Advertisement
ಮಂಗಳೂರು ವಿಮಾನ ನಿಲ್ದಾಣದಲ್ಲಿ ಅವರನ್ನು ಕೇಂದ್ರ ಸಚಿವರಾದ ಅನಂತ ಕುಮಾರ್, ಡಿ.ವಿ. ಸದಾನಂದ ಗೌಡ, ರಾಜ್ಯ ಸರಕಾರದ ಪರವಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್, ಮಂಗಳೂರು ಮೇಯರ್ ಕವಿತಾ ಸನಿಲ್ ಅವರು ಸ್ವಾಗತಿಸಿದರು.
ಸನಿಲ್ ಅವರು ಕೂಡ ಹೂಗುತ್ಛ ನೀಡಿ ಸ್ವಾಗತಿಸಿದರು. ರಾಜ್ಯ ಡಿಜಿಪಿ ಆರ್.ಕೆ. ದತ್ತಾ ಮತ್ತು ಮೈಸೂರು ಪ್ರಾದೇಶಿಕ ಆಯುಕ್ತರಾದ ಜಯಂತಿ, ಅಪರ ಜಿಲ್ಲಾಧಿಕಾರಿ ಕುಮಾರ್, ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಡಿಸಿಪಿ ಹನುಮಂತರಾಯ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Related Articles
Advertisement
ಸಚಿವರಾದ ಅನಂತ್ ಕುಮಾರ್ ಮತ್ತು ಡಿ.ವಿ. ಸದಾನಂದ ಗೌಡ ಅವರು ಪ್ರಧಾನಿ ಜತೆ ಹೆಲಿಕಾಪ್ಟರ್‌ನಲ್ಲಿ ಧರ್ಮಸ್ಥಳಕ್ಕೆ ಪ್ರಯಾಣಿಸಿದರು. ಧರ್ಮಸ್ಥಳದಿಂದ ಮಂಗಳೂರಿಗೆ ಹಿಂದಿರುಗುವಾಗ ಹೆಲಿಕಾಪ್ಟರ್‌ನಲ್ಲಿ ಪ್ರಧಾನಿ ಜತೆ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರೂ ಇದ್ದರು.
ಪ್ರಧಾನಿ ಜತೆ ಪ್ರಯಾಣಿಸಿದಡಿಜಿಪಿ ಆರ್.ಕೆ. ದತ್ತಾ
ಡಿಜಿಪಿ ಆರ್.ಕೆ. ದತ್ತಾ ಅವರು ಮಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆ ಧರ್ಮಸ್ಥಳಕ್ಕೆ ತೆರಳಿ ಅವರ ಜತೆಯಲ್ಲೇ ವಾಪಸಾಗಿ ಬಳಿಕ ವಿಮಾನದಲ್ಲಿ ಪ್ರಧಾನಿ ಜತೆಗೆ ಬೆಂಗಳೂರಿಗೆ ತೆರಳಿದರು. ಮೇಯರ್‌ಗೆ ಹ್ಯಾಟ್ರಿಕ್ ಭಾಗ್ಯ
ಮೇಯರ್ ಕವಿತಾ ಸನಿಲ್ ಅವರಿಗೆ ತಮ್ಮ ಒಂದು ವರ್ಷದ ಸೇವಾವಧಿಯಲ್ಲಿ ರಾಷ್ಟ್ರ ಮತ್ತು ರಾಜ್ಯದ ಮೂವರು ಗಣ್ಯ ವ್ಯಕ್ತಿಗಳನ್ನು ಸ್ವಾಗತಿಸುವ ಅವಕಾಶ ಲಭಿಸಿದ್ದು, ಈ ಮೂಲಕ ಹ್ಯಾಟ್ರಿಕ್ ಭಾಗ್ಯ ತಮ್ಮದಾಗಿಸಿಕೊಂಡಿದ್ದಾರೆ. ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ತಮ್ಮ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ ಉಡುಪಿಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದಾಗ ಅವರನ್ನು ಸ್ವಾಗತಿಸುವ ಭಾಗ್ಯ ಮೇಯರ್ ಕವಿತಾ ಸನಿಲ್ ಅವರಿಗೆ ಲಭಿಸಿತ್ತು. ಬಳಿಕ ರಾಜ್ಯಪಾಲ ವಜೂಭಾç ರುಡಾಭಾç ವಾಲಾ ಅವರು ಮಂಗಳೂರಿಗೆ ಆಗಮಿಸಿದಾಗ ಮೇಯರ್ ಕವಿತಾ ಸನಿಲ್ ಸ್ವಾಗತಿಸಿ ಬರಮಾಡಿಕೊಂಡಿದ್ದರು. ಇದೀಗ ರವಿವಾರ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಆಗಮಿಸಿದಾಗ ವಿಮಾನ ನಿಲ್ದಾಣದಲ್ಲಿ ಮೇಯರ್ ಕವಿತಾ ಸನಿಲ್ ಹಾಜರಿದ್ದು, ಮಂಗಳೂರಿನ ಜನರ ಪರವಾಗಿ ಸ್ವಾಗತಿಸಿದರು. ಮೇಯರ್ ಅವರನ್ನು ಪ್ರಧಾನಿ ಅವರಿಗೆ ಸಚಿವ ಅನಂತ್ ಕುಮಾರ್ ಪರಿಚಯಿಸುತ್ತಾ ಕವಿತಾ ಸನಿಲ್ ಅವರು ಕರಾಟೆ ಚಾಂಪಿಯನ್ ಎಂಬುದಾಗಿ ಗಮನಕ್ಕೆ ತಂದರು. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ ಮೇಯರ್ ಅವರ ಸಾಧನೆ ಬಗ್ಗೆ ಮೆಚ್ಚುಗೆ ಸೂಚಿಸಿ ಅಭಿನಂದಿಸಿದರು.