Advertisement

Blood Bank Centre ರಕ್ತ, ಅಂಗಾಂಶ ವಿತರಣೆಗೆ ದರ ನಿಗದಿ

12:19 AM Jul 23, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ರಕ್ತನಿಧಿ ಕೇಂದ್ರಗಳಲ್ಲಿ ರಕ್ತ ಮತ್ತು ಅದರ ಅಂಗಾಂಶ ವಿತರಿಸುವ ವೆಚ್ಚವನ್ನು ಜಿಲ್ಲಾಡಳಿತ ನಿಗದಿಪಡಿಸಿದೆ.

Advertisement

ರಾಜ್ಯದಲ್ಲಿರುವ ಎಲ್ಲ ರಕ್ತ ನಿಧಿ ಕೇಂದ್ರಗಳಲ್ಲಿ, ರಕ್ತ ಮತ್ತು ಅದರ ಅಂಗಾಂಶ ವಿತರಿಸುವ ವೆಚ್ಚವನ್ನು ನ್ಯಾಕೋ ನಿಯಮಾವಳಿಯಂತೆ ವೆಚ್ಚವನ್ನು ಪರಿಷ್ಕೃತಗೊಳಿಸಿರುತ್ತಾರೆ. ಆದ್ದ ರಿಂದ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿರುವ ರಕ್ತನಿಧಿಗಳಲ್ಲಿ ನಿಗದಿತ ದರವನ್ನು ಚಾಚೂ ತಪ್ಪದೆ ಪಾಲಿಸಬೇಕು.

ಇತ್ತೀಚೆಗೆ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್‌ ಅಧ್ಯಕ್ಷತೆಯಲ್ಲಿ ದ.ಕ. ಜಿ.ಪಂ. ಸಭಾಂಗಣದಲ್ಲಿ ಜರಗಿದ ಡೆಂಗ್ಯೂ ನಿಯಂತ್ರಣ ಸಭೆಯಲ್ಲೂ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು. ಪರಿಷ್ಕೃತ ದರ ಪಾಲನೆ ಮಾಡದಿರು ವುದು ಕಂಡುಬಂದಲ್ಲಿ ಅಂತಹ ಸಂಸ್ಥೆಗಳ ಮೇಲೆ ನ್ಯಾಕೋ/ಎನ್‌ಬಿಟಿಸಿ/ಎಸ್‌ಬಿಟಿಸಿ/ ಕೆಪಿಎಂಇಎ
ನಿಯಮಾವಳಿಯಂತೆ ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೆ çಮುಗಿಲನ್‌ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next