Advertisement

ಯುವಶಕ್ತಿ ಮೇಲೆ ಪ್ರಧಾನಿ ಮೋದಿಗೆ ಅಪಾರ ಭರವಸೆ

12:37 PM May 30, 2017 | Team Udayavani |

ಯಲಹಂಕ: ಯುವಜನತೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಅಪಾರವಾದಂತಹ ಭರವಸೆ ಹೊಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ಯಲಹಂಕ ಉಪನಗರದ ವೀರಶೈವ ಈಶ್ವರ ಸೇವಾ ಸಮಿತಿ ಜಾnನಜ್ಯೋತಿ ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಮತ್ತು ಸ್ನಾತಕೋತ್ತರ ಪದವಿ ಕಾಲೇಜಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಹಾಗೂ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

Advertisement

ಕೇಂದ್ರ ಸರ್ಕಾರ ಯುವ ಸಮುದಾಯದ ಕ್ಷೇಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ವಿದ್ಯಾರ್ಥಿಗಳು ಮತ್ತು ಯುವ ಜನಾಂಗ ಸದುಪಯೋಗಪಡಿಸಿಕೊಳ್ಳಿ ಎಂದರು. ವ್ಯಕ್ತಿಯಲ್ಲಿ  ಈ ಮೊದಲೇ ಹುದುಗಿರಬಹುದಾದಂತಹ ದಿವ್ಯ ಶಕ್ತಿಯನ್ನು ಪ್ರಕಟಗೊಳಿಸುವುದೇ ಶಿಕ್ಷಣದ ನಿಜವಾದ ಕಾರ್ಯ ಎಂಬ ಸ್ವಾಮಿ ವಿವೇಕಾನಂದರ ಸಂದೇಶ ಸಾರಿದರು.

ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನ ರಾಷ್ಟ್ರದ ಸಂಪತ್ತನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಬಸವಣ್ಣರು ಕಂಡ ಕನಸಿನಂತೆ ಸಮಾಜದ ಎಲ್ಲ ವರ್ಗದ ಜನರಿಗೆ ದುರ್ಬಲ ವರ್ಗದವರಿಗೆ, ದಲಿತರಿಗೆ, ಶೋಷಿತರಿಗೆ ಎಲ್ಲರಿಗೂ ಕೂಡ ಅತ್ಯಂತ ಕಡಿಮೆ ವೆಚ್ಚದಲ್ಲಿ ವ್ಯವಸ್ಥಿತವಾದಂತಹ ಉತ್ತಮ ಶಿಕ್ಷಣ ಸಿಗಬೇಕು ತಿಳಿಸಿದರು. 

ನಿವೃತ್ತ ಕೆಎಎಸ್‌ ಅಧಿಕಾರಿ ಸೋಮಶೇಖರ್‌, ನಿವೃತ್ತ ಐಪಿಎಸ್‌ ಅಧಿಕಾರಿ ಜ್ಯೋತಿ ಪ್ರಕಾಶ್‌ ಮಿರ್ಜಿ, ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌. ಆರ್‌. ವಿಶ್ವನಾಥ್‌, ಜಾnನಜ್ಯೋತಿ ವಿದ್ಯಾಸಂಸ್ಥೆಯ ವೀರಶೈವ ಶ್ರೀ ಈಶ್ವರ ಸೇವಾ ಸಮಿತಿಯ ಅಧ್ಯಕ್ಷ ಎಂ.ಆರ್‌. ಶಿವರುದ್ರಯ್ಯ, ಕಾರ್ಯದರ್ಶಿ ಎನ್‌. ಎಂ. ರುದ್ರಮೂರ್ತಿ, ಪ್ರಾಂಶುಪಾಲ ವಿ.ಎಸ್‌. ನಂಜುಂಡಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next