Advertisement

ಯಾರಾಗಿದ್ದಾನೋ ಭ್ರಷ್ಟ ಅವನಿಗೆ ನನ್ನಿಂದ ಕಷ್ಟ:ಹುಬ್ಬಳ್ಳಿಯಲ್ಲಿ ಮೋದಿ

02:00 PM Feb 10, 2019 | |

ಹುಬ್ಬಳ್ಳಿ : ಸಾಹಸ, ಶೌರ್ಯ,ತ್ಯಾಗ, ಧೈರ್ಯ,  ವಿದ್ಯಾ, ಸಂಸ್ಕೃತಿ ಮತ್ತು ಪರಂಪರೆಗಳಿಗೆ ಹೆಸರುವಾಸಿಯಾಗಿರುವ ಪವಿತ್ರ ಪುಣ್ಯ ಭೂಮಿಗೆ ಬಂದಿದ್ದಕ್ಕೆ ರೋಮಾಂಚ್‌ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಬೃಹತ್‌ ಸಮಾವೇಶದಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದರು. 

Advertisement

ನಾವು ಬಡವರು,ಮಧ್ಯಮವರ್ಗದವರ ಏಳಿಗೆಗಾಗಿ ಕೆಲಸ ಮಾಡುತ್ತಿದ್ದೇವೆ.45 ವರ್ಷಗಳಲ್ಲಿ ಮಾಡದ ಕೆಲಸವನ್ನು 4.5 ವರ್ಷಗಳಲ್ಲಿ ಮಾಡಿದ್ದೇವೆ. 

ಇಲ್ಲಿನ ಮುಖ್ಯಮಂತ್ರಿ ಅಳುತ್ತಾರೆ,ದೆಹಲಿಯಲ್ಲಿ ನಾಮಧಾರ್‌ಗಳು ಅಳುತ್ತಿದ್ದಾರೆ.ಇವರನ್ನೆಲ್ಲಾ ನೋಡಿ ದೇಶದ ಜನ ನಗುತ್ತಿದ್ದಾರೆ ಎಂದು ಲೇವಡಿ ಮಾಡಿದರು. 

ಯಾರು ಭ್ರಷ್ಟರಿದ್ದಾರೋ ಅವರಿಗೆ ಮೋದಿಯಿಂದ ಕಷ್ಟ ಇದೆ ಎನ್ನುವ ಮೂಲಕ ವಿಪಕ್ಷಗಳ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. 

ರೈತರು ಸೇರಿದಂತೆ ವಿವಿಧ ವರ್ಗದ ಜನರಿಗೆ ಕೇಂದ್ರ ಸರ್ಕಾರ ಜಾರಿ ಮಾಡಿದ ಯೋಜನೆಗಳನ್ನು ಜನರಿಗೆ ತಿಳಿಸಿ ಪ್ರಧಾನಿ ಭಾಷಣ ಮುಗಿಸಿದರು. 

Advertisement

ವಿವಿಧ ಅಭಿವೃದ್ಧಿ ಯೋಜನೆಗಳಿಕೆ ಚಾಲನೆ 
ಬಿಜೆಪಿ ಸಮಾವೇಶದ ವೇದಿಕೆಗೆ ಆಗಮಿಸುವ  ಮನ್ನು ಅರ್ಧ ಕಿ.ಮೀ ದೂರದಲ್ಲಿ ಹಾಕಲಾಗಿದ್ದ  ಇನ್ನೊಂದು  ವೇದಿಕೆಯಲ್ಲಿ  ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲದೆ ನೀಡಿದರು.  
ಮನೆ ಮನೆಗೆ ಗ್ಯಾಸ್‌ ಜೋಡಣೆ, ಪ್ರಧಾನಮಂತ್ರಿ ಆವಾಸ್‌ ಯೋಜನೆ ಹಕ್ಕುಪತ್ರ ವಿತರಣೆ, ಐಐಟಿ ಮೊದಲ ಹಂತದ ಕಟ್ಟಡ ನಿರ್ಮಾಣ, ಐಐಐಟಿ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ, ಹುಬ್ಬಳ್ಳಿ-ಚಿಕ್ಕಬಾಜೂರು ಡಬ್ಲಿಂಗ್‌ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು.

 ಪ್ರಧಾನಿ ನರೇಂದ್ರ ಮೋದಿ ಸಂಜೆ 5:30 ಗಂಟೆಗೆ ವಿಶೇಷ ವಿಮಾನ ಮೂಲಕ ನಗರಕ್ಕೆ ಆಗಮಿಸಬೇಕಿತ್ತು. ಆದರೆ 6.30 ರ ವೇಳೆಗೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ  ಸಚಿವ ಆರ್‌.ವಿ.ದೇಶ್‌ಪಾಂಡೆ ಸೇರಿದಂತೆ ಸರ್ಕಾರಿ ಅಧಿಕಾರಿಗಳು ಮತ್ತು ಗಣ್ಯರು ಆತ್ಮೀಯವಾಗಿ ಬರಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next