Advertisement

ಬುಲೆಟ್ ರೈಲು, ನೌಕಾ ಸಹಕಾರ ಸೇರಿ 6 ಒಪ್ಪಂದಕ್ಕೆ ಭಾರತ, ಜಪಾನ್ ಸಹಿ

06:18 PM Oct 29, 2018 | Team Udayavani |

ಟೋಕಿಯೋ: ಬುಲೆಟ್ ರೈಲು ಯೋಜನೆ, ನೌಕಾ ಸಹಕಾರ ಸೇರಿದಂತೆ ಭಾರತ ಮತ್ತು ಜಪಾನ್ ಆರು ಮಹತ್ವದ ಒಪ್ಪಂದಗಳಿಗೆ ಸೋಮವಾರ ಸಹಿ ಹಾಕಿದೆ.

Advertisement

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗು ಜಪಾನ್ ಪ್ರಧಾನಿ ಶಿಂಜೋ ಅಬೆ ನಿಯೋಗ ಮಟ್ಟದ ಮಾತುಕತೆ, ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಜಾಗತಿಕ ಸಮಸ್ಯೆಗಳ ಕುರಿತು ಮಾತುಕತೆ ನಡೆಸಿದ ಬಳಿಕ ಆರು ಒಪ್ಪಂದಗಳಿಗೆ ಸಹಿ ಹಾಕಿದರು.

13ನೇ ಶೃಂಗದಲ್ಲಿ ಪ್ರಧಾನಿ ಮೋದಿ ಹಾಗೂ ಜಪಾನ್ ಪ್ರಧಾನಿ ಅಬೆ ಅವರು ನಡೆಸಿದ ದ್ವಿಪಕ್ಷೀಯ ಮಾತುಕತೆಯಲ್ಲಿ ಅಭಿವೃದ್ಧಿಗಳ ಕುರಿತು ಪುನರ್ ಪರಿಶೀಲನೆ ನಡೆಸಿದರು. ಅಲ್ಲದೇ ಇತರ ಕ್ಷೇತ್ರಗಳ ಸಹಕಾರವನ್ನು ಇನ್ನಷ್ಟು ವಿಸ್ತರಿಸುವ ಬಗ್ಗೆ ಚರ್ಚೆ ನಡೆಸಿದರು ಎಂದು ವರದಿ ತಿಳಿಸಿದೆ.

ಅಲ್ಲದೇ ಉಭಯ ದೇಶಗಳ ವಿದೇಶಾಂಗ ಸಚಿವರೂ ಹಾಗೂ ರಕ್ಷಣಾ ಸಚಿವರ ಮಾತುಕತೆಗೆ ಒಪ್ಪಿಗೆ ಸೂಚಿಸಿದರು. ಈ ಮೊದಲು ಅಮೆರಿಕ ಜೊತೆ ಕೂಡಾ ಭಾರತ ಇದೇ ರೀತಿಯ ಒಪ್ಪಂದ ಮಾಡಿಕೊಂಡಿತ್ತು. ಅದರ ಪ್ರಕಾರ ಕಳೆದ ತಿಂಗಳು ದೆಹಲಿಯಲ್ಲಿ ಭಾರತ ಮತ್ತು ಅಮೆರಿಕದ ವಿದೇಶಾಂಗ ಮತ್ತು ರಕ್ಷಣಾ ಸಚಿವರ ನಡುವೆ ಮೊದಲ ಸುತ್ತಿನ ಮಾತುಕತೆ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next