Advertisement

ಪ್ರಧಾನ ಮಂತ್ರಿ ಆವಾಸ್‌ ಮನೆಗಳ ನಿರ್ಮಾಣದಲ್ಲಿ ದುರುಪಯೋಗ

06:38 AM May 30, 2020 | Lakshmi GovindaRaj |

ಸಕಲೇಶಪುರ: ಪಟ್ಟಣದ ಕುಶಾಲ ನಗರ ಬಡಾವಣೆ ವಿವಿಧೆಡೆ ವಸತಿ ಹೀನರಿಗಾಗಿ ಕರ್ನಾಟಕ ಕೊಳಚೆ ಮಂಡಳಿ ವತಿಯಿಂದ ನಡೆಯುತ್ತಿರುವ ಕಾಮಗಾರಿಯಲ್ಲಿ ವ್ಯಾಪಕ ಅವ್ಯವಹಾರ ಉಂಟಾಗು ತ್ತಿದೆ ಎಂದು ಮಾಜಿ ಶಾಸಕ ಎಚ್‌.ಎಂ. ವಿಶ್ವನಾಥ್‌  ಆರೋಪಿಸಿದ್ದಾರೆ.

Advertisement

ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿ ಕರ್ನಾಟಕ ಕೊಳಚೆ ಮಂಡಳಿ ವಸತಿ ಹೀನರಿಗಾಗಿ 14 ಕೋಟಿ ರೂ. ವೆಚ್ಚದ ಮನೆಗಳ ನಿರ್ಮಾಣದಲ್ಲಿ ಭಾರೀ ದುರುಪ ಯೋಗವಾಗುತ್ತಿದೆ. ಇದರಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ಹಾಸನದ  ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಸ್ಥಳೀಯರು ಸೇರಿಕೊಂಡು ಅವ್ಯವಹಾರ ನಡೆಸಿ ಮನೆ ಇದ್ದವರಿಗೇ ಮನೆ ನಿರ್ಮಾಣ ಮಾಡಿಕೊಡುತ್ತಿದ್ದಾರೆ ಎಂದು ದೂರಿದ್ದಾರೆ.

ಘೋಷಿಸಿದ ಕೊಳಚೆ ಪ್ರದೇಶದ  ವ್ಯಾಪ್ತಿ ಮೀರಿ ಕರ್ನಾಟಕ ಗೃಹ ಮಂಡಳಿಗೆ ಸೇರಿದ ಮನೆಗಳನ್ನು ಕೆಡವಿ ಹೊಸದಾಗಿ ಮನೆ ಕಟ್ಟಲು ಪ್ರಾರಂಭಿಸಲಾಗಿದೆ. ಇಲ್ಲಿ ಯಾವುದೇ ನಿಯಮ ಪಾಲಿಸುತ್ತಿಲ್ಲ. ಕೂಡಲೆ ಕಾಮಗಾರಿ ಸ್ಥಗಿತಗೊಳಿಸಿ ಸೂಕ್ತ ತನಿಖೆ ನಡೆಸಿ ಅರ್ಹ ಫ‌ಲಾನುಭವಿಗಳಿಗೆ ಈ ಯೋಜನೆ ಸೌಲಭ್ಯ ದೊರೆಯುವಂತೆ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಆಯುಕ್ತರು ಗಮನವರಿಸಬೇಕೆಂದು ಮಾಜಿ ಶಾಸಕ ಎಚ್‌. ಎಮ್‌ ವಿಶ್ವನಾಥ್‌ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next