Advertisement

ಪ್ರಧಾನಿ ಮೋದಿಗೆ ಬಿಲ್‌ ಗೇಟ್ಸ್‌ ಧನ್ಯವಾದ

12:50 AM May 17, 2020 | Hari Prasad |

ಪ್ರಧಾನಿ ನರೇಂದ್ರ ಮೋದಿ ಜತೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಚರ್ಚೆ ನಡೆಸಿದ ಬಳಿಕ ಮೈಕ್ರೋಸಾಫ್ಟ್ ದಿಗ್ಗಜ ಬಿಲ್‌ ಗೇಟ್ಸ್‌ ಮೋದಿಯವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

Advertisement

‘ಮೋದಿಯವರೇ ನನ್ನೊಂದಿಗೆ ನೀವು ನಡೆಸಿದ ಚರ್ಚೆ ಮತ್ತು ಸಹಭಾಗಿತ್ವಕ್ಕೆ ಧನ್ಯವಾದಗಳು, ವಿಶ್ವದ ವ್ಯವಹಾರಗಳ ಸಾಮಾಜಿಕ ಮತ್ತು ಆರ್ಥಿಕತೆ ಮೇಲೆ ಬೀಳಬಹುದಾದ ದುಷ್ಪರಿಣಾಮವನ್ನು ತಗ್ಗಿಸುವುದರಲ್ಲಿ ಭಾರತದ ಪಾತ್ರ ಮುಖ್ಯವಾಗಿರುತ್ತದೆ’ ಎಂದು ಬಿಲ್‌ಗೇಟ್ಸ್‌ ಟ್ವೀಟ್‌ ಮಾಡಿದ್ದಾರೆ.

‘ಭಾರತದಲ್ಲಿ ಕೋವಿಡ್ ನಿಯಂತ್ರಣಕ್ಕೆ ನೀವು ತೆಗೆದುಕೊಂಡ ಕ್ರಮಗಳು ಮೆಚ್ಚುವಂಥದ್ದಾಗಿದೆ ‘ ಎಂದು ಮೋದಿ ನಾಯಕತ್ವದ ಬಗ್ಗೆ ಗೇಟ್ಸ್‌ ಶ್ಲಾಘಿಸಿದ್ದಾರೆ.

ಗುರುವಾರ ನಡೆದಿದ್ದ ಮಾತುಕತೆ ವೇಳೆ ಕೋವಿಡ್ ವೈರಸ್ ನಿಂದ ಎದುರಾಗಿರುವ ಜಾಗತಿಕ ಸಮಸ್ಯೆ ಬಗ್ಗೆ ಇಬ್ಬರೂ ಚರ್ಚಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next