Advertisement

ವಾರಾಣಸಿಗೆ ಇಂದು ಪಿಎಂ

08:05 AM Nov 12, 2018 | Team Udayavani |

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡು ಪ್ರಮುಖ ಹೆದ್ದಾರಿ ಹಾಗೂ ಒಂದು ಒಳನಾಡು ಸಾರಿಗೆ ಯೋಜನೆಗೆ ಸೋಮವಾರ ಚಾಲನೆ ನೀಡಲಿದ್ದಾರೆ. ಒಟ್ಟು 1, 571 ಕೋಟಿ ರೂ. ವೆಚ್ಚದಲ್ಲಿ 34 ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ವಾರಾಣಸಿ ನಗರದಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಅವಧಿ ಕಡಿಮೆಯಾಗಲಿದೆ. ಇನ್ನೊಂದೆಡೆ ಜಲ ಮಾರ್ಗ ವಿಕಾಸ ಯೋಜನೆ ಅಡಿಯಲ್ಲಿ ಗಂಗಾ ನದಿಯಲ್ಲಿ ಒಳನಾಡು ಸಾರಿಗೆ ಉದ್ಘಾಟನೆ ಮಾಡಲಿದ್ದಾರೆ. ಈ ಮಾರ್ಗವು ವಾರಾಣಸಿಯಿಂದ ಹಲ್ದಿಯಾಗೆ ಸಂಪರ್ಕ ಕಲ್ಪಿಸಲಿದೆ. ವಿಶ್ವ ಬ್ಯಾಂಕ್‌ ನೆರವಿನಿಂದ ಈ ಒಳನಾಡು ಮಾರ್ಗವನ್ನು ಅಭಿವೃದ್ಧಿಪಡಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next