Advertisement

12ನೇ ಬಾರಿ ಜಪಾನ್‌ ಪ್ರಧಾನಿ ಭೇಟಿಯಾದ ಮೋದಿ ; ಮಹತ್ವದ ಮಾತುಕತೆ

02:38 PM Oct 28, 2018 | Team Udayavani |

ಟೋಕಿಯೋ:ಪ್ರಧಾನಿ ನರೇಂದ್ರ ಮೋದಿ ಅವರು 2 ದಿನಗಳ ಜಪಾನ್‌ ಪ್ರವಾಸದಲ್ಲಿದ್ದು, ಭಾನುವಾರ ಜಪಾನ್‌ ಪ್ರಧಾನಿ ಶಿಂಜೋ ಅಬೆ ಜತೆ ಮಹತ್ವದ ಮಾತುಕತೆ ನಡೆಸಿದ್ದಾರೆ.

Advertisement

13 ನೇ ಭಾರತ-ಜಪಾನ್‌ ವಾರ್ಷಿಕ ಶೃಂಗದಲ್ಲಿ ಪಾಲ್ಗೊಳ್ಳ ಲೆಂದು ಪ್ರಧಾನಿ  ಟೋಕಿಯೋದಲ್ಲಿದ್ದಾರೆ. ದ್ವಿಪಕ್ಷೀಯ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ಈ ಮಾತುಕತೆ ಮಹತ್ವದ್ದಾಗಲಿದೆ.

ಈ ಭೇಟಿಯು ಭಾರತ ಮತ್ತು ಜಪಾನ್ ನಡುವಿನ ಬಲವಾದ ಸ್ನೇಹಕ್ಕಾಗಿ ಹೊಸ ಹುರುಪು ತಂದುಕೊಡುವ ವಿಶ್ವಾಸವಿದೆ ಎಂದು ಮೋದಿ ಟ್ವೀಟ್‌ ಮಾಡಿದ್ದರು. 

 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೋದಿ ಅವರು ಅಬೆ ಅವರನ್ನು ಭೇಟಿಯಾಗುತ್ತಿರುವುದು ಇದು 12ನೇ ಬಾರಿ. 

Advertisement

Udayavani is now on Telegram. Click here to join our channel and stay updated with the latest news.

Next