Advertisement
ಕೊರೊನಾ ಇಳಿಮುಖವಾಗುತ್ತಿರುವ ಕಾರಣ ರಾಜ್ಯದಲ್ಲಿ 1ರಿಂದ 10ರ ವರೆಗೆ ಪೂರ್ಣ ಪ್ರಮಾಣದಲ್ಲಿ ತರಗತಿಗಳು ಈಗಾಗಲೇ ಆರಂಭವಾಗಿವೆ. ಅಂತೆಯೇ ಸೋಮವಾರ ದಿಂದ ಶುಕ್ರವಾರದ ವರೆಗೆ ಬೆಳಗ್ಗೆ 9.30ರಿಂದ ಮಧ್ಯಾಹ್ನ 3.30ರ ವರೆಗೆ ಪೂರ್ವ ಪ್ರಾಥಮಿಕ ತರಗತಿ ನಡೆಸುವಂತೆ ಸೂಚನೆ ನೀಡಲಾಗಿದೆ. ಪೋಷಕರಿಂದ ಅನುಮತಿ ಪತ್ರ ಕಡ್ಡಾಯ .
ಸೋಂಕು ನಿವಾರಕಗಳಿಂದ ಕಡ್ಡಾಯವಾಗಿ ಕೊಠಡಿ ಶುದ್ಧೀ ಕರಿಸಬೇಕು. ಮಕ್ಕಳು ಮನೆಯಿಂದಲೇ ಉಪಾಹಾರ, ಕುಡಿ ಯುವ ನೀರು ತರಬೇಕು.ಅವಶ್ಯಇದ್ದಲ್ಲಿ ಶಾಲೆಗಳಲ್ಲಿ ಕುಡಿ ಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ಮನೆಯ ಸದ ಸ್ಯರಿಗೆ ಸೋಂಕು ಕಂಡು ಬಂದಲ್ಲಿ ಮಗುವನ್ನು ಶಾಲೆಗೆ ಕರೆ ತರದಂತೆ ನೋಡಿಕೊಳ್ಳಬೇಕು. ಶಾಲೆಯಲ್ಲಿ ಮಗುವಿಗೆ ಸೋಂಕು ದೃಢಪಟ್ಟಿದ್ದರೆ ಉಳಿದ ಮಕ್ಕಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಬೇಕು ಎಂದು ಮಾರ್ಗಸೂಚಿ ತಿಳಿಸಿದೆ.