Advertisement
2004ರಲ್ಲಿ ಬಂದಾಗ ಚಿತ್ತರಂಜನ್ ಸರ್ಕಲ್‌ನಲ್ಲಿ ಮಧ್ಯಾಹ್ನದ ಸಭೆಯಲ್ಲಿ ಮೋದಿ ಪಾಲ್ಗೊಂಡಿದ್ದರೆ, 2008ರಲ್ಲಿ ಮಲ್ಪೆಯ ಕಡಲ ತೀರದಲ್ಲಿ ಮುಸ್ಸಂಜೆ ಪ್ರಚಾರ ನಡೆಸಿದ್ದರು.
ಮಲ್ಪೆಯಲ್ಲಿ 80×60 ಅಡಿಯ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. ಆದರೆ ಕೇಂದ್ರದಿಂದ ಹಿಂದಿನ ದಿನ ರಾತ್ರಿ
ಬಂದ ತಂಡ ಭದ್ರತೆ ದೃಷ್ಟಿಯಿಂದ ಇದರಲ್ಲಿ ಸಭೆ ನಡೆಸಲು ಆಗುವುದಿಲ್ಲ ಎಂದು ತಿಳಿಸಿತು. ಇಡೀ ವೇದಿಕೆಯನ್ನು ಸ್ಥಳಾಂತರಿಸಬೇಕಿತ್ತು. ವೇದಿಕೆ ನಿರ್ಮಿಸಿದವರು ಇದು ಆಗದ ಕೆಲಸ ಎಂದಾಗ 300 ಮೊಗವೀರ ಯುವಕರು ಸೇರಿ ಹೊತ್ತು ಸ್ಥಳಾಂತರಿಸಿದರು. ಸೂರ್ಯ ಮುಳುಗುವ ಹಾಗೆ…
“ಆಗ ಮುಸ್ಸಂಜೆ. ಸೂರ್ಯ ಮುಳುಗುವ ಹಾಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಮುಳುಗುತ್ತದೆ ಎಂದು ಮೋದೀಜಿ
ಹೇಳಿದ್ದರು. ಈಗಲೂ ಅದೇ ಲಕ್ಷಣ ಕಾಣುತ್ತಿದೆ. ಮೋದಿ ಆಗ ಮುಖ್ಯ ಮಂತ್ರಿ, ಈಗ ಪ್ರಧಾನಿ’ ಎಂದು ನೆನಪಿಸಿಕೊಳ್ಳುತ್ತಾರೆ ರಘುಪತಿ ಭಟ್.
Related Articles
ಮಲ್ಪೆ ಕಾರ್ಯಕ್ರಮಕ್ಕೆ ಪಾಂಚಜನ್ಯವನ್ನು ತಂದುಕೊಟ್ಟವರು ನಗರ ಬಿಜೆಪಿ ಅಧ್ಯಕ್ಷರಾಗಿದ್ದ ಕೆ. ರಾಘವೇಂದ್ರ ಕಿಣಿ. ಭದ್ರತಾ ಸಿಬಂದಿ ಆ ಶಂಖವನ್ನು ಕೊಂಡೊಯ್ದರು. ಶಂಖ ಮರಳಿ ಪಡೆಯಲು ಕಿಣಿ ಅವರು ಪ್ರಯತ್ನಿಸಿದರೂ ಸಫಲವಾಗಲಿಲ್ಲ. 2010ರಲ್ಲಿ ಅವರು ಗುಜರಾತ್‌ಗೆ ಹೋದಾಗ ಹೊಸ ವಿಷಯ ತಿಳಿಯಿತು. ಪ್ರತಿ ವಿಜಯದಶಮಿಯಂದು ನರೇಂದ್ರ ಮೋದಿ ದೇಶಾದ್ಯಂತ ಬಂದ ಉಡುಗೊರೆಗಳನ್ನು ಏಲಂ ಹಾಕಿ ಬಂದ ಹಣವನ್ನು ಕ್ಯಾನ್ಸರ್‌ಪೀಡಿತರು, ರೋಗಿಗಳಿಗೆ ಬಳಸುತ್ತಾರೆ. “ಈ ಶಂಖವನ್ನೂ ಒಬ್ಬರು ಏಲಂನಲ್ಲಿ ಖರೀದಿಸಿದ್ದು ತಿಳಿದು ತೃಪ್ತಿಯಾಯಿತು. ಎಂದು ರಾಘವೇಂದ್ರ ಕಿಣಿ ಹೇಳುತ್ತಾರೆ.
Advertisement