Advertisement
ಮಂಗಳವಾರ ತಮ್ಮ ಆರ್.ಟಿ.ನಗರ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಸುಶಾಸನ ಮತ್ತು ಅಭಿವೃದ್ಧಿ ಪರ ಆಡಳಿತ ಮೆಚ್ಚಿಕೊಳ್ಳುವವರು. ಪ್ರಧಾನಿಯವರ ಮೆಚ್ಚುಗೆ ನನ್ನಲ್ಲಿ ಇನ್ನಷ್ಟು ಶಕ್ತಿಯನ್ನು ತುಂಬಿದೆ. ಈ ಮೆಚ್ಚುಗೆ ಸರ್ಕಾರ ಹೆಚ್ಚಿನ ದಕ್ಷತೆ ಹಾಗೂ ಬದ್ಧತೆಯಿಂದ ಕೆಲಸ ಮಾಡಲು ಪುಷ್ಟಿ ನೀಡಿದೆ ಎಂದರು.
ಪ್ರಧಾನಿಯವರ ರಾಜ್ಯ ಪ್ರವಾಸದ ಕುರಿತು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರು ಮಾಡುತ್ತಿರುವ ಟ್ವೀಟ್‌ಗಳ ಬಗ್ಗೆ ಪ್ರತಿಕ್ರಿಯಿಸಿ, ಇಡೀ ದೇಶಕ್ಕೆ ಬಂದೊದಗಿದ್ದ ಕರೋನಾ ಸಂಕಷ್ಟವನ್ನು ಯಶಸ್ವಿಯಾಗಿ ಪ್ರಧಾನಿ ಮೋದಿಯವರು ನಿರ್ವಹಿಸಿರುವುದನ್ನು ಇಡೀ ವಿಶ್ವವೇ ಕೊಂಡಾಡುತ್ತದೆ. ಕೊರೊನಾ ಸಂದರ್ಭದಲ್ಲಿ ಕರ್ನಾಟಕಕ್ಕೆ ಸಾವಿರಾರು ಕೋಟಿಗಳನ್ನು ನೀಡಿದ್ದಾರೆ. ಕೋವಿಡ್ ನಿರ್ವಹಣೆ, ಔಷಧಿಗಳು, ಲಸಿಕೆಗಳು, ವೆಂಟಿಲೇಟರ್, ಆಕ್ಸಿಜನ್ ಉತ್ಪಾದಿಸುವ ಉಪಕರಣಗಳು ಕೇಂದ್ರದಿಂದ ನೀಡಿರುವುದು ಎಲ್ಲರಿಗೂ ತಿಳಿದಿದೆ. ಆದರೂ, ರಾಜಕೀಯವಾಗಿ ಮಾತನಾಡುವುದು ಸರಿಯಲ್ಲ. ಜನರಿಗೆ ಎಲ್ಲವೂ ನೆನಪಿದೆ. ಮೋದಿಯವರು ಕೋವಿಡ್ ಸಂದರ್ಭದಲ್ಲಿ ರಾಜ್ಯಕ್ಕೆ ಮಾಡಿರುವ ಸಹಾಯ, ಅವರ ಜನಪ್ರಿಯತೆಯನ್ನು ಕಂಡು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು. ಪಂಚಮಸಾಲಿ ಸಮುದಾಯ ಸ್ವಾಮೀಜಿಗಳ ಜೊತೆ ಮಾತುಕತೆ ನಡೆಸಲಾಗುವುದೇ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಸಮುದಾಯದವರು, ಸಚಿವ ಸಿ.ಸಿ.ಪಾಟೀಲ್ ಮತ್ತು ಸ್ವಾಮೀಜಿಗಳು ನಾಳೆ(ಬುಧವಾರ) ಸಭೆ ನಡೆಸುವ ಸಾಧ್ಯತೆ ಇದೆ ಎಂದರು ತಿಳಿಸಿದರು.