Advertisement
ಅಲ್ಲದೆ ವಿಪಕ್ಷಗಳು ತೃತೀಯ ರಂಗ ರಚಿಸುತ್ತಿರುವ ಬಗ್ಗೆ ವ್ಯಂಗ್ಯವಾಡಿದ ಮೋದಿ, ಹಲವು ದಳಗಳು ಸೇರಿದರೆ ಕಮಲ ಅರಳುವುದಕ್ಕೆ ಅನುಕೂಲವಾಗುತ್ತದೆ ಎಂದಿದ್ದಾರೆ. ಲೋಕಸಭೆಯಲ್ಲಿ ನಿನ್ನೆ ಏನು ನಡೆಯಿತು ಎಂದು ನೀವು ನೋಡಿದ್ದೀರಲ್ಲವೇ? ನಿಮಗೆ ಸರಿ ಎನಿಸಿತೇ? ಕಾಂಗ್ರೆಸ್‌ಗೆ ಬಡವರು ಕಾಣುವುದಿಲ್ಲ. ಅವರಿಗೆ ಕೇವಲ ಪ್ರಧಾನಿ ಕುರ್ಚಿಯ ಮೇಲೆ ಮಾತ್ರವೇ ಕಣ್ಣು ಎಂದಿದ್ದಾರೆ. ನಾನೇನಾದರೂ ತಪ್ಪು ಮಾಡಿದ್ದೇನೆಯೇ? ದೇಶಕ್ಕಾಗಿ ಹಾಗೂ ಬಡವರಿಗಾಗಿ ಕೆಲಸ ಮಾಡುತ್ತಿದ್ದೇನೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವುದೇ ನಾನು ಮಾಡಿದ ಅಪರಾಧ ಎಂದು ಅವರು ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಸರಕಾರವು ಕಬ್ಬಿನ ತ್ಯಾಜ್ಯ ಹಾಗೂ ರಸದಿಂದ ಎಥನಾಲ್ ನಿರ್ಮಾಣ ಮಾಡಲು ಮಿಲ್‌ಗಳಿಗೆ ಅವಕಾಶ ನೀಡುತ್ತಿದೆ. ಇದು ಡಿಸೆಂಬರ್ 1 ರಿಂದ ಜಾರಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ.
ರಫೇಲ್ ಡೀಲ್ ವಿಚಾರದಲ್ಲಿ ಸುಳ್ಳು ಆರೋಪ ಮಾಡಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಹೆಸರು ಉಲ್ಲೇಖೀಸುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಭಾರತದ ರಾಜಕಾರಣಿಗಳ ಗೌರವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಘಾಸಿಗೊಳಿಸಿದ್ದಾರೆ ಎಂದು ಕೇಂದ್ರ ಸಚಿವ ಅರುಣ್ ಜೇಟಿÉ ಹೇಳಿದ್ದಾರೆ. ಶುಕ್ರವಾರ ಸದನದಲ್ಲಿ ರಾಹುಲ್, ರಫೇಲ್ ಡೀಲ್‌ನಲ್ಲಿ ಬೆಲೆ ಮಾಹಿತಿ ಗೌಪ್ಯವಾಗಿರಿಸುವ ಷರತ್ತುಗಳಿಲ್ಲ ಎಂದು ಫ್ರಾನ್ಸ್ ಅಧ್ಯಕ್ಷರೇ ನನಗೆ ಹೇಳಿದ್ದಾರೆ ಎಂದು ಹೇಳಿದ್ದರು. ಶನಿವಾರ ಫೇಸ್‌ಬುಕ್‌ನಲ್ಲಿ ಈ ಕುರಿತು ಬರೆದುಕೊಂಡಿರುವ ಜೇಟ್ಲಿ, ರಾಹುಲ್ ತನ್ನ ವಿಶ್ವಾಸಾರ್ಹತೆ ಕಳೆದುಕೊಳ್ಳುವ ಜೊತೆಗೆ ಭಾರತೀಯ ರಾಜಕಾರಣಿಗಳ ಗೌರವಕ್ಕೂ ಗಂಭೀರ ಧಕ್ಕೆ ಉಂಟು ಮಾಡಿದ್ದಾರೆ. ಪ್ರಧಾನಿಯಾಗುವ ನಿರೀಕ್ಷೆಯಿದ್ದವರು ಅಜ್ಞಾನ, ಸುಳ್ಳು ಹಾಗೂ ಸರ್ಕಸ್‌ನ ಮೊರೆ ಹೋಗಬಾರದು. ಅವಿಶ್ವಾಸ ಗೊತ್ತುವಳಿ ಎಂಬುದು ಗಂಭೀರ ಸಂಗತಿ. ಸರಕಾರ, ದೇಶದ ಮುಖ್ಯಸ್ಥರ ಜೊತೆಗೆ ಆಡಿದ ಮಾತನ್ನು ತಪ್ಪಾಗಿ ಉಲ್ಲೇಖೀಸಿದರೆ, ಮುಂದೆ ನಿಮ್ಮೊಂದಿಗೆ ಮಾತನಾಡಲು ಯಾವುದೇ ಮುಖಂಡರು ಹಿಂಜರಿಯುತ್ತಾರೆ. ಅವಿಶ್ವಾಸ ಗೊತ್ತುವಳಿ ವೇಳೆ ನಿಮ್ಮ ಮಾತೇ ಪಕ್ಷದ ಅಧಿಕೃತ ಚರ್ಚೆಯ ವಿಷಯವಾಗಿದ್ದರೆ, ನಿಮ್ಮ ಪಕ್ಷವನ್ನು ದೇವರೇ ರಕ್ಷಿಸಬೇಕು ಎಂದಿದ್ದಾರೆ.. ಇದಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ದಿವ್ಯಸ್ಪಂದನ, “ಜೇಟ್ಲಿ ಅವರಿಗೂ ಅಪ್ಪುಗೆಯ ಅಗತ್ಯವಿದೆ’ ಎಂದಿದ್ದಾರೆ. ಪ್ರಧಾನಿ ಅವರ ಭಾಷಣ ದ್ವೇಷ, ಭಯ ಹಾಗೂ ಕೋಪದಿಂದ ಕೂಡಿತ್ತು. ಆದರೆ ಕಾಂಗ್ರೆಸ್ ಪ್ರೀತಿ, ಸಹಾನುಭೂತಿ ಯಿಂದ ದೇಶದ ಜನರ ಮನಗೆದ್ದಿದೆ. ಇದರಿಂದ ಮಾತ್ರ ದೇಶ ನಿರ್ಮಾಣ ಸಾಧ್ಯ. ಪ್ರಜೆಗಳ ಹೃದಯ ಗೆಲ್ಲಲೂ ಸಾಧ್ಯ.
ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
Related Articles
ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ
Advertisement
ಮೋದಿ ನಮ್ಮ ರಾಜ್ಯದ ಜನರ ಭಾವನೆಗಳನ್ನು ಅರ್ಥಮಾಡಿ ಕೊಳ್ಳ ಲಿಲ್ಲ. 2019ರಲ್ಲಿ ಮತ್ತೆ ಎನ್‌ಡಿಎ ತೆಕ್ಕೆಗೆ ಟಿಡಿಪಿ ಹೋಗುವುದಿಲ್ಲ. ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ ಸಿಎಂ