Advertisement

Anantapur: ಯೋಗ ದಿನಾಚರಣೆ ಅಂಗವಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಯೋಗಭ್ಯಾಸ

12:23 PM Jun 21, 2024 | Team Udayavani |

ಆನಂದಪುರ: ಯೋಗವನ್ನು ಚಿಕ್ಕವಯಸ್ಸಿನಿಂದಲೇ ಪ್ರತಿಯೊಬ್ಬ ವಿದ್ಯಾರ್ಥಿಗಳು ರೂಢಿಸಿಕೊಳ್ಳುವುದರಿಂದ ಬಹಳಷ್ಟು ಅನುಕೂಲಗಳಿವೆ ಎಂದು ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲ ಈಶ್ವರಪ್ಪ ಹೇಳಿದರು.

Advertisement

ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಯೋಗ ಅಭ್ಯಾಸವನ್ನು ವಿದ್ಯಾರ್ಥಿಗಳಿಗೆ ಮಾಡಿಸಲಾಯಿತು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಯೋಗ ಮಾಡುವುದರಿಂದ ಮನಸ್ಸು ಮತ್ತು ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಬಹುದು. ಯೋಗದಿಂದ ಸಕಲವೂ ಸಾಧಿಸಬಹದು. ಇದನ್ನು ವಿದ್ಯಾರ್ಥಿಗಳು ದಿನನಿತ್ಯ ಮನೆಯಲ್ಲಿ ಮಾಡಬೇಕು ಎಂದು ಹೇಳಿದರು.

ದೈಹಿಕ ಶಿಕ್ಷಕ ನಟರಾಜ್ ಕೆ.ಆರ್. ಮಾತನಾಡಿ, ಯೋಗ ದೈಹಿಕ ಭಂಗಿಗಳು, ಉಸಿರಾಡದ ತಂತ್ರಗಳು, ಧ್ಯಾನ, ನೈತಿಕ ತತ್ವ ಸಂಯೋಜಿಸುವ ಒಂದು ಆರೋಗ್ಯ ವಿಧಾನವಾಗಿದೆ. ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಕೀರ್ತಿ ಭಾರತಕ್ಕಿದೆ. ಪುರಾತನ ಕಾಲದಲ್ಲಿ ಮಹರ್ಷಿಗಳು ಮತ್ತು ಪಂಡಿತರು ಯೋಗಾಭ್ಯಾಸದಿಂದ ಹಲವಾರು ಯಶಸ್ಸನ್ನು ಸಾಧಿಸಿದ್ದಾರೆ. ಹೀಗೆ ಯೋಗ ಮಾಡುವುದರಿಂದ ನಾವು ಸುಖಕರವಾದ, ಆರೋಗ್ಯವಾದ ಜೀವನ ನಡೆಸಬಹುದಾಗಿದೆ ಎಂದು ಯೋಗದ ಹಲವಾರು ಭಂಗಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಡಿ ತೋರಿಸುತ್ತಾ ಹೇಳಿಕೊಟ್ಟರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಶಾಂತ, ಶ್ರೀನಿವಾಸ್ ಸಿಂಗ್, ಅಶ್ವಿನ್, ಶಿವಮೂರ್ತಿ, ಶ್ರೀನಿವಾಸ್, ಸುಷ್ಮಾ, ಇಂದಿರಾ ಹಾಗೂ ಗಾಯಿತ್ರಿ ಬಡಿಗೇರ್ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next