ಯೋಜನೆಗಳಾಗಿವೆ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿದರು.
Advertisement
ರವಿವಾರ ಪಟ್ಟಣದ ಕಲ್ಯಾಣ ನಗರದಲ್ಲಿನ ಸರಕಾರಿ ಪ್ರಾಥಮಿಕಶಾಲೆ ನಂ.2ರ ಆವರಣದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಅಯ್ಕೆಯಾದ ಫಲಾನುಭವಿಗಳಿಗೆ ಗ್ಯಾಸ್ ಒಲೆ, ಸಿಲಿಂಡರ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.ದೇಶ ಹಳ್ಳಿಗಳಿಂದ ಕೂಡಿದ್ದು ಸಾಕಷ್ಟು ಹಳ್ಳಿಗಳು ಹಿಂದುಳಿದಿವೆ. ಆರ್ಥಿಕತೆ ಕೊರತೆಯಿಂದ ಮಹಿಳೆಯರು ಇನ್ನು ಸೌದೆ ಬಳಸಿ ಅಡುಗೆ ಮಾಡುತ್ತಿದ್ದಾರೆ. ಕೂಲಿ ಕೆಲಸಕ್ಕೆ ಹೋಗಿ ಮನೆಗೆ ಮರಳಿ ಬರುವ ಸಂದರ್ಭದಲ್ಲಿ ಕಟ್ಟಿಗೆ ಆರಿಸಿ ತಂದು ಅಡುಗೆ ಮಾಡುವ ಕುಟುಂಬಗಳು ಸಾಕಷ್ಟಿವೆ. ಅಂಥ ಕುಟುಂಬದ ಮಹಿಳೆಯರ ಸ್ಥಿತಿ ಅರಿತ ಪ್ರಧಾನಿ ನರೇಂದ್ರ ಮೋದಿ ಅವರು ಬಡ ಕುಟುಂಬದ ಮಹಿಳೆಯರಿಗೆ ಉಚಿತ ಎಲ್‌ಪಿಜಿ ಗ್ಯಾಸ್ ಒಲಿ ಮತ್ತು ಸಿಲಿಂಡರ್ ನೀಡಲು ಮುಂದಾಗಿದ್ದಾರೆ ಎಂದರು.
ಸೌಲಭ್ಯ ಪಡೆಯಲಿವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ರಮೇಶ ಭೂಸನೂರ ಮಾತನಾಡಿ, ಉಜ್ವಲ ಯೋಜನೆ ಬಡ ಹೆಣ್ಣು ಮಕ್ಕಳ ಕಣ್ಣೀರು ಒರೆಸುವ ಮತ್ತು ಆರೋಗ್ಯ ವೃದ್ಧಿ ಮಾಡುವ ಯೋಜನೆಯಾಗಿದೆ. ಈ ಯೋಜನೆ ಬಡಕುಟುಂಬದ ವೆಚ್ಚವನ್ನು
ಕಡಿಮೆ ಮಾಡುವುದಲ್ಲದೇ ಮಹಿಳೆಯರ ಆರೋಗ್ಯ ಸುಧಾರಣೆಯಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದರು. ಪ್ರಧಾನಮಂತ್ರಿ ಉಜ್ವಲ ಯೋಜನೆ
ಮೊದಲ ಹಂತದಲ್ಲಿ 5 ಕೋಟಿ ಫಲಾನುಭವಿ ಕುಟುಂಬಗಳಿಗೆ ಎಲ್‌ಪಿಜಿ ಗ್ಯಾಸ್ ಒಲಿ ಮತ್ತು ಸಿಲಿಂಡರ್ ನೀಡಿದ ನಂತರ ಎರಡನೇ ಹಂತದಲ್ಲಿ 5 ಕೋಟಿ ಫಲಾನುಭವಿ ಕುಟುಂಬಗಳಿಗೆ ಒಟ್ಟು ದೇಶದ 10 ಕೋಟಿ ಕುಟುಂಬಗಳಿಗೆ ಈ ಯೋಜನೆಯ ಪ್ರಯೋಜನ ನೀಡುವ ಗುರಿ ಹೊಂದಿದೆ. ಇದರಿಂದ ದೇಶದ ಎಲ್ಲ ನಾಗರಿಕರಿಗೂ ಎಲ್‌ಪಿಜಿ ಸಂಪರ್ಕ ಸಿಕ್ಕಂತಾಗುತ್ತದೆ. ಅಲ್ಲದೇ ಮಹಿಳೆಯರ
ಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದರು. ಬಿಜೆಪಿ ಯಾವಾಗಲೂ ಅಭಿವೃದ್ಧಿ ಕೆಲಸ ಮಾಡುವ ಜೊತೆಗೆ ಯುವ ಶಕ್ತಿಯ ಕಡೆಗೂ ಹೆಚ್ಚಿನ ಗಮನ ನೀಡುತ್ತಿದೆ. ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಸರಕಾರಿ ಗಂಡು ಮಕ್ಕಳ ಹಿರಿಯ
ಪ್ರಾಥಮಿಕ ಶಾಲೆ ಆವರಣದಲ್ಲಿ ಜು. 22 ಮತ್ತು 23ರಂದು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿರುವ
75ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಮೇಳದಲ್ಲಿ ಭಾಗಿಯಾಗಲಿವೆ. ಐಟಿಐ, ಡಿಪ್ಲೋಮಾ, ಪದವಿ ಮುಂತಾದ ವಿದ್ಯಾರ್ಹತೆ ಹೊಂದಿರುವ ಯುವಕ, ಯುವತಿಯರು ಉದ್ಯೋಗ ಮೇಳದಲ್ಲಿ ಭಾಗಿಯಾಗಿ ಸದುಪಯೋಗ ಮಾಡಿಕೊಳ್ಳಬೇಕು. ಯುವಕ,
ಯುವತಿಯರು ನಿರುದ್ಯೋಗಿಗಳಾಗಿ ಉಳಿದು ತಮ್ಮ ಶಕ್ತಿ ವ್ಯಯ ಮಾಡಬಾರದು ಎಂದು ಉದ್ಯೋಗ ಮೇಳ
ಹಮ್ಮಿಕೊಳ್ಳಲಾಗಿದೆ ಎಂದರು.
Related Articles
ಯೋಜನೆಯಾಗಿದೆ. ಈ ಯೋಜನೆಯಿಂದ 10 ಕೋಟಿ ಬಡ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕ ದೊರಕುತ್ತದೆ. ಇದರಿಂದ ಪರಿಸರ
ರಕ್ಷಣೆಯಾಗುತ್ತದೆ. ದೇಶದಲ್ಲಿ ಕಳೆದ 70 ವರ್ಷಗಳಲ್ಲಿ ಸಾಕಷ್ಟು ಸರಕಾರಗಳು ಆಳ್ವಿಕೆ ಮಾಡಿವೆ. ಅವುಗಳಲ್ಲಿ ಹೆಚ್ಚು ಕಾಂಗ್ರೆಸ್
ಸರಕಾರ ಆಳ್ವಿಕೆ ನಡೆಸಿದೆ. ಆದರೇ ಅವರು ಯಾವ ಅಭಿವೃದ್ಧಿ ಮಾಡಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಪ
ಸಮಯದಲ್ಲಿ ಸಾಕಷ್ಟು ಜನಪರ ಯೋಜನೆ ಅನುಷ್ಠಾನಗೊಳಿಸಿದ್ದಾರೆ ಎಂದರು. ಪ್ರಧಾನಮಂತ್ರಿ ಉಜ್ವಲ ಯೋಜನೆ ಜಿಲ್ಲಾ ನೋಡಲ್ ಅಧಿಕಾರಿ ಓಂಕಾರ ಪಾಂಡೆ ಮಾತನಾಡಿ, ಪ್ರಧಾನಮಂತ್ರಿ ಉಜ್ವಲ ಯೋಜನೆ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಕಡು ಬಡವರನ್ನು ಗುರುತಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು. ಜಿಪಂ ಸದಸ್ಯ ಬಿಂದುರಾಯಗೌಡ ಪಾಟೀಲ, ತಾಪಂ ಸದಸ್ಯರಾದ ಎಂ.ಎನ್. ಕಿರಣರಾಜ, ಶ್ರೀಶೈಲ ಚಳ್ಳಗಿ, ಸ್ಥಳೀಯ ಪದ್ಮಾ ಗ್ಯಾಸ್ ಏಜೇನ್ಸಿ ಮಾಲೀಕ ಪ್ರಶಾಂತ ಬಿರಾದಾರ, ಬಿಜೆಪಿ ಯುವ ಧುರೀಣರಾದ ಶ್ರೀಮಂತ ನಾಗೂರ, ಸಂತೋಷ ಪಾಟೀಲ ಡಂಬಳ, ಶಂಕರ ಬಗಲಿ, ಪುರಸಭೆ ಸದಸ್ಯ ಚಂದ್ರಶೇಖರ ಅಮಲಿಹಾಳ, ಶ್ರೀಕಾಂತ ಸೋಮಜಾಳ, ಎಪಿಎಂಸಿ ಸದಸ್ಯ ಶರಣು ಕತ್ತಿ, ಅಮರೇಶ ಸಾಲಕ್ಕಿ, ಶಿವು ನಾಟೀಕಾರ ವೇದಿಕೆಯಲ್ಲಿದ್ದರು.
Advertisement
ಬಿ.ಎಚ್. ಬಿರಾದಾರ, ಶಿಲ್ಪಾ ಕುದರಗೊಂಡ, ಅನಸೂಯಾ ಪರಗೊಂಡ, ಶ್ರೀಶೈಲಗೌಡ ಬಿರಾದಾರ, ಸಿದ್ರಾಯ ಪೂಜಾರಿ, ಹರ್ಷವರ್ಧನ ಪೂಜಾರಿ ಸೇರಿದಂತೆ ಮಹಿಳಾ ಫಲಾನುಭವಿಗಳು ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಸಿಂದಗಿ ಮಂಡಲ ಅಧ್ಯಕ್ಷ ಸಿದ್ದು ಬುಳ್ಳಾ ಸ್ವಾಗತಿಸಿದರು. ಮಲ್ಲು ಪೂಜಾರಿ ನಿರೂಪಿಸಿದರು. ಮೇಲನಗೌಡ ಪಾಟೀಲ ವಂದಿಸಿದರು.