Advertisement

ಪೋಖರಣ್‌ ವಿಜ್ಞಾನಿಗಳ ನೆನೆದ ಪ್ರಧಾನಿ ನರೇಂದ್ರ ಮೋದಿ

09:40 AM May 13, 2020 | Hari Prasad |

ಹೊಸದಿಲ್ಲಿ: ರಾಷ್ಟ್ರೀಯ ತಂತ್ರಜ್ಞಾನ ದಿನವಾದ ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿ, 1998ರ ಪೋಖರಣ್‌ ಅಣ್ವಸ್ತ್ರ ಪರೀಕ್ಷೆ ಯಶಸ್ಸಿಗೆ ಕಾರಣಕರ್ತರಾದ ವಿಜ್ಞಾನಿಗಳನ್ನು ಸ್ಮರಿಸಿದರು.

Advertisement

ಅಲ್ಲದೆ, ‘ಇಂದು ಕೋವಿಡ್ ಸೋಂಕಿನಿಂದ ದೇಶವನ್ನು ಮುಕ್ತಗೊಳಿಸಲು ಕೂಡ ತಂತ್ರಜ್ಞಾನಗಳು ನೆರವಾಗುತ್ತಿವೆ. ವೈರಾಣುವನ್ನು ಸೋಲಿಸುವ ತಂತ್ರ ಜ್ಞಾನ ಮಾರ್ಗಗಳ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಆರೋಗ್ಯಕರ ಪೃಥ್ವಿ ವಾತಾವರಣವನ್ನು ನಿರ್ಮಿಸಲು ಪಣತೊಡೋಣ’ ಎಂದು ಕರೆಕೊಟ್ಟರು. ವಿಶೇಷವಾಗಿ ಪೋಖ್ರಾನ್‌ ಪರೀಕ್ಷೆ ವೇಳೆ ವಾಜಪೇಯಿ ಅವರು ವಹಿಸಿದ್ದ ದಿಟ್ಟ ನಾಯಕತ್ವವನ್ನು ಮೋದಿ ಶ್ಲಾಘಿಸಿದರು.

ಏನಿದು ತಂತ್ರಜ್ಞಾನ ದಿನ?: 1998ರ ಮೇ 11ರಂದು ರಾಜಸ್ಥಾನದ ಪೋಖರಣ್‌ನಲ್ಲಿ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ವಿಜ್ಞಾನಿ ಅಬ್ದುಲ್‌ ಕಲಾಂ ನೇತೃತ್ವದಲ್ಲಿ ಭಾರತ ಪ್ರಬಲ ಅಣ್ವಸ್ತ್ರ ಪರೀಕ್ಷೆ ನಡೆಸಿ, ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳ ಸಾಲಿನಲ್ಲಿ ನಿಂತಿತ್ತು.

‘ಜೈ ಜವಾನ್‌, ಜೈ ಕಿಸಾನ್‌, ಜೈ ತಂತ್ರಜ್ಞಾನ್‌’ ಎನ್ನುವ ಘೋಷಣೆಯೂ ಮೊಳಗಿತ್ತು. ವಾಜಪೇಯಿ ಅವರು ಆ ದಿನವನ್ನು “ರಾಷ್ಟ್ರೀಯ ತಂತ್ರಜ್ಞಾನ ದಿವಸ್‌’ ಅಂತಲೇ ಆಚರಣೆಗೆ ತಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next