ಹೊಸದಿಲ್ಲಿ: 3ನೇ ಅವಧಿಗೆ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಜೂ.20-21ರಂದು ಜಮ್ಮು -ಕಾಶ್ಮೀರಕ್ಕೆ 2 ದಿನಗಳ ಪ್ರವಾಸ ಕೈಗೊಂಡಿದ್ದಾರೆ.
ಜೂ.21ರರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಿಎಂ ಭಾಗಿಯಾಗಲಿದ್ದಾರೆ.
ಈ ಬಾರಿ “ಯೋಗ ಸ್ವ ಹಿತಕ್ಕೆ ಹಾಗೂ ಸಮಾಜದ ಹಿತಕ್ಕೆ’ ಎಂಬ ಥೀಮ್‌ನಲ್ಲಿ ಯೋಗ ದಿನ ಆಚರಿಸಲಾಗುತ್ತಿದೆ. ಭೇಟಿ ಸಂದರ್ಭದಲ್ಲಿ 1,500 ಕೋಟಿ ರೂ.ವೆಚ್ಚದ 84 ಮುಖ್ಯ ಅಭಿವೃದ್ಧಿ ಯೋಜನೆಗಳು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೇರವೇರಿಸಲಿದ್ದಾರೆ.
ಜೂ.20ರಂದು ಶ್ರೀನಗರದಲ್ಲಿ ಕಣಿವೆಯ ಯುವ ಸಾಧಕರೊಂದಿಗೆ ಪ್ರಧಾನಿ ಸಂವಾದ ನಡೆಸಲಿದ್ದಾರೆ.
ಇದನ್ನೂ ಓದಿ: Hajj: ಬಿಸಿಲ ತಾಪಕ್ಕೆ ಹಜ್ ನಲ್ಲಿ ಮೃತಪಟ್ಟ 640 ಮಂದಿಯಲ್ಲಿ ಭಾರತದ 90 ಯಾತ್ರಿಕರು: ವರದಿ