Advertisement

ಮತ್ತೂಂದು ಕಾರಿಡಾರ್‌ ಶುರು

11:59 PM Jan 07, 2021 | Team Udayavani |

ಚಂಡಿಗಡ: ಪಶ್ಚಿಮ ಭಾಗಕ್ಕೆ ಮೀಸಲಾದ ಸರಕು ಸಾಗಣೆ ಕಾರಿಡಾರ್‌(ಡಬ್ಲ್ಯುಡಿಎಫ್ಸಿ)ನ 306 ಕಿ.ಮೀ. ಉದ್ದದ ನ್ಯೂ ರೆವಾರಿ-ನ್ಯೂ ಮದಾರ್‌ ಸೆಕ್ಷನ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಲೋಕಾರ್ಪಣೆ ಮಾಡಿದ್ದಾರೆ. ಇದರ ಜತೆಗೆ, ಜಗತ್ತಿನಲ್ಲೇ ಮೊದಲ 1.5 ಕಿ.ಮೀ. ಉದ್ದದ ಡಬಲ್‌-ಸ್ಟಾಕ್‌ ದೂರ ಸಾಗಣೆಯ ಸರಕು ರೈಲಿಗೂ ಅವರು ಚಾಲನೆ ನೀಡಿದ್ದಾರೆ. ಈ ರೈಲು ನ್ಯೂ ಅಟೇಲಿ- ನ್ಯೂ ಕಿಶನ್‌ಗಢ ಮಾರ್ಗದಲ್ಲಿ ವಿದ್ಯುತ್‌ ಕರ್ಷಣ ವ್ಯವಸ್ಥೆಯ ಮೂಲಕ ಸಂಚರಿಸಲಿದೆ.

Advertisement

ವೀಡಿಯೋ ಕಾನ್ಫರೆನ್ಸ್‌ ಮೂಲಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ದೇಶದ ಮೂಲಸೌಕರ್ಯವನ್ನು ಆಧುನೀಕರ ಣಗೊಳಿಸುವ ಮಹಾಯಜ್ಞವು ಇಂದು ಮತ್ತೂಂದು ಮೈಲುಗಲ್ಲು ಸಾಧಿಸಿದೆ. ಈ ಡೆಡಿಕೇಟೆಡ್‌ ಫ್ರೈಟ್‌ ಕಾರಿಡಾರ್‌ 21ನೇ ಶತಮಾನದಲ್ಲಿ ಭಾರತದ ಗೇಮ್‌ ಚೇಂಜರ್‌ ಆಗಿ ಕಾರ್ಯನಿರ್ವಹಿಸಲಿದೆ’ ಎಂದು ಹೇಳಿದ್ದಾರೆ. ಕಳೆದ 5-6 ವರ್ಷಗಳ ಕಠಿನ ಪರಿಶ್ರಮದ ಬಳಿಕ ಈಗ ಇದು ಸಾಕಾರಗೊಂಡಿದೆ. ನಾವು ನಿಲ್ಲು ವುದೂ ಇಲ್ಲ, ಆಯಾಸಗೊಳ್ಳುವುದೂ ಇಲ್ಲ. ನಾವು ಇನ್ನಷ್ಟು-ಮತ್ತಷ್ಟು ವೇಗವಾಗಿ ಸಾಗುತ್ತೇವೆ ಎಂಬುದನ್ನು ಪ್ರತಿಯೊಬ್ಬ ಭಾರತೀಯನೂ ತೋರಿಸಿಕೊಟ್ಟಿದ್ದಾನೆ ಎಂದೂ ಮೋದಿ ಹೇಳಿದ್ದಾರೆ.

ಪಶ್ಚಿಮ ಭಾಗದ ಸರಕು ಸಾಗಣೆ ಕಾರಿಡಾರ್‌ನ ನ್ಯೂ ರೆವಾರಿ- ನ್ಯೂ ಮದಾರ್‌ ಸೆಕ್ಷನ್‌ ಹರಿಯಾಣ ಮತ್ತು ರಾಜಸ್ಥಾನದ ವ್ಯಾಪ್ತಿಗೆ ಬರುತ್ತದೆ. ಈ ಸೆಕ್ಷನ್‌ನ ಲೋಕಾರ್ಪಣೆಯಿಂದಾಗಿ ರೆವಾರಿ, ಮನೇಸಾರ್‌, ನನೌìಲ್‌, ಫ‌ುಲೇರಾ, ಕಿಶಾನ್‌ಗಢ‌ ಪ್ರದೇಶಗಳಲ್ಲಿರುವ ವಿವಿಧ ಕೈಗಾರಿಕೆಗಳಿಗೆ ನೆರವಾಗಲಿದೆ.

ವಿಶೇಷವಾಗಿ ಸರಕು ಸಾಗಣೆ ರೈಲುಗಳ ಸಂಚಾರಕ್ಕೆ ಈ ಕಾರಿಡಾರ್‌ ಬಳಕೆ, ಗಂಟೆಗೆ 100 ಕಿ.ಮೀ. ವೇಗದಲ್ಲಿ ಸರಕು ರೈಲುಗಳ ಸಂಚಾರ

ಈ ಪ್ರದೇಶದಲ್ಲಿನ ಕೈಗಾರಿಕೆಗಳಿಗೆ ಸರಕುಗಳ ಸಾಗಾಟಕ್ಕೆ ಅನುಕೂಲ, ಮಲ್ಟಿ ಮಾಡಲ್‌ ಲಾಜಿಸ್ಟಿಕ್‌ ಹಬ್‌ಗಳು ಮತ್ತು ದಿಲ್ಲಿ-ಮುಂಬಯಿ ಇಂಡಸ್ಟ್ರಿಯಲ್‌ ಕಾರಿಡಾರ್‌ ಅನ್ನು ಉತ್ತರ ಭಾರತಕ್ಕೆ ಸಂಪರ್ಕಿಸುತ್ತದೆ

Advertisement

ಡಬಲ್‌ ಸ್ಟಾಕ್‌ ಸರಕು ರೈಲಿಗೆ 25 ಟನ್‌ ಆಕ್ಸೆಲ್‌ ಲೋಡ್‌ ಹೊರುವ ಸಾಮರ್ಥ್ಯ, ಪ್ರಸ್ತುತ ಸಾಮರ್ಥ್ಯಕ್ಕಿಂತ 4 ಪಟ್ಟು ಅಧಿಕ ಲೋಡ್‌ ಹೊರುವಂಥ ವ್ಯಾಗನ್‌ಗಳು

Advertisement

Udayavani is now on Telegram. Click here to join our channel and stay updated with the latest news.

Next