Advertisement

Kasaragod To Thiruvananthapuram: ವಂದೇ ಭಾರತ್‌ಗೆ ಪ್ರಧಾನಿ ಮೋದಿ ಚಾಲನೆ

11:46 PM Sep 24, 2023 | Team Udayavani |

ಕಾಸರಗೋಡು: ಕೇಂದ್ರ ರೈಲ್ವೇ ಇಲಾಖೆ ಕೇರಳಕ್ಕೆ ಕೊಡುಗೆಯಾಗಿ ನೀಡಿದ ಎರಡನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ರವಿವಾರ ಆನ್‌ಲೈನ್‌ ಮೂಲಕ ಚಾಲನೆ ನೀಡಿದರು.

Advertisement

ಈ ರೈಲು ಕಾಸರಗೋಡು – ತಿರುವನಂತಪುರ ನಡುವೆ ಮಂಗಳವಾರ ಹೊರತುಪಡಿಸಿ ವಾರದಲ್ಲಿ 6 ದಿನ ಸಂಚರಿಸಲಿದೆ.

ಕಾಸರಗೋಡು ರೈಲು ನಿಲ್ದಾಣದಲ್ಲಿ ದಕ್ಷಿಣ ರೈಲ್ವೇ ಆಯೋಜಿಸಿದ ಕಾರ್ಯಕ್ರಮದಲ್ಲಿ ರೈಲನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ಕೇಂದ್ರ ವಿದೇಶಾಂಗ, ಸಂಸದೀಯ ವ್ಯವಹಾರಗಳ ಸಹಾಯಕ ಸಚಿವ ವಿ. ಮುರಳೀಧರನ್‌, ರಾಜ್ಯ ಕ್ರೀಡೆ, ರೈಲ್ವೇ ಖಾತೆ ಸಚಿವ ವಿ. ಅಬ್ದು ರಹಿಮಾನ್‌, ಸಂಸದ ರಾಜ್‌ಮೋಹನ್‌ ಉಣ್ಣಿತ್ತಾನ್‌, ಶಾಸಕ ಎನ್‌.ಎ. ನೆಲ್ಲಿಕುನ್ನು ಇದ್ದರು.

ನೂತನ ವಂದೇ ಭಾರತ್‌ ರೈಲು ಗಳು ದೇಶದಾದ್ಯಂತ ಸಂಚಾರ ಹಾಗೂ ಸಂಪರ್ಕ ಉತ್ತಮ ಪಡಿಸಲು, ಪ್ರಯಾ
ಣಿಕರಿಗೆ ಅಂತಾರಾಷ್ಟ್ರೀಯ ಸೌಕರ್ಯಗಳನ್ನು ನೀಡುವ ಪ್ರಧಾನಮಂತ್ರಿ ಯವರ ಸಂಕಲ್ಪವನ್ನು ಸಾಕಾರಗೊಳಿ ಸುವ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಸಚಿವ ವಿ. ಮುರಳೀಧರನ್‌ ಈ ಸಂದರ್ಭ ತಿಳಿಸಿದರು.

ಕೇರಳದ ಮೊದಲ ವಂದೇ ಭಾರತ್‌ ರೈಲು ಎಪ್ರಿಲ್‌ 25ರಂದು ಆರಂಭವಾಗಿತ್ತು. ಅದು ಕೂಡ ತಿರುವನಂತಪುರ -ಕಾಸರಗೋಡು ನಡುವೆ ಸಂಚರಿಸುತ್ತಿದೆ. ರವಿವಾರ ಆರಂಭವಾಗಿರುವ 2ನೇ ರೈಲು ಈ ರೈಲು ಕಾಸರಗೋಡಿನಿಂದ ಆಲಪ್ಪುಳ ಮಾರ್ಗವಾಗಿ ತಿರುವನಂತ ಪುರ ತನಕ ಸಂಚರಿಸಲಿದೆ.

Advertisement

ಜಿಲ್ಲೆಯಲ್ಲಿ ಸಂಭ್ರಮ
ಸಂಭ್ರಮ, ಸಡಗರದೊಂದಿಗೆ ಎರಡನೇ ವಂದೇ ಭಾರತ್‌ ರೈಲು ಗಾಡಿ ಕಾಸರಗೋಡಿನಿಂದ ಪ್ರಯಾಣ ಆರಂಭಿಸಿತು. ವಿವಿಧ ಕ್ಷೇತ್ರಗಳ ಮುಖಂಡರು, ವಿದ್ಯಾರ್ಥಿಗಳು, ಸಾರ್ವಜನಿಕರು ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗ ವಹಿಸಿದ್ದರು. ಕಾಸರಗೋಡು ರೈಲ್ವೇ ಪ್ಯಾಸೆಂಜರ್ ಅಸೋಸಿಯೇಶನ್‌ ಪದಾಧಿಕಾರಿಗಳು ಪ್ರಯಾಣಿಕರನ್ನು, ಅಧಿಕಾರಿಗಳನ್ನು, ಸಿಬಂದಿಯನ್ನು ಸ್ವಾಗತಿಸಿ ಸಿಹಿ ವಿತರಿಸಿದರು. ಮಂಗಳವಾರ ತಿರುವನಂತಪುರದಿಂದ ದೈನಂದಿನ ಸೇವೆ ಆರಂಭಗೊಳ್ಳಲಿದೆ.

ವೇಳಾಪಟ್ಟಿ
ಬೆಳಗ್ಗೆ 7ಕ್ಕೆ ಕಾಸರಗೋಡಿನಿಂದ ಹೊರಟು ಸಂಜೆ 3.05ಕ್ಕೆ ತಿರುವನಂತಪುರ ತಲುಪಲಿದೆ. ಸಂಜೆ 4.05ಕ್ಕೆ ತಿರುವನಂತಪುರದಿಂದ ಹೊರಟು ರಾತ್ರಿ 11.55ಕ್ಕೆ ಕಾಸರಗೋಡು ತಲುಪಲಿದೆ.

Advertisement

Udayavani is now on Telegram. Click here to join our channel and stay updated with the latest news.

Next