Advertisement

ಪ್ರಧಾನಿ ಮೋದಿ “ದ ಬಾಸ್‌’: ಆಸ್ಟ್ರೇಲಿಯಾದ ಪ್ರಧಾನಿ ಅಲ್ಬನೀಸ್‌

12:38 AM May 24, 2023 | Team Udayavani |

ಆಸ್ಟ್ರೇಲಿಯಾ: ಪ್ರಧಾನಿ ನರೇಂದ್ರ ಮೋದಿಯವರು “ದ ಬಾಸ್‌’ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆ್ಯಂಟನಿ ಅಲ್ಬನೀಸ್‌ ಬಣ್ಣಿಸಿದ್ದಾರೆ. ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದ ಜನಪ್ರಿಯ ಪಾಪ್‌ ಗಾಯಕ ಬ್ರೂಸ್‌ ಸ್ಪ್ರಿಂಗ್‌ಸ್ಟೀನ್‌ ಅವರಷ್ಟೇ ಪ್ರಸಿದ್ಧರಾಗಿದ್ದಾರೆ.

Advertisement

ಬ್ರೂಸ್‌ರನ್ನು ಅಭಿಮಾನಿಗಳು “ದ ಬಾಸ್‌’ ಎಂದು ಕರೆಯುತ್ತಿದ್ದರು. ಈಗ ನಾನು ಭಾರತದ ಪ್ರಧಾನಿಯವರನ್ನು ಆ ಹೆಸರಿನಿಂದ ಕರೆಯುತ್ತಿದ್ದೇನೆ ಎಂದರು. ಕಳೆದ ಬಾರಿ ಈ ವೇದಿಕೆಯಲ್ಲಿ ಗಾಯಕನನ್ನು ನೋಡಿದ್ದೆ ಮತ್ತು ಅವರಿಗೆ ಹೆಚ್ಚಿನ ಸ್ವಾಗತ ಸಿಕ್ಕಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಭೇಟಿಯ ಸಂದರ್ಭದಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ ಎಂದರು.

ಭಾರತ ಜಗತ್ತಿನ ಮೂರನೇ ಅತ್ಯಂತ ದೊಡ್ಡ ಅರ್ಥವ್ಯವಸ್ಥೆಯಾಗಿ ಬೆಳೆಯಲಿದೆ. ಒಂದು ವರ್ಷದ ಹಿಂದೆ ನಾನು ಆಸ್ಟ್ರೇಲಿಯಾದ ಪ್ರಧಾನಿಯಾದ ಬಳಿಕ ಇಬ್ಬರ ನಡುವೆ ಇದು ಆರನೇ ಭೇಟಿಯಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಎಷ್ಟು ಗಾಢ ಬಾಂಧವ್ಯ ಇದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಅಲ್ಬನೀಸ್‌ ಬಣ್ಣಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next