Advertisement

ಕೋವಿಡ್ ಸೋಂಕು ಹರಡುವಿಕೆ ವಿರುದ್ಧ ಪುಟ್ಟ ಮಕ್ಕಳಿಂದ ದೊಡ್ಡ ಪಾಠ: ಪ್ರಧಾನಿ ಮೋದಿ ಮೆಚ್ಚುಗೆ

12:10 PM Apr 17, 2020 | Hari Prasad |

ನವದೆಹಲಿ: ಕೋವಿಡ್ ವೈರಸ್‌ ಸೋಂಕು ಹರಡದಂತೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಎಷ್ಟು ಮುಖ್ಯ ಎಂಬ ಬಗ್ಗೆ ಪುಟ್ಟ ಮಕ್ಕಳು ನಮಗೆ ದೊಡ್ಡ ಪಾಠ ಕಲಿಸಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಮಹತ್ವ ತಿಳಿಸಿಕೊಡಲು ಮಕ್ಕಳು ಪ್ರಾತ್ಯಕ್ಷಿಕೆ ನೀಡಿರುವ 60 ಸೆಕೆಂಡುಗಳ ವಿಡಿಯೋ ಒಂದನ್ನು ಟ್ವೀಟ್‌ ಮಾಡಿರುವ  ಪ್ರಧಾನಿ ಮೋದಿ, ಆಟದ ಮೂಲಕ ಮಕ್ಕಳು ಕಲಿಸಿಕೊಟ್ಟಿರುವ ಪಾಠ, ನಾವು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಈ ಮಾರಕ ಸೋಂಕಿನಿಂದ ಸುರಕ್ಷಿತವಾಗಿರಬೇಕು ಎಂಬ ಬಗ್ಗೆ ಪರಿಣಾಮಕಾರಿ ಸಂದೇಶ ರವಾನಿಸುತ್ತದೆ ಎಂದಿದ್ದಾರೆ.

ವಿಡಿಯೋದಲ್ಲಿ ಐವರು ಮಕ್ಕಳು ರಸ್ತೆಯಲ್ಲಿ ಕೆಂಪು ಇಟ್ಟಿಗೆಗಳನ್ನು ಒಂದರ ಮುಂದೆ ಮತ್ತೂಂದರಂತೆ ನಿಲ್ಲಿಸಿ, ಮೊದಲ ಇಟ್ಟಿಗೆಯನ್ನು ಬೀಳಿಸುತ್ತಾರೆ. ಇಟ್ಟಿಗೆಗಳು ಪರಸ್ಪರ ಒಂದಕ್ಕೊಂದು ತಾಗಿ ಬೀಳುತ್ತಾ ಹೋಗುತ್ತವೆ.

ಎಲ್ಲ ಇಟ್ಟಿಗೆಗಳೂ ಬಿದ್ದ ಬಳಿಕ ಮತ್ತದೇ ರೀತಿ ಇಟ್ಟಿಗೆಗಳನ್ನು ಜೋಡಿಸುವ ಮಕ್ಕಳು ಮತ್ತೆ ಮೊದಲ ಇಟ್ಟಿಗೆಯನ್ನು ಬೀಳಿಸುತ್ತಾರೆ. ಈ ವೇಳೆ ಇಟ್ಟಿಗೆಗಳು ಒಂದಕ್ಕೊಂದು ತಾಗಿ ಬೀಳುತ್ತಿರುವಾಗ ಬಾಲಕನೊಬ್ಬ ಮಧ್ಯದಲ್ಲಿನ ಒಂದು ಇಟ್ಟಿಗೆಯನ್ನು ತೆಗೆಯುತ್ತಾನೆ.

ಇಟ್ಟಿಗೆಗಳ ಬೀಳುವಿಕೆ ಅಲ್ಲಿಗೇ ನಿಲ್ಲುತ್ತದೆ. ಹಾಗೇ ನಾವುಗಳೂ ಸಾಮಾಜಿಕ ಅಂತರ ಕಾಯ್ದುಕೊಂಡರೆ ಈ ವೈರಸ್ ಹರಡುವುದನ್ನು ತಡೆಗಟ್ಟಬಹುದು ಎಂಬ ಸಂದೇಶವನ್ನು ಮಕ್ಕಳು ನೀಡುತ್ತಾರೆ. ಮಕ್ಕಳ ಈ ಕ್ರಿಯಾಶೀಲ ಚಿಂತನೆ ಇದೀಗ ಪ್ರಧಾನಿ ಮೋದಿ ಅವರ ಗಮನವನ್ನು ಸೆಳೆದಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next