Advertisement

ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆಗೆ ಪ್ರಧಾನಿ ಮೋದಿ ಶಿಲಾನ್ಯಾಸ

06:15 AM Mar 18, 2018 | Team Udayavani |

ರಾಯಚೂರು: ನವದೆಹಲಿಯಲ್ಲಿ ಶನಿವಾರ ನಡೆದ ಕೃಷಿ ಉನ್ನತಿ ಮೇಳದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ 25 ಕೇಂದ್ರಗಳಲ್ಲಿ ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಿದ್ದು, ಅದರಲ್ಲಿ ಯಾದಗಿರಿ ಜಿಲ್ಲೆಯ ಕವಾಡಿಮಟ್ಟಿ ಕೂಡ ಸೇರಿದೆ.

Advertisement

ಈ ಸಮಾರಂಭವನ್ನು ಕಣ್ತುಂಬಿಕೊಳ್ಳಲು ನಗರದ ಕೃಷಿ ವಿವಿಯ ಪ್ರೇûಾಗೃಹದಲ್ಲಿ ವಿಡಿಯೋ ಕಾನ್ಫರೆನ್ಸ್‌ಗೆ ಅವಕಾಶ ಮಾಡಿಕೊಡಲಾಗಿತ್ತು. ರಾಯಚೂರು ಕೃಷಿ ವಿವಿ ವ್ಯಾಪ್ತಿಯಲ್ಲಿ ಬರುವ ಕವಾಡಿಮಟ್ಟಿಯಲ್ಲಿ ಈಗಾಗಲೇ ಸಂಶೋಧನಾ ಕೇಂದ್ರವಿದ್ದು, ಐವರು ವಿಜ್ಞಾನಿಗಳು ಕಾರ್ಯ ನಿರ್ವಹಿಸು ತ್ತಿದ್ದಾರೆ. ಐಸಿಆರ್‌ ಅನುದಾನದಲ್ಲಿ ಹೊಸದಾಗಿ 25 ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿದೆ.

ಶನಿವಾರ ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಕಳೆದ ವರ್ಷ ರೈತರಿಗೆ 10 ಲಕ್ಷ ಕೋಟಿ ರೂ. ಕೃಷಿ ಸಾಲ ನೀಡಿದ್ದು, ಪ್ರಸಕ್ತ ಸಾಲಿನಿಂದ 11ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ರೈತರು ಕೃಷಿಯಲ್ಲಿ ಹೆಚ್ಚು ತಂತ್ರಜ್ಞಾನ ಅಳವಡಿಕೆಗೆ ಒತ್ತು ನೀಡಬೇಕು ಎಂದರು. ರೈತರು ಕೃಷಿಯ ನಿರುಪಯುಕ್ತ ವಸ್ತುಗಳನ್ನು ಹೊಲದಲ್ಲಿ ಸುಡುವ ಮೂಲಕ ಪರಿಸರ ಹಾನಿಗೆ ಕಾರಣವಾಗುತ್ತಿದ್ದೀರಿ. ಅದು ತ್ಯಾಜ್ಯ ಎಂದು ಪರಿಗಣಿಸದೆ ಅದರಲ್ಲಿನ ಪೌಷ್ಟಿಕಾಂಶಗಳನ್ನು ಭೂಮಿಗೆ ತಲುಪುವ ಹಾಗೆ ನೋಡಿಕೊಳ್ಳಬೇಕು.

ಮೇಘಾಲಯದಂಥ ಚಿಕ್ಕ ರಾಜ್ಯದಲ್ಲಿ ರೈತರು ಕೃಷಿಯಲ್ಲಿ ಕ್ರಾಂತಿ ಮಾಡುತ್ತಿದ್ದಾರೆ. ಸಾವಯವ ಕೃಷಿಯಲ್ಲಿ ಲಾಭ ಕಂಡುಕೊಂಡಿದ್ದಾರೆ. ಆ ರೈತರನ್ನು ಅರ್ಥ ಮಾಡಿಕೊಳ್ಳಬೇಕು. ಕೃಷಿ ವಿಜ್ಞಾನಿಗಳು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸಂಶೋಧನೆಗಳನ್ನು
ಮಾಡಬೇಕೆಂದರು.

ಕೃಷಿ ವಿವಿ ಕಡೆಯಿಂದ ಯೋಜನಾ ಸಂಯೋಜಕ ಡಾ|ಮಲ್ಲಿಕಾರ್ಜುನ ಚಂಗನಾಳ, ವಿಸ್ತರಣಾ ನಿರ್ದೇಶಕ ಡಾ| ಎಸ್‌.ಕೆ.ಮೇಟಿ ಪ್ರತಿನಿಧಿಗಳಾಗಿ ಪಾಲ್ಗೊಂಡಿದ್ದರು ಎಂದು ಪ್ರಭಾರ ಕುಲಪತಿ ಗುತ್ತ ಜಂಬುನಾಥ ತಿಳಿಸಿದರು.

Advertisement

ಪ್ರತಿಪಕ್ಷಗಳಿಂದ ಗೊಂದಲ
ನವದೆಹಲಿ:
ರೈತರು ಬೆಳೆದ ಬೆಳೆಗಳಿಗೆ ಬಜೆಟ್‌ನಲ್ಲಿ ಕನಿಷ್ಠ ದರ ನಿಗದಿಪಡಿಸಿರುವು ದರ ಕುರಿತು ಘೋಷಣೆ ಮಾಡಿರುವು
ದರ ಬಗ್ಗೆ ಪ್ರತಿಪಕ್ಷಗಳು ಗೊಂದಲ ಮೂಡಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. “ಕೃಷಿ ಉನ್ನತಿ
ಮೇಳ 2018’ನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ರಾಜ್ಯ ಸರ್ಕಾರಗಳ ಜತೆಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ನಿಗದಿ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಮಾತುಕತೆ ಆರಂಭಿಸಿದೆ ಎಂದಿದ್ದಾರೆ.

ಕೇಂದ್ರ ಬಜೆಟ್‌ನಲ್ಲಿ ರೈತರ ಬೆಳೆಯ 1.5 ರಷ್ಟು ಹೆಚ್ಚು ಉತ್ಪಾದನಾ ವೆಚ್ಚವನ್ನು ಬೆಂಬಲ ಬೆಲೆಯಾಗಿ ನೀಡುವ ಬಗ್ಗೆ ಘೋಷಣೆ ಮಾಡಲಾಗಿತ್ತು. ಆದರೆ ಕೆಲವರು (ಪ್ರತಿಪಕ್ಷಗಳು) ಈ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಅದರಲ್ಲಿ ರೈತರು ಮತ್ತು ಕಾರ್ಮಿಕರ ಕೂಲಿಯೂ ಸೇರಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next