Advertisement

ಶಾಲಾ ಮಕ್ಕಳೊಂದಿಗೆ 68ನೇ ಹುಟ್ಟುಹಬ್ಬ: ಮೋದಿ ಇಂದು ವಾರಾಣಸಿಗೆ

11:37 AM Sep 17, 2018 | udayavani editorial |

ಹೊಸದಿಲ್ಲಿ  : ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ 68ನೇ ಹುಟ್ಟುಹಬ್ಬವನ್ನು ತಮ್ಮ ಲೋಕಸಭಾ ಕ್ಷೇತ್ರವಾಗಿರುವ ವಾರಾಣಸಿಯಲ್ಲಿ ಆಚರಿಸಿಕೊಳ್ಳಲು ಅಲ್ಲಿಗೆ ಹೋಗಲಿದ್ದಾರೆ. 

Advertisement

ಪ್ರಧಾನಿ ಮೋದಿ ತಮ್ಮ ಹುಟ್ಟು ಹಬ್ಬವನ್ನು ವಾರಾಣಸಿ ಜಿಲ್ಲೆಯ ಶಾಲಾ ಮಕ್ಕಳೊಂದಿಗೆ ಆಚರಿಸುವರೆಂದು ಮೂಲಗಳು ತಿಳಿಸಿವೆ. 

ಇಂದು ಸೋಮವಾರ ಮಧ್ಯಾಹ್ನದ ವೇಳೆಗೆ ಪ್ರಧಾನಿ ಮೋದಿ ಅವರು ವಾರಾಣಸಿ ತಲುಪಲಿದ್ದಾರೆ. ಬಿಜೆಪಿಯ ಅತ್ಯಂತ ಬಲಿಷ್ಠ ನಾಯಕ ಎನಿಸಿಕೊಂಡರುವ ಪ್ರಧಾನಿ ಮೋದಿ ಅವರಗೆ ಅದ್ದೂರಿಯ ಸ್ವಾಗತ ನೀಡಲು ವಾರಾಣಸಿಯಲ್ಲಿ ಭರದಿಂದ ಸಿದ್ಧತೆಗಳು ನಡೆಯುತ್ತಿವೆ. 

ಈ ಸಂದರ್ಭದಲ್ಲಿ ಮೋದಿ ಅವರು ತಾವು ದತ್ತು ಪಡೆದಿರುವ ವಾರಾಣಸಿ ಕ್ಷೇತ್ರದ ಜಯಪುರ, ನಾಗೇಪುರ ಮತ್ತು ಕಕ್ರಾಹಿಯಾ ಗ್ರಾಮಗಳಿಗೂ ಭೇಟಿ ಕೊಡುತ್ತಾರೆ. 

ಈ ಸಂದರ್ಭದಲ್ಲಿ ಮೋದಿ ಜೀವನ ಗಾಥೆಯನ್ನು ಆಧರಿಸಿ ತಯಾರಿಸಲಾಗಿರುವ ಚಲೋ ಜೀತೇಂ ಹೈಂ ಎಂಬ ಚಿತ್ರವನ್ನೂ ಪ್ರದರ್ಶಿಸಲಾಗುವುದು ಎಂದು ಮೂಲಗಳು ತಿಳಿಸಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next