ಚೆನ್ನೈ: ರಾಜಕೀಯಕ್ಕೆ ಸೇರಲ್ಲ ಎಂದು ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಹೇಳುತ್ತಿದ್ದರೂ, ಮುಂದಿನವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ಹೇಳಿವೆ.
ಮುಂದಿನ ವಾರ ಭೇಟಿಯಾಗುವ ಕುರಿತು ಬಿಜೆಪಿ ಮೂಲಗಳು ರಜನಿ ಅವರನ್ನು ಶುಕ್ರವಾರ ಸಂಪರ್ಕಿಸಿವೆ. ಆದರೆ, ಇದರ ಬಗ್ಗೆ ವಿವರಗಳು ಇನ್ನೂ ಅಂತಿಮಗೊಂಡಿಲ್ಲ ಎನ್ನಲಾಗಿದೆ.
ರಜನಿಕಾಂತ್ ಅವರು ಬಿಜೆಪಿ ಸೇರ್ಪಡೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೋ, ಅಥವಾ ಹೊಸ ಪಕ್ಷ ಕಟ್ಟುವ ಬಗ್ಗೆ ನಿರ್ಧಾರ ತಳೆಯುತ್ತಾರೋ ಎಂದು ಗೊತ್ತಾಗಿಲ್ಲ. ಆದರೆ ಮೂಲಗಳ ಪ್ರಕಾರ ಅವರು ಮುಂದಿನ ತಿಂಗಳು ಘೋಷಿಸಲಿರುವ ಹೊಸ ಪಕ್ಷ ಸ್ಥಾಪನೆ ಬಗ್ಗೆ ಪ್ರಧಾನಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಆದರೆ ರಜನಿ-ಪ್ರಧಾನಿ ಅವರ ಭೇಟಿ ಬಗ್ಗೆ ಹೇಳಲು ಬಿಜೆಪಿ ನಿರಾಕರಿಸಿದೆ. ತಮಗೆ ಈ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿವೆ. ತಮಿಳುನಾಡಿನಲ್ಲಿ ರಜನಿ ಅವರ ಆಪೆ¤àಷ್ಟರ ಪ್ರಕಾರ, ರಜನಿ ಅವರು ಬಿಜೆಪಿ ಸೇರ್ಪಡೆ ಬಗ್ಗೆ ಆಗಲಿ, ಹೊಸ ಪಕ್ಷ ಕಟ್ಟುವ ಬಗ್ಗೆ ಆಗಲಿ ಖಚಿತ ನಿರ್ಧಾರ ತೆಗೆದುಕೊಂಡಿಲ್ಲ. ಕಳೆದ ಶುಕ್ರವಾರ ಒ ಪನ್ನೀರ್ ಸೆಲ್ವಂ ಅವರು ಪ್ರಧಾನಿ ಅವರನ್ನು ಭೇಟಿ ಮಾಡಿದ್ದು, ಅದಕ್ಕೆ ಪೂರಕವಾಗಿ ರಜನಿ ಅವರ ಭೇಟಿ ನಡೆಯುತ್ತಿದೆ ಎಂದಷ್ಟೇ ವಿಶ್ಲೇಷಿಸಲಾಗಿದೆ.
ರ
ಜನಿ ತಮ್ಮದೇ ಪಕ್ಷವನ್ನಷ್ಟೇ ಕಟ್ಟಬಲ್ಲರು: ಇದೇ ವೇಳೆ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಸು ತಿರುನುವಕ್ಕರಸರ್, ರಜನಿ ರಾಷ್ಟ್ರೀಯ ಪಕ್ಷ ಅಥವಾ ಪ್ರಾದೇಶಿಕ ಪಕ್ಷ ಸೇರಲ್ಲ. ಅವರು ಸ್ವಂತ ಪಕ್ಷವನ್ನಷ್ಟೇ ಕಟ್ಟಬಲ್ಲರು ಎಂದು ಹೇಳಿದ್ದಾರೆ.