Advertisement
ನಾನು ನಡೆದು ಬಂದ ಹಾದಿ, ಹಿನ್ನೆಲೆ, ನನ್ನ ವ್ಯಕ್ತಿತ್ವವನ್ನು ತಿಳಿದುಕೊಂಡೇ ಅವರು ನನ್ನ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತಿದೆ. ಸದನದಲ್ಲಿ ರೈತರ ಹೋರಾಟದ ಕುರಿತು ತುಂಬಾ ಸೊಗಸಾಗಿ ಮಾತನಾಡಿದರು. ಆದರೆ ಹೋರಾಟವನ್ನು ಹೇಗೆ ಅಂತ್ಯಗೊಳಿಸಬೇಕು ಎಂಬುದನ್ನೇ ಹೇಳಲಿಲ್ಲ. ದಿಲ್ಲಿ ರೈತರ ಹೋರಾಟವನ್ನು ಪ್ರತಿಷ್ಠೆಯಾಗಿ ಪರಿಗಣಿಸಬಾರದು. ರೈತರಿಗೆ ತಮ್ಮ ನೋವು ಹೇಳಿಕೊಳ್ಳುವ ಸ್ವಾತಂತ್ರ್ಯ ಇರುತ್ತದೆ. ರೈತರ ಮೇಲೆ ಅಂಥ ಕಠಿನ ಕ್ರಮ ಜರಗಿಸುವ ಅಗತ್ಯವಿಲ್ಲ. ಲೋಕಸಭೆಯಲ್ಲಿ ಬಹುಮತ ಇದೆ ಎಂಬ ಕಾರಣಕ್ಕೆ ಕೃಷಿ ಮಸೂದೆಗಳು ಪಾಸ್ ಆದವು. ಆದರೆ ಮರುದಿನವೇ ರಾಜ್ಯಸಭೆಯಲ್ಲಿ ಮಂಡಿಸುವ ಅನಿವಾರ್ಯತೆ ಇರಲಿಲ್ಲ.
ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ನಾವು ಮುಂದಾಗುವುದಿಲ್ಲ. ಮುಂದಿನ 2.5 ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿರಲಿ ಎಂದರು. ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಗಳಿಗೆ ಪಕ್ಷ ಸ್ಪರ್ದಿಸುವುದಿಲ್ಲ ಎಂದು ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಅವರ ಹೇಳಿಕೆ ಸಮಂಜಸವಾಗಿದೆ. ಈಗ ನಮ್ಮ ಬಳಿ ಚುನಾವಣೆ ಎದುರಿಸಲು ಹಣ ಇಲ್ಲ.
– ಎಚ್.ಡಿ. ದೇವೇಗೌಡ, ಜೆಡಿಎಸ್ ರಾಷ್ಟ್ರಾಧ್ಯಕ್ಷ