Advertisement

ಅನಂತಕುಮಾರ್ ಅಂತಿಮ ದರ್ಶನ ಪಡೆದ ಪ್ರಧಾನಿ ಮೋದಿ

09:23 PM Nov 12, 2018 | Team Udayavani |

ಬೆಂಗಳೂರು: ಸೋಮವಾರ ನಿಧನರಾದ ಕೇಂದ್ರ ಸಚಿವ ಮತ್ತು ಬಿ.ಜೆ.ಪಿ.ಯ ಹಿರಿಯ ನಾಯಕ ಅನಂತಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಸೋಮವಾರ ರಾತ್ರಿ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಕಾಲಿಕವಾಗಿ ಅಗಲಿದ ತಮ್ಮ ಸಂಪುಟ ಸಹೋದ್ಯೋಗಿ ಮತ್ತು ಬಹುಕಾಲದ ರಾಜಕೀಯ ಒಡನಾಡಿಗೆ ಕಂಬನಿ ತುಂಬಿದ ನಮನವನ್ನು ಸಲ್ಲಿಸಿದರು.

Advertisement

ವಾರಾಣಾಸಿಯಲ್ಲಿ ಪೂರ್ವನಿಗದಿಯಾಗಿದ್ದ ಕಾರ್ಯಕ್ರಮವನ್ನು ಮುಗಿಸಿಕೊಂಡು ನೇರವಾಗಿ ಬೆಂಗಳೂರಿನ HAL ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಅಲ್ಲಿಂದ ನೇರವಾಗಿ ಬಿಗಿ ಭದ್ರತೆಯಲ್ಲಿ ಬಸವನಗುಡಿಯಲ್ಲಿರುವ ಅನಂತಕುಮಾರ್ ಅವರ ನಿವಾಸ ‘ಸುಮೇರು’ವಿಗೆ ಆಗಮಿಸಿದರು. ಬಳಿಕ ಅನಂತ ಕುಮಾರ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಕೆಲಹೊತ್ತು ಮೌನವಾಗಿ ನಿಂತರು. ಬಳಿಕ ಅನಂತ ಕುಮಾರ್ ಅವರ ಪತ್ನಿ, ಪುತ್ರಿಯರು ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವನವನ್ನು ಹೆಳಿದರು.

HAL ವಿಮಾನ ನಿಲ್ದಾಣದಲ್ಲಿ ಪ್ರಧಾನಿಯವರನ್ನು ಮುಖ್ಯಂತ್ರಿ ಕುಮಾರಸ್ವಾಮಿ ಹಾಗೂ ರಾಜ್ಯಪಾಲ ವಜೂಭಾಯಿ ವಾಲಾ ಅವರು ಔಪಚಾರಿಕವಾಗಿ ಸ್ವಾಗತಿಸಿದರು.




ಚಿತ್ರ: ಫಕ್ರುದ್ದಿನ್ 

Advertisement

Udayavani is now on Telegram. Click here to join our channel and stay updated with the latest news.

Next