾಷಣ, ಹಿಂದಿನ ಈ ಎಲ್ಲ ಭಾಷಣಗಳನ್ನೂ ಹಿಂದಿಕ್ಕಿದೆ ಎನ್ನುವ ಮಾಹಿತಿಯನ್ನು ಟೆಲಿವಿಜನ್ ರೇಟಿಂಗ್ ಏಜೆನ್ಸಿ ಬಾರ್ಕ್ ಇಂಡಿಯಾ ನೀಡಿದೆ. ಐಪಿಎಲ್ ಕ್ರಿಕೆಟ್ ಫೈನಲ್, 13.3 ಕೋಟಿ ವೀಕ್ಷಣೆ ಹೊಂದಿದ್ದರೆ, ಲಾಕ್‌ಡೌನ್ ಭಾಷಣಕ್ಕೆ 19.7 ಕೋಟಿ ವೀಕ್ಷಣೆ ಸಿಕ್ಕಿದೆ. ಜನತಾ ಕರ್ಫ್ಯೂ ಭಾಷಣವನ್ನು 8.30 ಕೋಟಿ ಜನ ವೀಕ್ಷಿಸಿದ್ದರು.
ಮೋದಿ ವಿಡಿಯೋ ಕಾನ್ಫರೆನ್ಸ್
ಮೋದಿ ಶುಕ್ರವಾರ ದೇಶದ ರೇಡಿಯೋ ಜಾಕಿಗಳ(ಆರ್‌ಜೆ) ಜತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿ, ಅವರನ್ನು ಅಭಿನಂದಿಸಿದರು. ಕೊರೊನಾ ವೈರಸ್ ಸಾಂಕ್ರಾಮಿಕದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರ್‌ಜೆಗಳು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಅವರನ್ನು ಶ್ಲಾಘಿಸಿದರು. ದೇಶವನ್ನೇ ಲಾಕ್ ಡೌನ್ ಮಾಡಿರುವ ಈ ಸಂದರ್ಭದಲ್ಲಿ ಆರ್‌ಜೆಗಳು ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿಭಾಯಿಸುತ್ತಿದ್ದಾರೆ. ಅವರು ಅಭಿನಂದನಾರ್ಹರು ಎಂದು ಮೋದಿ ಹೇಳಿದರು.