Advertisement

ನ್ಯಾಯಾಂಗವು ತನ್ನ ಸಕಾರಾತ್ಮಕ ವ್ಯಾಖ್ಯಾನಗಳಿಂದ ಸಂವಿಧಾನವನ್ನು ಬಲಿಷ್ಠಗೊಳಿಸಿದೆ : ಪ್ರಧಾನಿ

02:08 AM Feb 07, 2021 | Team Udayavani |

ಅಹ್ಮದಾಬಾದ್‌: ದೇಶದ ನ್ಯಾಯಾಂಗ ವ್ಯವಸ್ಥೆಯು ದೇಶವಾಸಿಗಳ ಹಕ್ಕುಗಳನ್ನು ರಕ್ಷಿಸುವಲ್ಲಿ, ವೈಯಕ್ತಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಲ್ಲಿ ತನ್ನ ಕೆಲಸವನ್ನು ಉತ್ತಮವಾಗಿ ನಿಭಾಯಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

Advertisement

ಗುಜರಾತ್‌ ಹೈಕೋರ್ಟ್‌ ಸ್ಥಾಪನೆಯ 60ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಶನಿವಾರ ವರ್ಚುವಲ್‌ ಕಾರ್ಯಕ್ರಮದ ಮೂಲಕ ಅಂಚೆ ಚೀಟಿ ಬಿಡುಗಡೆ ಮಾಡಿದ ಮೋದಿ, “”ನಮ್ಮ ನ್ಯಾಯಾಂಗ ವ್ಯವಸ್ಥೆಯು ಸಂವಿಧಾನವನ್ನು ಎತ್ತಿಹಿಡಿಯುವುದಕ್ಕಾಗಿ ದೃಢವಾಗಿ ಕೆಲಸ ಮಾಡುತ್ತಾ ಬಂದಿದೆ ಎಂದು ಪ್ರತಿಯೊಬ್ಬ ನಾಗರಿಕನೂ ಹೇಳಬಲ್ಲ. ನಮ್ಮ ನ್ಯಾಯಾಂಗವು ತನ್ನ ಸಕಾರಾತ್ಮಕ ವ್ಯಾಖ್ಯಾನಗಳಿಂದ ಸಂವಿಧಾನವನ್ನು ಬಲಿಷ್ಠಗೊಳಿಸಿದೆ” ಎಂದರು.

ಅಲ್ಲದೇ, ಕೋವಿಡ್‌ ಸಮಯದಲ್ಲಿ ಕೋರ್ಟುಗಳು ವೀಡಿಯೋ ಕಾನ್ಫರೆನ್ಸಿಂಗ್‌ ಮೂಲಕ ವಿಚಾರಣೆ ನಡೆಸಿದ್ದನ್ನೂ ಉಲ್ಲೇಖೀಸಿದ ಅವರು, “”ಸಾಂಕ್ರಾಮಿಕದ ವೇಳೆ ಭಾರತದ ಸರ್ವೋಚ್ಚ ನ್ಯಾಯಾಲಯವು ವೀಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಕೈಗೊಂಡಷ್ಟು ವಿಚಾರಣೆಗಳನ್ನು, ಜಗತ್ತಿನ ಯಾವುದೇ ರಾಷ್ಟ್ರಗಳ ಉನ್ನತ ನ್ಯಾಯಾಲಯಗಳೂ ಕೈಗೊಂಡಿಲ್ಲ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌, ಗುಜರಾತ್‌ ಮುಖ್ಯಮಂತ್ರಿ ವಿಜಯ ರೂಪಾನಿ, ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಎಂ.ಆರ್‌.ಶಾ, ಗುಜರಾತ್‌ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶ ವಿಕ್ರಮ್‌ನಾಥ್‌ ಸೇರಿದಂತೆ ಇತರ ಗಣ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next