Advertisement

ಮಹದಾಯಿಗಾಗಿ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಲಿ: ಸಿಎಂ

07:05 AM Dec 29, 2017 | Harsha Rao |

ಶಿರಾ: ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ನಡುವೆ ತೆಲುಗು ಗಂಗಾ ವಿವಾದ ಉಂಟಾದಾಗ
ಇಂದಿರಾಗಾಂಧಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಮಹದಾಯಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಏಕೆ ಒಪ್ಪುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Advertisement

ತುಮಕೂರು ಜಿಲ್ಲೆಯ ಶಿರಾದಲ್ಲಿ ನಡೆದ ಸಾಧನಾ ಸಂಭ್ರಮ ಸಮಾವೇಶದಲ್ಲಿ ಮಾತನಾಡಿ, ಗೋವಾ ಮುಖ್ಯಮಂತ್ರಿ,
ಪರ್ರಿಕರ್‌ ಹಾಗೂ ಯಡಿಯೂರಪ್ಪ ಇಬ್ಬರೂ ಮಹದಾಯಿ ನೀರಿನ ವಿಚಾರದಲ್ಲಿ ನಾಟಕವಾಡುತ್ತಿದ್ದಾರೆ. ಇದು ಜನತೆಗೂ
ಗೊತ್ತಿದೆ. ಈ ವಿಚಾರದಲ್ಲಿ ಮಾತು ತಪ್ಪಿರುವ ಬಿಜೆಪಿ ಮುಖಂಡರು ತಮ್ಮ ಮುಖ ಉಳಿಸಿಕೊಳ್ಳಲು ಕಾಂಗ್ರೆಸ್‌ ಕಚೇರಿ ಮುಂದೆ ಪ್ರತಿಭಟನೆಯ ನಾಟಕವಾಡಿದ್ದಾರೆ. ಒಂದು ಪಕ್ಷ ಮತ್ತೂಂದು ಪಕ್ಷದ ಕಚೇರಿ ಮುಂದೆ ಧರಣಿ ನಡೆಸಿದ್ದು ನಿಜಕ್ಕೂ ವಿಪರ್ಯಾಸ ಎಂದರು.

ಅಲ್ಲದೆ, ಯಡಿಯೂರಪ್ಪನವರು ಮೊದಲು ನಾಟಕ ನಿಲ್ಲಿಸಿ, 7.56 ಟಿಎಂಸಿ ನೀರು ಹರಿಸಿ, ಜನತೆಗೆ ಕೊಟ್ಟ ಮಾತನ್ನು
ಉಳಿಸಿಕೊಳ್ಳಲಿ. ಬಿಎಸ್‌ವೈಗೆ ಕೊಟ್ಟ ಮಾತಿನಂತೆ ಪರ್ರಿಕರ್‌ ನೀರು ಬಿಡಲಿ. ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ
ವಹಿಸಿ, ಸಮಸ್ಯೆ ಬಗೆಹರಿಸಲಿ ಎಂದರು. ಮಹದಾಯಿ ನೀರಿನ ವಿಚಾರವಾಗಿ ಕರ್ನಾಟಕ ಮುಕ್ತವಾಗಿದೆ. ಈಗಾಗಲೇ
ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ನಾನು ಗೋವಾ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೇವೆ. ಪತ್ರ ಬರೆದು ಇಷ್ಟು
ದಿನಗಳಾದರೂ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಇಲ್ಲ. ಒಂದು ಆಹ್ವಾನ ನೀಡಿದರೆ ಎಲ್ಲಾ ರಾಜಕೀಯ ಮುಖಂಡರ ಜತೆ ಮಾತುಕತೆ ನಡೆಸಿ, ಎಲ್ಲರ ಅಭಿಪ್ರಾಯ ಪಡೆದು, ಗೋವಾಕೆ ತೆರಳುತ್ತೇನೆ ಎಂದರು.

ಹಸ್ತದ ಚಿಹ್ನೆ ಇರುವ ಪಾಸ್‌
ಶಿರಾ: ಸಿಎಂ ಪಾಲ್ಗೊಂಡಿದ್ದ ತಾಲೂಕು ಆಡಳಿತದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪತ್ರಕರ್ತರಿಗೆ ತಾಲೂಕು ಆಡಳಿತ ಹಸ್ತದ ಚಿಹ್ನೆ ಇರುವ ಪಾಸ್‌ ನೀಡಿತ್ತು. ಇದು ಬಾರಿ ಚರ್ಚೆಗೆ ಗ್ರಾಸವಾದ ನಂತರ ಅದನ್ನು ವಾಪಸ್‌ ಪಡೆದು ಮತ್ತೆ ಬೇರೆ ಪಾಸ್‌
ನೀಡಲಾಯಿತು. ಅಲ್ಲದೆ, ಕಾರ್ಯಕ್ರಮ ಹಿನ್ನೆಲೆಯಲ್ಲಿ ಹಲವು ಕಾರ್ಮಿಕರಿಗೆ, ವ್ಯಾಪಾರಿಗಳಿಗೆ ಬಲವಂತವಾಗಿ ರಜೆ ನೀಡಲು
ಇಲಾಖೆಯ ಅಧಿಕಾರಿಗಳಿಗೆ ಮೌಖೀಕ ಆದೇಶ ನೀಡಲಾಗಿತ್ತು ಎನ್ನಲಾಗಿದೆ. ಅಲ್ಲದೆ, ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಎಲ್ಲೆಡೆ ಕೈ ಪಕ್ಷದ ಬ್ಯಾನರ್‌, ಧ್ವಜಗಳು, ಬಂಟಿಂಗ್ಸ್‌ಗಳು ರಾರಾಜಿಸುತ್ತಿದ್ದು, ಸಂಪೂರ್ಣ ಕಾಂಗ್ರೆಸ್‌ಮಯ ವಾತಾವರಣ ನಿರ್ಮಾಣವಾಗಿತ್ತು.

ಇಂದಿರಾ ಕ್ಯಾಂಟೀನ್‌ಗೆ ಚಾಲನೆ: ಜನರಿಗೆ ಕಡಿಮೆ ದರದಲ್ಲಿ ತಿಂಡಿ ಊಟ ನೀಡುವ ಉದ್ದೇಶದಿಂದ ರಾಜ್ಯಾದ್ಯಂತ
ಆರಂಭಿಸಲು ಉದ್ದೇಶಿಸಿರುವ ಇಂದಿರಾ ಕ್ಯಾಂಟೀನ್‌ ಬೆಂಗಳೂರು ನಂತರ ಮೊದಲ ಬಾರಿಗೆ ತುಮಕೂರು ಜಿಲ್ಲೆಯ ಶಿರಾದಲ್ಲಿ ಗುರುವಾರ ಆರಂಭಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್‌ ಉದ್ಘಾಟನೆ ನೆರವೇರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next