Advertisement

ಉಡುಪಿಯಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಹಾಡಿ ಹೊಗಳಿದ ಮೋದಿ

03:30 PM May 01, 2018 | Sharanya Alva |

ಉಡುಪಿ: ಕರಾವಳಿಯ ಮಹಾಜನತೆಗೆ ನನ್ನ ನಮಸ್ಕಾರಗಳು. ನಿಮ್ಮೆಲ್ಲರಿಗೂ ನಾನು ಶಿರಭಾಗಿ ನಮಸ್ಕರಿಸುತ್ತೇನೆ. ನಿಮ್ಮ ಈ ಪ್ರೀತಿಯನ್ನು ಅಭಿವೃದ್ಧಿ ಮೂಲಕ ಹಿಂದಿರುಗಿಸುತ್ತೇನೆ. ಇದು ಪರಶುರಾಮ ಸೃಷ್ಟಿಯಾಗಿದೆ.ಇದು ಪ್ರಕೃತಿಯನ್ನು ರಕ್ಷಣೆ ಮಾಡೋದಾಗಿದೆ…ಇದು ಪ್ರಧಾನಿ ನರೇಂದ್ರ ಮೋದಿ ಕೃಷ್ಣನಗರಿ ಉಡುಪಿಯಲ್ಲಿ ಜನಸ್ತೋಮವನ್ನು ಉದ್ದೇಶಿಸಿ ಮಾಡಿದ ಭಾಷಣ..

Advertisement

ಮಂಗಳವಾರ ಉಡುಪಿ ಎಂಜಿಎಂ ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಜನರನ್ನು ಉದ್ದೇಶಿಸಿ ಮಾತನಾಡಿದರು.

ದಕ್ಷಿಣ ಕನ್ನಡ ಹಾಗೂ ಉಡುಪಿ ದೇವಭೂಮಿ ಅಂತಾ ಖ್ಯಾತಿಯಾಗಿದೆ. ಜನಸಂಘಕ್ಕಾಗಿ ಉಡುಪಿಯ ಕೊಡುಗೆ ಅಪಾರವಾದುದು. ಜನಸಂಘಕ್ಕೆ ಇಲ್ಲಿಂದ ಪದಾಧಿಕಾರಿಗಳನ್ನು ಕಳುಹಿಸಿಕೊಡಲಾಗುತ್ತಿತ್ತು.

ಟಿಎಂಎ ಪೈ, ಹಾಜಿ ಸಾಹೇಬ್, ಎಬಿ ಶೆಟ್ಟಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಆದರೆ ಅದೇ ಬಡವರನ್ನು ಬ್ಯಾಂಕ್ ನಿಂದ ದೂರ ಇಡಲಾಯಿತು. ಬಡವರ ಹೆಸರಲ್ಲಿ ಬ್ಯಾಂಕ್ ಗಳನ್ನು ರಾಷ್ಟ್ರೀಕರಣಗೊಳಿಸಲಾಯ್ತು.

Advertisement

ನಮ್ಮ ಸರ್ಕಾರ ಯುವ ಜನತೆಯ ಭವಿಷ್ಯ ರೂಪಿಸಲು ಪಣ ತೊಟ್ಟಿದೆ. ಮಠ ಮಂದಿರ, ಗುರುಗಳು ನಮಗೆ ಪ್ರೇರಣೆಯಾಗಿದ್ದಾರೆ. ರಾಜಕೀಯ ಕಾರಣಕ್ಕಾಗಿ ಅಮಾಯಕರ ಹತ್ಯೆ ಮಾಡಲಾಗುತ್ತಿದೆ. ಎರಡು ಡಜನ್ ಗಿಂತಲೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಹತ್ಯೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

 ಇಲ್ಲಿನ ಮಣ್ಣಿನ ಮಗ ಗುರುರಾಜ್ ಪೂಜಾರಿ ಪದಕ ಗೆದ್ದು ತಂದಿದ್ದಾನೆ. ನೀವು ನಮಗೆ ಕೇಂದ್ರ ಸರ್ಕಾರ ನಡೆಸಲು ಅವಕಾಶ ಕೊಟ್ಟಿದ್ದೀರಿ ಎಂದು ಹೇಳಿದರು.

ನಾನು ಚಿಕ್ಕಂದಿನಿಂದಲೂ ಕರ್ನಾಟಕದ ಬಗ್ಗೆ ಕೇಳುತ್ತಿದ್ದೇನೆ. ಎಲ್ಲರೂ ಕರ್ನಾಟಕವನ್ನು ಹೊಗಳುತ್ತಿದ್ದರು. ಆದ್ರೆ ಕರ್ನಾಟಕದ ಒಳ್ಳೇತನವನ್ನು ಪುಡಿ, ಪುಡಿ ಮಾಡಲಾಗಿದೆ.ಲ ಸಾಲ ಪಡೆದು ಉದ್ಯಮ ಆರಂಭಿಸಿದವರಿಗೆ ಹಿಂಸಾ ರಾಜಕೀಯ  ಒದ್ದೋಡಿಸಬೇಕೋ, ಬೇಡವೋ? ಹಾಡಹಗಲೇ ಕೊಲೆ ಮಾಡಲಾಗಿದೆ. ಅವರು ಅನ್ಯಾಯದ ಪರ ಧ್ವನಿ ಎತ್ತಿದ್ದೇ ತಪ್ಪಾ ಎಂದು ಪ್ರಶ್ನಿಸಿದರು.

ದೇವೇಗೌಡರನ್ನು ಹಾಡಿ ಹೊಗಳಿದ ಮೋದಿ:

ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷರು ದೇವೇಗೌಡರನ್ನು ಅವಮಾನಿಸಿದ್ದರು. ನಾವು ರಾಜಕೀಯ ವಿರೋಧಿಗಳು ನಿಜ. ಆದರೆ ಆದರೆ ದೇವೇಗೌಡರು ದೇಶದ ಹಿರಿಯ ನಾಯಕರು. ದೇವೇಗೌಡರನ್ನು ನಾನು ಗೌರವಿಸುತ್ತೇನೆ. ದೇವೇಗೌಡ ದೇಶ ಕಂಡ ಶ್ರೇಷ್ಠ ನಾಯಕ. ದೇವೇಗೌಡ ಬಂದಾಗ ನಾನೇ ಅವರ ಬಳಿ ತೆರಳಿ ಕಾರಿನ ಡೋರ್ ತೆಗೆದಿದ್ದೆ. ದೇವೇಗೌಡ ಸಮಯ ಕೇಳಿದಾಗಲೆಲ್ಲಾ ಅವರ ಜೊತೆ ಮಾತನಾಡಿದ್ದೇನೆ.

ದೇವೇಗೌಡರನ್ನು ಅವಮಾನಿಸಿದವರು ರಾಜ್ಯಕ್ಕೆ ಮಾರಕ. ಈಗ್ಲೇ ನೀವು ಹೀಗೆ ಮಾಡ್ತೀರಾ, ಮುಂದೆ ಏನೆಲ್ಲಾ ಮಾಡಬಹುದು. ಇಂಥವರು ಕರ್ನಾಟಕಕ್ಕೆ ಮಾರಕ ಎಂದು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಚಿತ್ರಗಳು: ಪ್ರಕಾಶ್ ಪ್ರಭು

Advertisement

Udayavani is now on Telegram. Click here to join our channel and stay updated with the latest news.

Next