Advertisement
ಉಡುಪಿ ಮತ್ತು ಶೃಂಗೇರಿ ಭೇಟಿಯ ಹಿನ್ನೆಲೆಯಲ್ಲಿ ಮಂಗಳವಾರ ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ| ಬಿ.ಎಂ. ಹೆಗ್ಡೆ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಚೀನದ ಆಕ್ರಮಣಕಾರಿ ನೀತಿಯ ವಿರುದ್ಧ ಮೋದಿ ಸರಕಾರದ ದುರ್ಬಲ ನಿಲುವಿನ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದೇನೆ. ಉತ್ತರಾಖಂಡದಲ್ಲಿ ಪುರಾತನ ದೇವಾಲಯಗಳನ್ನು ಸರಕಾರ ವಶಕ್ಕೆ ಪಡೆದುಕೊಳ್ಳುವ ಪ್ರಯತ್ನ ವಿರುದ್ಧ ಹೋರಾಡಿದ್ದೇನೆ. ರಾಮಸೇತು ಒಡೆಯುವುದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದೆ. ಇದನ್ನು ಹೆರಿಟೇಜ್ ಆಗಿ ಪರಿಗಣಿಸುವ ಕಾರ್ಯವನ್ನು ಮೋದಿ ಸರಕಾರ ಮಾಡಿಲ್ಲ. ಈ ಕುರಿತ ಅಸಮಾಧಾನವನ್ನು ಪತ್ರಗಳ ಮೂಲಕ ಹಲವು ಬಾರಿ ಗಮನಕ್ಕೆ ತಂದಿದ್ದೇನೆ ಎಂದರು. ತಪ್ಪುಗಳನ್ನು ಸರಿಪಡಿಸಿಕೊಳ್ಳಲಿ
ನಾನು ಎಕಾನಾಮಿಕ್ಸ್ ಪ್ರೊಫೆಸರ್. ಕೊರೊನಾದ ಹೊರತಾಗಿಯೂ ದೇಶದ ಆರ್ಥಿಕ ಅಭಿವೃದ್ಧಿಗೆ ವಿಪುಲ ಅವ ಕಾಶಗಳಿವೆ. ಆದರೆ ಸರಕಾರ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಕೆಲವು ತಪ್ಪು ನೀತಿ ಗಳು ಇದಕ್ಕೆ ಕಾರಣವಾಗಿದ್ದು, ಇದನ್ನು ಸರಿಪಡಿಸಿಕೊಳ್ಳಬೇಕು ಎಂಬುದು ನನ್ನ ನಿಲುವು. ನಾವು ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿದ್ದೇವೆ. ಸರ್ವಾಧಿಕಾರಿ ವ್ಯವಸ್ಥೆಯಲ್ಲಿ ಅಲ್ಲ ಎಂದು ಪ್ರಕ್ರಿಯಿಸಿದರು.
Related Articles
ನಾನು ಜನಸಂಘದ ಜತೆಯೇ ಇದ್ದವನು. ಪ್ರಸ್ತುತ ಮೋದಿ ನೀತಿಯ ಬಗ್ಗೆ ಅಸಮಾಧಾನ ಇದೆಯೇ ಹೊರತು ಬಿಜೆಪಿ ಬಗ್ಗೆ ಅಲ್ಲ. ಬಿಜೆಪಿಯನ್ನು ತೊರೆಯುವ ಪ್ರಶ್ನೆಯೇ ಇಲ್ಲ. ಇನ್ನು ಮುಂದೆಯೂ ಬಿಜೆಪಿಯಲ್ಲೇ ಇರುತ್ತೇನೆ ಎಂದರು.
Advertisement
ಇದನ್ನೂ ಓದಿ:ಇಂದಿರಾಗಾಂಧಿ ಕುರಿತ ಛಾಯಾಚಿತ್ರ ಪ್ರದರ್ಶನಕ್ಕೆ ತೆರೆ
ಮಮತಾ ಭೇಟಿಯಲ್ಲಿ ರಾಜಕೀಯ ಉದ್ದೇಶವಿಲ್ಲ“ಪಶ್ಚಿಮ ಬಂಗಾಲದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ನನ್ನ ಹಳೆಯ ಸ್ನೇಹಿತೆ; ಅವರನ್ನು ಹೊಸ ದಿಲ್ಲಿ ಯಲ್ಲಿ ಭೇಟಿ ಮಾಡಿರು ವುದಕ್ಕೆ ಯಾವುದೇ ರಾಜಕೀಯ ಅರ್ಥ ಕಲ್ಪಿಸು ವುದು ಬೇಡ. ಅವರು ಬಂಗಾಲಕ್ಕೆ ಈ ಹಿಂದೆ ನನ್ನನ್ನು ಅಹ್ವಾ ನಿಸಿ ದ್ದರು. ಕಾರಣಾಂತರಗಳಿಂದ ಹೋಗಿರಲಿಲ್ಲ. ಬಂಗಾಲದಲ್ಲಿ ಹಿಂದೂ ದೇವಾಲಯ ಗಳ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಲ್ಲದೆ ಹಿಂದೂಗಳ ಭಾವನೆಗಳನ್ನು ಅವರಿಗೆ ತಿಳಿಸಿದ್ದೇನೆ ಎಂದು ಸ್ವಾಮಿ ಸ್ಪಷ್ಟಪಡಿಸಿದರು. ಇಂದು ಶೃಂಗೇರಿ, ಉಡುಪಿಗೆ ಭೇಟಿ
ಡಾ| ಸ್ವಾಮಿ ಅವರು ಸಂಜೆ 6.30ಕ್ಕೆ ಮಂಗಳೂರಿಗೆ ಆಗಮಿಸಿ ಹ್ಯಾಟ್‌ಹಿಲ್ ಸಮೀಪ ಡಾ| ಕೃಷ್ಣ ಶೆಟ್ಟಿ ಅವರ ನಿವಾಸದಲ್ಲಿ ರಾತ್ರಿ ವಾಸ್ತವ್ಯ ಹೂಡಿದರು. ಬುಧವಾರ ಬೆಳಗ್ಗೆ ಶೃಂಗೇರಿಗೆ ತೆರಳಿ ಮಧ್ಯಾಹ್ನ ಉಡುಪಿಯ ರಾಜಾಂಗಣದಲ್ಲಿ ಕಾರ್ಯಕ್ರಮದಲ್ಲಿ ಭಾಗ ವಹಿಸುವರು.