Advertisement

ಇತರ ಧರ್ಮಗಳ ಬಗ್ಗೆ ಕಾಂಗ್ರೆಸ್‌, ಐಎನ್‌ಡಿಐಎ ಮೌನ: ಪ್ರಧಾನಿ

09:34 AM Mar 20, 2024 | Team Udayavani |

ಸೇಲಂ/ಪಾಲಕ್ಕಾಡ್‌: ರಾಹುಲ್‌ ಗಾಂಧಿ ಅವರ “ಶಕ್ತಿ’ ಟೀಕೆಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ಧಾಳಿ ಮುಂದುವರಿಸಿದ್ದಾರೆ. “ಶಕ್ತಿ’ಯನ್ನು ನಾಶ ಮಾಡುವುದಾಗಿ ಘೋಷಿಸುವ ಮೂಲಕ ವಿಪಕ್ಷಗಳು ತಮ್ಮ ದುರುದ್ದೇಶವನ್ನು ಪ್ರದರ್ಶಿಸಿವೆ ಎಂದರು. ಪದೇಪದೆ ಹಿಂದೂ ಧರ್ಮ ಟೀಕಿಸುವ ವಿಪಕ್ಷಗಳು ಇತರ ಧರ್ಮಗಳ ಬಗ್ಗೆ ಮೌನ ವಹಿಸುತ್ತವೆ ಎಂದು ಪ್ರಧಾನಿ ಆರೋಪಿಸಿದ್ದಾರೆ.

Advertisement

ತಮಿಳುನಾಡಿನ ಸೇಲಂನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಹಿಂದೂ ಧರ್ಮದಲ್ಲಿ ಶಕ್ತಿ ಎಂದರೆ ಮಾತೃಶಕ್ತಿ, ನಾರಿ ಶಕ್ತಿ. ಅಂಥ ಶಕ್ತಿ ಯನ್ನು ಇಂಡಿಯಾ ಕೂಟವು ನಾಶ ಮಾಡುವುದಾಗಿ ಹೇಳುತ್ತಿದೆ. ಯಾರು ಶಕ್ತಿಯನ್ನು ನಾಶ ಮಾಡುತ್ತೇನೆ ಎನ್ನುತ್ತಾರೋ ಅವರಿಗೆ ತಮಿಳುನಾಡು ಶಿಕ್ಷೆಯನ್ನು ನೀಡಲಿದೆ’ ಎಂದು ಹೇಳಿದರು.

ಭಾಷಣ ಮಧ್ಯೆ ಭಾವುಕರಾದ ಪಿಎಂ: 10 ವರ್ಷದ ಹಿಂದೆ ಹತ್ಯೆಗೀಡಾದ ತಮ್ಮ ಪಕ್ಷದ ನಾಯಕರೊಬ್ಬರನ್ನು ನೆನೆದು ಮೋದಿ ಅವರು ಭಾಷಣದ ಮಧ್ಯೆ ಭಾವುಕರಾದರು. ಆಡಿಟರ್‌ ರಮೇಶ್‌ ಬಗ್ಗೆ ಕುರಿತು ಹೇಳುವಾಗ ಕೆಲವು ಕಾಲ ಮೌನಕ್ಕೆ ಜಾರಿದರು. ಆಡಿಟರ್‌ ರಮೇಶ್‌ ಅವರನ್ನು ಮರೆಯಲು ಸಾಧ್ಯವಿಲ್ಲ. ಅವರೊಬ್ಬ ಉತ್ತಮ ಮಾತುಗಾರರು. ಪಕ್ಷಕ್ಕಾಗಿ ಹಗಲು ರಾತ್ರಿ ದುಡಿದಿದ್ದರು ಎಂದು ಹೇಳಿದರು. ಇದೇ ವೇಳೆ, ಮತ್ತೂಬ್ಬ ನಾಯಕ ಕೆ. ಎನ್‌. ಲಕ್ಷ್ಮಣನ್‌ ಅವರನ್ನೂ ನೆನೆದರು.

Advertisement

Udayavani is now on Telegram. Click here to join our channel and stay updated with the latest news.

Next