Advertisement

ಪ್ರಧಾನಿ ಮೋದಿ ಸುಳ್ಳಿನ ಸರದಾರ: ಖರ್ಗೆ

07:00 AM May 10, 2018 | Team Udayavani |

ಯಾದಗಿರಿ: “ಈ ಚುನಾವಣೆ ಸಂವಿಧಾನ ರಕ್ಷಣೆ ಮಾಡುವವರ ಹಾಗೂ ಸಂವಿಧಾನ ತಿರುಚುವವರ ನಡುವಿನ ಚುನಾವಣೆ ಯಾಗಿದ್ದು, ಸಂವಿಧಾನ ರಕ್ಷಣೆ ಮಾಡುವ ಕಾಂಗ್ರೆಸ್‌ಗೆ ಮತ ನೀಡಿ’ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು. 

Advertisement

ಪ್ರಧಾನಿ ಮೋದಿ ಸುಳ್ಳಿನ ಸರದಾರ. ವಿದೇಶದಲ್ಲಿರುವ ಕಪ್ಪು ಹಣ ವಶಪಡಿಸಿಕೊಂಡು ಪ್ರತಿಯೊಬ್ಬರ ಖಾತೆಗೆ ಹಣ ಹಾಕುವುದಾಗಿ ಹೇಳಿದ್ದರು. ಆದರೆ ನಯಾ ಪೈಸೆ ಕೂಡ ಹಾಕಿಲ್ಲ ಎಂದರು. ಮೋದಿ ಅವರಿಗೆ ಹೇಗೆ ಮಾತನಾಡಬೇಕು ಎನ್ನುವುದು ಗೊತ್ತಿಲ್ಲ. ಕಾಂಗ್ರೆಸ್‌ನವರನ್ನು ಮುಧೋಳ ನಾಯಿಗೆ ಹೋಲಿಕೆ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್‌ ನಾಯಕರು ಭಾಗಿಯಾಗಿ ಪ್ರಾಣ ವನ್ನು ನೀಡಿದ್ದಾರೆ. ಆದರೆ ಈ ದೇಶದ ಸ್ವಾತಂತ್ರ್ಯಕ್ಕಾಗಿ ಬಿಜೆಪಿ, ಆರ್‌ಎಸ್‌ಎಸ್‌ ನಾಯಕರು ಜೈಲಿಗೆ ಹೋಗಿಲ್ಲ. ಅವರ ಮನೆಯ ನಾಯಿಯೂ ಸತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next