Advertisement

ಗುಂಡಿಬೈಲು ಹಿ.ಪ್ರಾ. ಶಾಲೆಯ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ

03:00 AM Jul 13, 2017 | Team Udayavani |

ಉಡುಪಿ: ಸುಮಾರು 8 ದಶಕಗಳ ಇತಿಹಾಸ ಉಳ್ಳ  ಗುಂಡಿಬೈಲು ಹಿ. ಪ್ರಾ. ಶಾಲೆಯ ಜೀರ್ಣೋದ್ಧಾರಕ್ಕೆ ಜು. 12ರಂದು ಶಿಲಾನ್ಯಾಸ ನೆರವೇರಿಸಲಾಯಿತು.

Advertisement

ಶ್ರೀ ಸೋದೆ ವಾದಿರಾಜ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಶಿಲಾನ್ಯಾಸ ನೆರವೇರಿಸಿದರು. ಮಸ್ತಕವು ವಿದ್ಯಾಲಯವಾದರೆ, ಹೃದಯವು ದೇವಾಲಯವಾಗಿರುತ್ತದೆ. ಈ ದಿಶೆಯಲ್ಲಿ  ಮಸ್ತಕ ಮತ್ತು ಹೃದಯವು ಸದೃಢವಾಗಿರಬೇಕು ಎಂದು ಅವರು ಆಶೀರ್ವದಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಪೇಜಾವರಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಮಸೀದಿ, ಮಂದಿರ, ಇಗರ್ಜಿಗಳ ಜೀರ್ಣೋದ್ಧಾರ ಮಾಡಿದಂತೆ ವಿದ್ಯಾಲಯಗಳೂ ಪ್ರಥಮ ಆದ್ಯತೆಯಲ್ಲಿ ನವೀರಕಣಗೊಳ್ಳಬೇಕು. ಸುಮಾರು 10 ಕೋಟಿ ರೂಪಾಯಿಗಳ ಯೋಜನೆಯನ್ನು ಪ್ರಥಮ ಹಂತದಲ್ಲಿ 1.5 ಕೋ.ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ. ಸಾರ್ವಜನಿಕರು ಈ ಸತ್ಕಾರ್ಯಕ್ಕೆ ಉದಾರ ದೇಣಿಗೆಯನ್ನು ನೀಡಿ ಸಹಕರಿಸಬೇಕೆಂದು ಕೋರಿದರು. ಉಡುಪಿ ಮಾಜಿ ಶಾಸಕ ಕೆ. ರಘುಪತಿ ಭಟ್‌, ಡಿಡಿಪಿಐ ವೆಂಕಟೇಶ್‌ ನಾಯ್ಕ, ನಗರ ಸಭಾ ಸದಸ್ಯರಾದ ಗೀತಾ ಶೆಟ್ಟಿ, ನಿವೃತ್ತ ಬ್ಯಾಂಕಿ ಅಧಿಕಾರಿ ಸುಬ್ರಹ್ಮಣ್ಯ ಭಟ್‌, ಪ್ರಾಧ್ಯಾಪಕ ಎ.ಪಿ. ಭಟ್‌ ಮತ್ತಿತರರು ಉಪಸ್ಥಿತರಿದ್ದರು. ಶ್ರೀನಿವಾಸ ಬಲ್ಲಾಳ್‌ ಸ್ವಾಗತಿಸಿ, ಗುಂಡಿಬೈಲು ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಕಮಲಿನಿ ಆರ್‌ ಭಟ್‌ ವಂದಿಸಿದರು. ಕನ್ನಡ ಮಾಧ್ಯಮ ವಿಭಾಗದ ಮುಖ್ಯೋಪಾಧ್ಯಾಯರಾದ ಮಾಲತಿ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಹಳೆ ವಿದ್ಯಾರ್ಥಿ ಪ್ರೊ| ದಯಾನಂದ ಶೆಟ್ಟಿ ಪ್ರಸ್ತಾವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next