Advertisement

ಪ್ರಾಥಮಿಕ ಥರ್ಮೋಮೀಟರ್‌ ಕಾಣಿಕೆ

06:26 AM May 18, 2020 | Lakshmi GovindaRaj |

ದೇವನಹಳ್ಳಿ: ಕೊರೊನಾ ತಡೆಗೆ ಪ್ರತಿಗ್ರಾಮದ ಆಶಾಕಾರ್ಯಕರ್ತರು ಸ್ಕ್ರೀನಿಂಗ್‌ ಯಂತ್ರದಿಂದ ಪರೀಕ್ಷಿಸಿದರೆ ಸಹಕಾರಿಯಾಗುತ್ತದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಕೊಯಿರ ಗ್ರಾಪಂ ಸದಸ್ಯ ಸಿ.ಪ್ರಸನ್ನಕುಮಾರ್‌ ತಿಳಿಸಿದರು.

Advertisement

ತಾಲೂಕಿನ ಕೊಯಿರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ವಿ.ಶಾಂತಕುಮಾರ್‌ ದೇಹದ ಉಷ್ಣಾಂಶ ತಪಾಸಣೆ ಮಾಡುವ ಥರ್ಮೋ ಮೀಟರ್‌ ಹಾಗೂ ಮಾಸ್ಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರೋಗ್ಯ ಕೇಂದ್ರಗಳು ಕಾರ್ಯನಿರ್ವ ಹಿಸುತ್ತಿದ್ದು, ಕೊರೊನಾ ಹಿನ್ನೆಲೆಯಲ್ಲಿ ವೈದ್ಯರು ಎಚ್ಚರಿಕೆಯಿಂದ ಕಾರ್ಯನಿರ್ವ ಹಿಸುವಂತೆ ಆಗಿದೆ.

ದಾನಿಗಳ ರೂಪದಲ್ಲಿ ಆರೋಗ್ಯ ಕೇಂದ್ರಕ್ಕೆ ಸ್ಕ್ರೀನಿಂಗ್‌ ನೀಡಿರುವು  ದಿಂದ ಆಶಾ  ಕಾರ್ಯಕರ್ತೆಯರು ಗ್ರಾಮಗಳಲ್ಲಿ ಸರ್ವೇ ಮಾಡುವಾಗ ಪ್ರತಿಯೊಬ್ಬರನ್ನು ಪರೀಕ್ಷೆ ಮಾಡಲು ಸಹಕಾರಿಯಾಗುತ್ತದೆ. ಅದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು. ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ದ್ಯಾವರ  ಹಳ್ಳಿ ಶಾಂತಕುಮಾರ್‌ ಮಾತ ನಾಡಿ, ಸಿಬ್ಬಂದಿಗೆ ಅನುಕೂಲದ ಹಿತದೃಷ್ಟಿ ಯಿಂದ ಉಚಿತವಾಗಿ ಥರ್ಮೋ ಮೀಟರ್‌, ಮಾಸ್ಕ್ ಹಾಗೂ ಸಿಬ್ಬಂದಿಗೆ ಕಿಟ್‌ ಹಂಚಲಾಗುತ್ತಿದೆ ಎಂದರು.

ಖಾದಿ ಬೋರ್ಡ್‌ ಮಾಜಿ ಅಧ್ಯಕ್ಷ ಶ್ರೀನಿವಾಸ್‌, ಕೊಯಿರ  ಗ್ರಾಪಂ ಅಧ್ಯಕ್ಷೆ ಅಂಜಲಿ, ಮಾಜಿ ಅಧ್ಯಕ್ಷ ಶ್ರೀನಿವಾಸ್‌, ಮುಖಂಡ ನಂಜೇಗೌಡ, ಪಿಡಿಒ ಮಲ್ಲೇಶ್‌, ಆಸ್ಪತ್ರೆ ವೈದ್ಯ ಪ್ರಸನ್ನಕುಮಾರ್‌, ಸಿಬ್ಬಂದಿ, ಮುಖಂಡರು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next