Advertisement

ಪ್ರಧಾನಿ ನರೇಂದ್ರ ಮೋದಿ ದಕ್ಷ  ಆಡಳಿತಗಾರ: ಗದ್ದಿಗೌಡರ 

04:50 PM May 07, 2018 | Team Udayavani |

ಜಮಖಂಡಿ: ಬಿಜೆಪಿ ಪಕ್ಷದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ದಕ್ಷ ಆಡಳಿತಗಾರರಾಗಿ ದೇಶದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು. ತಾಲೂಕಿನ ಜಂಬಗಿ ಸೇತುವೆ ಹತ್ತಿರ ರವಿವಾರ ಬಿಜೆಪಿ ಪಕ್ಷದ ಚುನಾವಣಾ ಪ್ರಚಾರದ ಸಾರ್ವಜನಿಕ ಸಭೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು.

Advertisement

ದೇಶದ 23 ರಾಜ್ಯಗಳಲ್ಲಿ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿ ಸಿದಲ್ಲಿ 24ನೇ ರಾಜ್ಯವಾಗಲಿದೆ. ಬಿಜೆಪಿ ಪಕ್ಷದ ಅಸ್ವಿತ್ವ ಇಲ್ಲದ ತ್ರಿಪುರಾ, ಕಾಶ್ಮೀರ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ರಾಜ್ಯದಲ್ಲಿ 150 ಸ್ಥಾನಗಳಲ್ಲಿ ಗೆಲವು ಸಾಧಿಸಲಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ, ಆಡಳಿತ ಸಂಪೂರ್ಣ ಭ್ರಷ್ಟತೆಯಿಂದ ಕೂಡಿದ್ದು, ಜನರು ರೋಸಿ ಹೋಗಿದ್ದಾರೆ. ಬದಲಾವಣೆಗಾಗಿ ಜನರು ಕಾಯುತ್ತಿದ್ದು, ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸದಲ್ಲಿ ತೊಡಗಿಕೊಂಡಲ್ಲಿ ಬಿಜೆಪಿ ಗೆಲವು ಸಾಧಿ ಸಲಿದೆ. ಕಾಂಗ್ರೆಸ್‌ ಹಗರಣಗಳ ಸರಕಾರವಾಗಿದ್ದು, ತಮ್ಮ ಪಕ್ಷದ ಕಾರ್ಯಕರ್ತರ, ಶಾಸಕ, ಸಚಿವರಿಗೆ ಕ್ಲೀನ್‌ ಚೀಟ್‌ ಮೂಲಕ ಭ್ರಷ್ಟತೆಯಲ್ಲಿ ತೊಡಗಿಕೊಂಡಿದೆ ಎಂದರು.

ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತ ನಿಷ್ಕ್ರಿಯಗೊಂಡಿದೆ. ಲೋಕಾಯಯಕ್ತ ಸ್ಥಗಿತಗೊಳಿಸಿ ಹಲ್ಲಿಲ್ಲದ ಎಸಿಬಿ ಸಂಸ್ಥೆ ರಚಿಸಿ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ರಾಜ್ಯದಲ್ಲಿ ಮರಳು ಲೂಟಿ ದಂಧೆ ವ್ಯವಸ್ಥಿತ ರೀತಿಯಲ್ಲಿ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತ ಕಿತ್ತೂಗೆಯಲು  ಧೀಮಂತ ನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕೈ ಬಲಪಡಿಸಲು ಬಿಜೆಪಿಗೆ ಮತ ನೀಡಬೇಕೆಂದು ಹೇಳಿದರು.

ಶಾಸಕ ಗೋವಿಂದ ಕಾರಜೋಳ, ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ವೀರಣ್ಣ ಚರಂತಿಮಠ, ಮುರಗೇ‌ ನಿರಾಣಿ, ಸಿದ್ದು ಸವದಿ, ನಾರಾಯಣಸಾ ಬಾಂಡೆಗೆ ಸಹಿತ ಹಲವರು ಇದ್ದರು.

Advertisement

ನೆಲಕ್ಕುರುಳಿದ ಸೌಂಡ ಸಿಸ್ಟಮ್‌: ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಜಂಬಗಿ ರಸ್ತೆ ಪಕ್ಕದಲ್ಲಿ ಬೃಹತ್‌ ಮೈದಾನದಲ್ಲಿ ನಿರ್ಮಿಸಿದ ಹತ್ತಾರು ಸೌಂಡ್‌ ಸ್ಪೀಕರಗಳನ್ನು ಜೋಡಿಸಿದ್ದ ಬೃಹತ್‌ ಕಟೌಟ್‌ ಗಾಳಿಗೆ ಧರೆಗೆ ಉರುಳಿತು. ಇಲ್ಲಿ ಯಾವುದೆ ಅನಾಹುತ ಸಂಭವಿಸಿಲ್ಲ.

ನೀರಿಗೆ ಹಾಹಾಕಾರ: ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮನದ ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ಕಾರ್ಯಕರ್ತರ ಆಗಮನ ಸಂದರ್ಭದಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಪ್ಯಾಕೆಟ್‌ ಮೂಲಕ ವಿತರಿಸಿದ ನೀರು ಸರಿಯಾಗಿ ತಲುಪದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಎದುರಾಯಿತು.

Advertisement

Udayavani is now on Telegram. Click here to join our channel and stay updated with the latest news.

Next