Advertisement

Prime Minister: ಕಡಿಮೆ ಶಿಕ್ಷಿತ ಪ್ರಧಾನಿ ಅಪಾಯಕಾರಿ!

07:32 PM Apr 07, 2023 | Team Udayavani |

ನವದೆಹಲಿ: ದೆಹಲಿ ಅಬಕಾರ ನೀತಿ ಹಗರಣದಲ್ಲಿ ಜೈಲುಪಾಲಾಗಿರುವ, ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯ ಅಲ್ಲಿಂದಲೇ ಪ್ರಧಾನಿ ಮೋದಿ ವಿರುದ್ಧ ಯುದ್ಧ ಮುಂದುವರಿಸಿದ್ದಾರೆ. ದೇಶವಾಸಿಗಳನ್ನುದ್ದೇಶಿಸಿ ಅವರು ಬರೆದಿರುವ ಪತ್ರದಲ್ಲಿ, ದೇಶಕ್ಕೆ ಕಡಿಮೆ ಶಿಕ್ಷಿತ ಪ್ರಧಾನಿಯಿರುವುದು ಅಪಾಯಕಾರಿ ಎಂದಿದ್ದಾರೆ. ಈ ಪತ್ರವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹಂಚಿಕೊಂಡಿದ್ದಾರೆ.

Advertisement

ಪತ್ರದಲ್ಲೇನಿದೆ?: ನರೇಂದ್ರ ಮೋದಿ ವಿಜ್ಞಾನವನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಅವರಿಗೆ ಶಿಕ್ಷಣದ ಮಹತ್ವವೂ ತಿಳಿಯುವುದಿಲ್ಲ. ಆದ್ದರಿಂದ ಅತ್ಯುತ್ತಮ ಶಿಕ್ಷಣ ಪಡೆದಿರುವ ಪ್ರಧಾನಿಯನ್ನು ಹೊಂದುವುದು ಇಂದಿನ ಅಗತ್ಯ. ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ 60,000ಕ್ಕೂ ಅಧಿಕ ಶಾಲೆಗಳು ಬಾಗಿಲು ಹಾಕಿವೆ ಎಂದು ಸಿಸೋಡಿಯ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಇದಕ್ಕೂ ಕೆಲದಿನಗಳ ಮುನ್ನ ಮೋದಿ ಪದವಿ ಪ್ರಮಾಣಪತ್ರ ಬಹಿರಂಗಪಡಿಸುವಂತೆ ಕೇಜ್ರಿವಾಲ್‌ ಪ್ರಧಾನಿ ಸಚಿವಾಲಯಕ್ಕೆ ಆರ್‌ಟಿಐ ಅರ್ಜಿ ಹಾಕಿದ್ದರು. ಇದಕ್ಕೂ ತಡೆ ನೀಡಿದ್ದ ಗುಜರಾತ್‌ ಉಚ್ಚ ನ್ಯಾಯಾಲಯ ಅರ್ಜಿ ತಿರಸ್ಕರಿಸಿದ್ದು ಮಾತ್ರವಲ್ಲ, ಕೇಜ್ರಿಗೆ 25,000 ರೂ. ದಂಡ ಹಾಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next