Advertisement

Kashmir;ಮೊದಲ ಬಾರಿಗೆ ಪಿಎಂ ಮೋದಿ ಯೋಗ ದಿನ!

12:39 AM Jun 21, 2024 | Team Udayavani |

ಶ್ರೀನಗರ: 2014ರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತಿರುವ ಯೋಗ ದಿನವನ್ನು ಪ್ರಧಾನಿ ಮೋದಿ ಈ ಬಾರಿ ಜಮ್ಮು- ಕಾಶ್ಮೀರದಲ್ಲಿ ಆಚರಿಸುತ್ತಿ ದ್ದಾರೆ. ಶುಕ್ರವಾರ ಶ್ರೀನಗರದ ದಾಲ್‌ ಸರೋವರದ ದಂಡೆಯಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಪ್ರಧಾನಿ ಮುನ್ನಡೆಸಲಿದ್ದು, 7000ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Advertisement

ದಾಲ್‌ ಸರೋವರದ ದಂಡೆಯಲ್ಲಿರುವ ಶೇರ್‌-ಎ- ಕಾಶ್ಮೀರ್‌ ಅಂತಾರಾಷ್ಟ್ರೀಯ ಸಭಾಂಗಣ(ಎಸ್‌ಕೆಐಸಿಸಿ) ದಲ್ಲಿ ಬೆಳಗ್ಗೆ 6.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಬಳಿಕ ಜನರನ್ನುದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಕಾರ್ಯ ಕ್ರಮದಲ್ಲಿ ಭಾಗಿಯಾಗುವವರಿಗೆ 3 ದಿನಗಳ ಮುಂಚೆಯೇ ಯೋಗ ಭಂಗಿಗಳ ಬಗ್ಗೆ ತರಬೇತಿ ನೀಡಲಾಗಿದೆೆ. ಪ್ರಧಾನಿ ಭೇಟಿ ಹಿನ್ನೆಲೆ ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ದಶಕದಿಂದ ಪ್ರತೀವರ್ಷ ಜೂ.21ರಂದು ದೇಶದ ವಿವಿಧೆಡೆ ಯೋಗ ದಿನದ ಕಾರ್ಯಕ್ರಮ ಆಯೋಜಿಸಲಾಗುತ್ತದೆ.

“ಯೋಗ- ಸ್ವ ಹಿತ, ಸಮಾಜದ ಹಿತಕ್ಕಾಗಿ’ ಈ ಬಾರಿಯ ಧ್ಯೇಯ
“ಯೋಗ- ಸ್ವ ಹಿತ, ಸಮಾಜದ ಹಿತಕ್ಕಾಗಿ’ ಎಂಬ ಪರಿಕಲ್ಪನೆ ವ್ಯಾಪ್ತಿಯಲ್ಲಿ ಈ ಬಾರಿಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ವೈಯಕ್ತಿಕವಾಗಿ ಮಾತ್ರವಲ್ಲದೇ ಸಾಮಾಜಿಕ ಯೋಗಕ್ಷೇಮವನ್ನೂ ಉತ್ತೇಜಿಸುವಲ್ಲಿ ಯೋಗದ ಪಾತ್ರವನ್ನು ಈ ಥೀಮ್‌ ಸಾರುತ್ತಿದೆ ಎಂದು ಕೇಂದ್ರ ಆಯುಷ್‌ ಖಾತೆ ರಾಜ್ಯ ಸಚಿವ ಪ್ರತಾಪ್‌ ರಾವ್‌ ಜಾಧವ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next