Advertisement

Yoga Day : ನಾಲ್ಯಪದವು ಪ್ರಾಥಮಿಕ ಶಾಲೆಯಲ್ಲಿ ಯೋಗ ದಿನ ಆಚರಣೆ

11:00 AM Jun 22, 2024 | Team Udayavani |

ಮಂಗಳೂರು: ಕುವೆಂಪು ಶತಮಾನೋತ್ಸವ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಾಲ್ಯಪದವು ಶಕ್ತಿನಗರ ಹಾಗೂ ಗ್ಲೆನ್ಮಾರ್ಕ್ ಫಾರ್ಮಾ ಸಹಭಾಗಿತ್ವದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.

Advertisement

ಪದವು 21 ವಾರ್ಡಿನ ಕಾರ್ಪೊರೇಟರ್ ವನಿತಾ ಪ್ರಸಾದ್ ರವರು ಉದ್ಘಾಟಿಸಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆಯ ಬಗ್ಗೆ ಮಾತನಾಡಿದರು. ವಿದ್ಯಾ ದೀವಿಗೆ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ದೇವಾನಂದ ರವರು ಯೋಗದ ಮಹತ್ವ ದ ಬಗ್ಗೆ ಮಾತನಾಡಿದರು. ವಿದ್ಯಾ ದೀವಿಗೆ ಚಾರಿಟಬಲ್ ಟ್ರಸ್ಟ್ ನ ಕಾರ್ಯದರ್ಶಿ ರವೀಂದ್ರ ರೈರವರು ಯೋಗಾಸನ ಹಾಗೂ ಭಾರತೀಯ ಸಂಸ್ಕೃತಿಯ ಮಹತ್ವದ ಬಗ್ಗೆ ಹಿತ ನುಡಿದರು. ಯೋಗ ಶಿಕ್ಷಕ ರಾಜೇಶ್ ರವರನ್ನು ಶಾಲೆ ಹಾಗೂ ಗ್ಲೆನ್ಮಾರ್ಕ್ ಫಾರ್ಮಾ ವತಿಯಿಂದ ಸನ್ಮಾನಿಸಲಾಯಿತು.

ಕಿಶೋರ್ ಜೆ ರವರು ಅಧ್ಯಕ್ಷೀಯ ನುಡಿಯನ್ನು ನುಡಿದರು. ವಿದ್ಯಾ ದೀವಿಗೆ ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷ ಟೋನಿ ಪಿಂಟೋ, ಗ್ಲೆನ್ಮಾರ್ಕ್ ಫಾರ್ಮಾದ ವ್ಯವಸ್ಥಾಪಕ ರವಿರಾಜ್, ಸಹಾಯಕ ಅವಿನಾಶ್ ಎಸ್‌ಡಿಎಂಸಿ ಸದಸ್ಯರಾದ ಪ್ರಮೀಳಾ ಹಾಗೂ ಆರತಿ, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ನಂತರ ಯೋಗ ಶಿಕ್ಷಕ ರಾಜೇಶ ರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಪ್ರಾರ್ಥನೆ, ಪ್ರಾಣಾಯಾಮದೊಂದಿಗೆ ಆರಂಭವಾಯಿತು. ಸೂರ್ಯನಮಸ್ಕಾರ, ತಾಡಾಸನ, ಉತ್ಕಟಾಸನ, ಪಾದಹಸ್ತಾಸನ, ತ್ರಿಕೋನಾಸನ, ಭದ್ರಾಸನ, ವಜ್ರಾಸನ, ಉಷ್ಟ್ರಾಸನ, ಮಕರಾಸನ, ಶಲಭಾಸನ, ಭುಜಂಗಾಸನ, ಶವಾಸನಗಳನ್ನು ಮಾಡಿಸಲಾಯಿತು.

Advertisement

ಶಾಲೆಯ ಪ್ರಭಾರಿ ಮುಖ್ಯೋಪಾಧ್ಯ ಗೋಪಾಲ್ ಟಿ ಸ್ವಾಗತಿಸಿದರು. ಶಿಕ್ಷಕ ಗಜಾನನ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕರಾದ ವಿಲಾಸಿನಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next