Advertisement
ಜತೆಗೆ ಘಾತಕ ವ್ಯಕ್ತಿಗಳ ಪತ್ತೆಗೆ ನೀಡಲಾಗುವ ರೆಡ್‌ಕಾರ್ನರ್ ನೋಟಿಸ್ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
Related Articles
ಗಡಿಯಾಚೆಯಿಂದ ಭಾರತ ಹಲವು ದಶಕಗಳಿಂದ ಉಗ್ರವಾದದ ಸಮಸ್ಯೆ ಎದುರಿಸುತ್ತಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು. ಜಗತ್ತಿನಲ್ಲಿ ಸುರಕ್ಷಿತ ಮತ್ತು ಸುಭದ್ರ ವ್ಯವಸ್ಥೆ ನಿರ್ಮಾಣ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು. ಜಗತ್ತಿನ ರಾಷ್ಟ್ರಗಳ ನಡುವೆ ನಿಕಟ ಸಹಕಾರ ಇದ್ದಾಗ, ಭಯೋತ್ಪಾದನೆ, ಮಾದಕ ವಸ್ತುಗಳ ಕಳ್ಳಸಾಗಣೆ ಸೇರಿದಂತೆ ಹಲವು ಕುಕೃತ್ಯಗಳು ನಡೆಯಲು ಅವಕಾಶವೇ ಇಲ್ಲ ಎಂದರು.
Advertisement
ತ್ವರಿತಗೊಳ್ಳಲಿ:ಘಾತಕ ಕೃತ್ಯಗಳನ್ನು ಎಸಗಿದ ವ್ಯಕ್ತಿಗಳಿಗಾಗಿ ಇಂಟರ್‌ಪೋಲ್ ಹೊರಡಿಸುವ ರೆಡ್‌ಕಾರ್ನರ್ ನೋಟಿಸ್ ಪ್ರಕ್ರಿಯೆ ಮತ್ತಷ್ಟು ತ್ವರಿತಗೊಳ್ಳಬೇಕು. ಇದರಿಂದಾಗಿ ಅಪರಾಧಿಗಳನ್ನು ಕ್ಷಿಪ್ರವಾಗಿ ಹಿಡಿದು ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂದರು. ಪ್ರಶ್ನೆ ತಬ್ಬಿಬ್ಟಾದ ಪಾಕ್ ನಿಯೋಗ
“ನೀವು ಭೂಗತ ಪಾತಕಿ ದಾವೂದ್ ಇಬ್ರಾಹಿಂ, 26/11 ದಾಳಿಯ ರೂವಾರಿ ಮತ್ತು ಉಗ್ರ ಹಫೀಜ್ ಸಯೀದ್‌ನನ್ನು ಭಾರತಕ್ಕೆ ಯಾವಾಗ ಹಸ್ತಾಂತರ ಮಾಡುತ್ತೀರಿ?’- ಇಂಥ ಪ್ರಶ್ನೆಯನ್ನು ಎದುರಿಸಿದ್ದು ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ (ಎಫ್ಐಎ)ನ ಮುಖ್ಯಸ್ಥ ಮೊಹ್ಸಿàನ್ ಬಟ್. ಅನಿರೀಕ್ಷಿತವಾಗಿ ಬಂದ ಆಘಾತಕಾರಿ ಪ್ರಶ್ನೆಗೆ ತಡಬಡಾಯಿಸುವ ಸ್ಥಿತಿ ಅವರದ್ದಾಗಿತ್ತು. ನವದೆಹಲಿಯ ಪ್ರಗತಿ ಮೈದಾನದಲ್ಲಿ ಮಂಗಳವಾರದಿಂದ ನಾಲ್ಕು ದಿನಗಳ ಕಾಲ ಆಯೋಜನೆಗೊಂಡಿರುವ ಇಂಟರ್‌ಪೋಲ್‌ನ 90ನೇ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಅವರು ಆಗಮಿಸಿದ್ದರು. ಪತ್ರಕರ್ತರು ಅವರನ್ನು ಪ್ರಶ್ನೆ ಮಾಡಿದಾಗ ತುಟಿ ಪಿಟಕ್ಕೆನ್ನದೆ, ಮೌನವಹಿಸಬೇಕು ಎಂದು ಸನ್ನೆ ಮಾಡುವ ಮೂಲಕ ಸೂಚಿಸಿದರು. ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿ ಮಾತನಾಡಿದ ಬಳಿಕ ಪತ್ರಕರ್ತರು ಪಾಕಿಸ್ತಾನದ ನಿಯೋಗದ ಬಳಿ ತೆರಳಿದ್ದರು. 1993ರಲ್ಲಿ ಮುಂಬೈನಲ್ಲಿ ನಡೆದಿದ್ದ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂ, 2008ರ ನ.26ರಂದು ಮುಂಬೈನಲ್ಲಿ ನಡೆದಿದ್ದ ಉಗ್ರ ದಾಳಿಯ ರೂವಾರಿ ಹಫೀಜ್ ಸಯೀದ್, ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ಭಾರತಕ್ಕೆ ಯಾವಾಗ ಪಾಕಿಸ್ತಾನ ಹಸ್ತಾಂತರಿಸಲಿದೆ, ಈ ಬಗ್ಗೆ ನಿಮ್ಮ ಸರ್ಕಾರ ಯಾವ ನಿರ್ಧಾರ ಕೈಗೊಂಡಿದೆ ಎಂದು ಪ್ರಶ್ನೆ ಮಾಡಿದರು.
ಪತ್ರಕರ್ತರ ಪ್ರಶ್ನೆಗಳಿಂದ ಒಂದು ಕ್ಷಣ ಎಫ್ಐಎನ ಮುಖ್ಯಸ್ಥ ಮೊಹ್ಸಿನ್ ಬಟ್ ಅವಕ್ಕಾದರು. ಜತೆಗೆ ಅವರು ಮೌನವಹಿಸುವಂತೆ ಸೂಚಿಸಿದರು. ಪದೇ ಪದೆ ಪ್ರಶ್ನೆಗಳನ್ನು ಪತ್ರಕರ್ತರು ಕೇಳುತ್ತಿರುವಂತೆಯೇ ಅವರು ಸ್ಥಳದಿಂದ ಹೊರ ನಡೆದರು.