Advertisement

Modi: ಪ್ರಧಾನಿ ಮೋದಿ ಅತ್ಯಂತ ಜನಪ್ರಿಯ ಜಾಗತಿಕ ನಾಯಕ

12:05 AM Sep 16, 2023 | Team Udayavani |

ವಾಷಿಂಗ್ಟನ್‌: ವಿಶ್ವದ ಅತ್ಯಂತ ಜನಪ್ರಿಯ ಜಾಗತಿಕ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೂಮ್ಮೆ ನಂಬರ್‌ ಒನ್‌ ಸ್ಥಾನವನ್ನು ಆಲಂಕರಿಸಿದ್ದಾರೆ.

Advertisement

“ಗ್ಲೋಬಲ್‌ ಲೀಡರ್‌ ಅಪ್ರುವಲ್‌’ ಸರ್ವೆಯಲ್ಲಿ ಈ ಮಾಹಿತಿ ಹೊರಬಿದ್ದಿದ್ದು, ಶೇ.76ರಷ್ಟು ಮಂದಿ ಪ್ರಧಾನಿ ಮೋದಿ ಅವರನ್ನು ವಿಶ್ವದ ಅತ್ಯಂತ ಜನಪ್ರಿಯ ಜಾಗತಿಕ ನಾಯಕ ಎಂದು ರೇಟಿಂಗ್‌ ನೀಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಅತ್ಯಂತ ಜನಪ್ರಿಯ ಜಾಗತಿಕ ನಾಯಕರ ಪಟ್ಟಿಯಲ್ಲಿ ಸತತವಾಗಿ ನಂಬರ್‌ ಒನ್‌ ಸ್ಥಾನವನ್ನು ಮೋದಿ ಪಡೆಯುತ್ತಾ ಬಂದಿ­ದ್ದಾರೆ. ರಾಜಕೀಯ ಗುಪ್ತಚರ ಸಂಶೋ­ಧನಾ ಸಂಸ್ಥೆ ಸೆ.6ರಿಂದ 12ರವರೆಗೆ 22 ಜಾಗತಿಕ ನಾಯಕರ ಹೆಸರಿನಲ್ಲಿ ಸರ್ವೆ ನಡೆಸಿದೆ. ಇದರ ಪ್ರಕಾರ, ಸ್ವಿಜರ್ಲೆಂಡ್‌ ಅಧ್ಯಕ್ಷ ಅಲೈನ್‌ ಬರ್ಸೆಟ್‌(ಶೇ.64) ಎರಡನೇ ಸ್ಥಾನ, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌(ಶೇ.40) ಏಳನೇ ಸ್ಥಾನ ಪಡೆದಿದ್ದಾರೆ. ಕೆನಡಾ ಅಧ್ಯಕ್ಷ ಜಸ್ಟಿನ್‌ ಟ್ರಾಡ್ನೂ ಅತ್ಯಂತ ಹೆಚ್ಚು ಶೇ.58ರಷ್ಟು ಅಸಮ್ಮತಿ(ಡಿಸ್‌ಅಪ್ರುವಲ್‌) ರೇಟಿಂಗ್‌ ಪಡೆದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next