Advertisement

PM Modi;ಇಂದು 71000ಕ್ಕೂ ಅಧಿಕ ಮಂದಿಗೆ ಉದ್ಯೋಗ ಪತ್ರ ವಿತರಣೆ

12:55 AM Dec 23, 2024 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ 71000ಕ್ಕೂ ಅಧಿಕ ಮಂದಿಗೆ ಉದ್ಯೋಗದ ನೇಮಕ ಪತ್ರ ನೀಡಲಿದ್ದಾರೆ. ಕೇಂದ್ರ ಸರಕಾರದ ಗೃಹ, ಅಂಚೆ ಇಲಾಖೆ, ಉನ್ನತ ಶಿಕ್ಷಣ, ವಿತ್ತೀಯ ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೇರಿ ಹಲವು ಇಲಾಖೆಗಳಲ್ಲಿ ಹೊಸಬರನ್ನು ನೇಮಕ ಮಾಡಲಾಗಿದೆ. ಅವೆರಲ್ಲರಿಗೆ ಪ್ರಧಾನಿ ವರ್ಚುವಲ್‌ ಆಗಿ ನಡೆಯಲಿ­ರುವ ಕಾರ್ಯಕ್ರಮದಲ್ಲಿ ನೇಮಕದ ಪ್ರಮಾಣ ಪತ್ರ ನೀಡಲಿದ್ದಾರೆ.

Advertisement

ದೇಶದ 45 ಸ್ಥಳಗಳಲ್ಲಿ ಕಾರ್ಯ ಕ್ರಮ ನಡೆಯಲಿದೆ. ಪ್ರಮಾಣಪತ್ರ ವಿತರಿಸಿದ ಬಳಿಕ ಮೋದಿಯವರು ಭಾಷಣ ಮಾಡಲಿದ್ದಾರೆ ಎಂದು ಎಂದು ರವಿವಾರ ಪ್ರಧಾನಮಂತ್ರಿಗಳ ಕಚೇರಿ ತಿಳಿಸಿದೆ. ದೇಶದಲ್ಲಿ ಉದ್ಯೋಗ ಸೃಷ್ಟಿಯ ಅನ್ವಯ ಈ ಕಾರ್ಯಕ್ರಮ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next