ನವದೆಹಲಿ: ಈಗಲೂ ಪ್ರಧಾನಿ ನರೇಂದ್ರ ಮೋದಿ ಅವರೇ ಜನರಿಗೆ ಅಚ್ಚುಮೆಚ್ಚು! ಅಪನಗದೀಕರಣದ ನಂತರ ಇಂಡಿಯಾ ಟುಡೆ- ಕಾರ್ವಿ ಇನ್‌ಸೈಟ್ಸ್ ಸೇರಿ ದೇಶಾದ್ಯಂತ ಸಮೀಕ್ಷೆ ನಡೆಸಿದ್ದು, ಈಗಲೂ ಪ್ರಧಾನಿ ನರೇಂದ್ರ ಮೋದಿ ಪರವೇ ಅತಿ ಹೆಚ್ಚಿನ ಮತ ಬಿದ್ದಿವೆ. 2019 ಅಲ್ಲ, ಈಗ ಲೋಕಸಭೆ ಚುನಾವಣೆ ನಡೆದರೂ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವೇ ಗೆಲ್ಲಲಿದೆ. ಇದಷ್ಟೇ ಅಲ್ಲ, ಹಿಂದಿಗಿಂತಲೂ ಹೆಚ್ಚಿನ ಸೀಟು ಗಳಿಸಿಕೊಳ್ಳಲಿದೆ ಎಂದು ಈ ಸಮೀಕ್ಷೆ ಭವಿಷ್ಯ ನುಡಿದಿದೆ.
ಸಮೀಕ್ಷೆಯ ಒಳನೋಟ
ಈಗ ಚುನಾವಣೆ ನಡೆದರೆ ಎನ್‌ಡಿಎಗೆ 360 ಸೀಟು. ಕಳೆದ ಆಗಸ್ಟ್‌ನಲ್ಲಿ ನಡೆಸಿದ್ದ ಸಮೀಕ್ಷೆಯ ಫಲಿತಾಂಶಕ್ಕಿಂತ ಈ ಬಾರಿ ಇನ್ನೂ 56 ಸೀಟು ಹೆಚ್ಚು. ಬಿಜೆಪಿಗೇ 305 ಸೀಟುಗಳಲ್ಲಿ ಗೆಲುವು
ಮೋದಿ ಜನಪ್ರಿಯತೆಯ ಪ್ರಮಾಣವೂ ಹೆಚ್ಚಳ. ಇವರೇ ಪ್ರಧಾನಿಯಾಗಿ ಇರಲಿ ಎಂದವರು ಶೇ.65. ಕಳೆದ ಆಗಸ್ಟ್‌ಗೆ ಹೋಲಿಕೆ ಮಾಡಿದರೆ ಶೇ.15 ರಷ್ಟು ಏರಿಕೆ
ಅಪನಗದೀಕರಣದಿಂದ ಕಪ್ಪುಹಣ ನಿಯಂತ್ರಣಕ್ಕೆ ಬರುತ್ತೆ ಎಂದವರು ಶೇ.45. ಆರ್ಥಿಕತೆಗೆ ಸಹಾಯವಾಗುತ್ತೆ ಎಂದವರು ಶೇ.35. ಸರಿ ಎಂದವರು ಶೇ.80 ರಷ್ಟು ಮಂದಿ. ಯೋಜಿತವಾಗಿ ಮಾಡಬಹುದಿತ್ತು ಎಂದವರು ಶೇ.55. ನೋವಾಗಿದೆ ಎಂದವರು ಶೇ.51 ರಷ್ಟು ಮಂದಿ.
ಇದುವರೆಗಿನ ಪ್ರಧಾನಿಗಳಿಗೆ ಹೋಲಿಕೆ ಮಾಡಿ ದರೆ ಮೋದಿಯೇ ಬೆಸ್ಟ್ ಅಂತೆ. ಇವರನ್ನು ಬಿಟ್ಟರೆ ಇಂದಿರಾ, ಅಟಲ್ ಒಳ್ಳೇ ಪ್ರಧಾನಿಗಳು.
ರಾಹುಲ್ ಜನಪ್ರಿಯತೆಯಲ್ಲಿ ಕೊಂಚ ಹೆಚ್ಚಳ. ಕಾಂಗ್ರೆಸ್ ಉಪಾಧ್ಯಕ್ಷರಾಗಿ ರಾಹುಲ್ ಕೆಲಸ ಚೆನ್ನಾಗಿದೆ ಅಥವಾ ಉತ್ತಮವಾಗಿದೆ ಎಂದವರು ಶೇ.39 ರಷ್ಟು ಮಂದಿ. ಮೋದಿಗೆ ಪರ್ಯಾಯ ನಾಯಕರಾಗಿ ಬೆಳೆಯುವ ಶಕ್ತಿ ರಾಹುಲ್‌ಗೆ ಮಾತ್ರ ಇದೆಯಂತೆ. ಹೀಗಂತ ಹೇಳಿದ್ದು ಶೇ.28 ರಷ್ಟು ಮಂದಿ.
ಎನ್‌ಡಿಎ ಮುಂದೆ ಅಧಿಕಾರಕ್ಕೆ ಬರಬೇಕು ಎಂದವರೇ ಹೆಚ್ಚು. ಯುಪಿಎ ಜನಪ್ರಿಯತೆ ಶೇ.25 ರಷ್ಟು ಕುಸಿತ. ಆದರೆ ಮಹಾಘಟಬಂಧನ್ ರೀತಿಯಲ್ಲಿ ಒಗ್ಗೂಡಿದರೆ ಯಶಸ್ಸು ಸಂಭವ ಎಂದವರು ಶೇ.58 ಮಂದಿ.
ಮಹಾಘಟಬಂಧನ್ ಮುನ್ನಡೆಸಲು ಅರವಿಂದ್ ಕೇಜ್ರಿವಾಲ್ ಅವರೇ ಉತ್ತಮ ಅಂತೆ. ಹೀಗಂತ ಹೇಳಿದವರು ಶೇ.11 ಮಂದಿ. ಇವರನ್ನು ಬಿಟ್ಟರೆ ಬಿಹಾರ ಸಿಎಂ ನಿತೀಶ್ ಕುಮಾರ್‌ಗೆ ಬಿದ್ದದ್ದು ಶೇ. 10 ಮತ.