Advertisement
ಕಬ್ಬು ದಶಕಗಳ ಕಾಲ ರೈತರ ಅಚ್ಚುಮೆಚ್ಚಿನ ಬೆಳೆಯಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಪರಿಸ್ಥಿತಿ ಬದಲಾಗಿದೆ. ಸಿಓ-0238 ಎಂಬ ಹೊಸ ಕಬ್ಬಿನ ತಳಿ, 2017-18ರಲ್ಲಿ ಕಬ್ಬಿನ ಬಂಪರ್ ಇಳುವರಿಗೆ ನಾಂದಿ ಹಾಡಿದೆ. ಇದರಿಂದಾಗಿ ಕಬ್ಬಿನ ಬೇಡಿಕೆಗಿಂತ ಪೂರೈಕೆ ಜಾಸ್ತಿಯಾಗಿದೆ. ಹಾಗಾಗಿ, ಸಕ್ಕರೆ ಬೆಲೆ ಕುಸಿದು, ಕಬ್ಬು ಬೆಳೆಗಾರರು ನಷ್ಟ ಅನುಭವಿಸುತ್ತಿ¨ªಾರೆ.
Related Articles
Advertisement
ಕಬ್ಬಿನಿಂದ ಪಡೆಯುವ ಜೈವಿಕ ಇಂಧನ ಎಥೆನಾಲ…. ಇದನ್ನು ವಿವಿಧ ಅನುಪಾತಗಳಲ್ಲಿ ಪೆಟ್ರೋಲಿಗೆ ಬೆರಸಿ, ವಾಹನಗಳ ಚಲಾವಣೆಗೆ ಬಳಸಲಾಗುತ್ತದೆ. ಭಾರತ ಸರಕಾರ, ಜೈವಿಕ ಇಂಧನಗಳ ರಾಷ್ಟ್ರೀಯ ನೀತಿ ಘೋಷಿಸಿದ್ದು 2009ರಲ್ಲಿ. ಅದರ ಅನುಸಾರ, 2015ರಿಂದ ಪೆಟ್ರೋಲಿಗೆ ಬೆರಸಬೇಕಾದ ಎಥೆನಾಲಿನ ಪ್ರಮಾಣ ಶೇಕಡಾ 10. ಆದರೆ, ಇದನ್ನು ಯಾವತ್ತೂ ಸಾಧಿಸಲಿಲ್ಲ. ರಾಜ್ಯಸಭೆಯಲ್ಲಿ 28 ಮಾರ್ಚ್ 2018ರಂದು ಕೇಂದ್ರ ಸಚಿವರು ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದ ಪ್ರಕಾರ, ಈ ನಿಟ್ಟಿನಲ್ಲಿ ನಮ್ಮ ದೇಶದ ಅತ್ಯಧಿಕ ಸಾಧನೆ 2016ರಲ್ಲಿ ಆ ವರ್ಷ, ಇದರ ರಾಷ್ಟ್ರೀಯ ಸರಾಸರಿ ಪ್ರಮಾಣ ಶೇ. 3.3. ಗಮನಿಸಿ: ಥಾಯ್ಲೆಂಡಿನಲ್ಲಿ ಇದರ ಪ್ರಮಾಣ ಶೇ. 85. ನಮ್ಮ ದೇಶ ಶೇ. 10ರ ಗುರಿ ತಲಪಿದ್ದರೆ, ಪೆಟ್ರೋಲಿನ ಆಮದಿಗಾಗಿ ನಾವು ವ್ಯಯಿಸುತ್ತಿರುವ ರೂ.4,000 ಕೋಟಿ ಉಳಿಸಬಹುದಾಗಿತ್ತು ಎಂದು ಕೇಂದ್ರ ಸಚಿವರು ತಿಳಿಸಿ¨ªಾರೆ. ಜೊತೆಗೆ, ಪೆಟ್ರೋಲಿಗೆ ಎಥೆನಾಲ… ಬೆರೆಸಿದರೆ ಇಂಗಾಲದ ಮಾಲಿನ್ಯವೂ ಗಣನೀಯವಾಗಿ ಕಡಿಮೆಯಾಗುತ್ತದೆ.
ಪೆಟ್ರೋಲಿಗೆ ಎಥೆನಾಲನ್ನು ಸೂಚಿತ ಪ್ರಮಾಣದಲ್ಲಿ ಬೆರಸಿ ಮಾರಾಟ ಮಾಡಿದ್ದರೆ, ಕಬ್ಬು ಬೆಳೆಗಾರರಿಗೆ ಕೋಟಿಗಟ್ಟಲೆ ರೂಪಾಯಿ ಪಾವತಿ ಬಾಕಿ ಆಗುತ್ತಿರಲಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ ಎಸ್.ಕೆ. ಶುಕ್ಲಾ. ಅವರು ಜಗತ್ತಿನಲ್ಲಿ ಅತ್ಯಧಿಕ ಕಬ್ಬು ಬೆಳೆಸುವ ಬ್ರೆಜಿಲ… ದೇಶದ ಉದಾಹರಣೆ ನೀಡುತ್ತಾರೆ. ಅಲ್ಲಿ ಕಬ್ಬಿನಿಂದ ಲಾಭ ಗಳಿಸಲು ಸಕ್ಕರೆ ಉತ್ಪಾದನೆಯನ್ನಲ್ಲ, ಬದಲಾಗಿ ಎಥೆನಾಲ… ಉತ್ಪಾದನೆ ಅವಲಂಬಿಸಲಾಗಿದೆ. ಬ್ರೆಜಿಲ್‌ನಲ್ಲಿ ಪೆಟ್ರೋಲಿಗೆ ಬೆರಸುವ ಎಥೆನಾಲಿನ ಪ್ರಮಾಣ ಶೇಕಡಾ 27.
ಅಂತೂ, ಜೈವಿಕ ಇಂಧನ ನೀತಿ ಪಾಲನೆ ಮಾಡದಿರುವ ಕಾರಣ ಸಂಕಷ್ಟಕ್ಕೆ ಸಿಲುಕಿದವರು ಕಬ್ಬು ಬೆಳೆಗಾರರು. ಕಬ್ಬು ಅರೆಯುವ ಹಂಗಾಮು ಮುಗಿದು 14 ದಿನಗಳ ಮುನ್ನ ಕಬ್ಬು ಬೆಳೆಗಾರರ ಬ್ಯಾಂಕ್ ಖಾತೆಗಳಿಗೆ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬೆಲೆಯನ್ನು ಜಮೆ ಮಾಡತಕ್ಕದ್ದು. ಇದನ್ನು ಮಾಡದಿದ್ದರೆ, ಬಾಕಿ ಮಾಡಿದ ಹಣಕ್ಕೆ ವಾರ್ಷಿಕ ಶೇ.15 ಬಡ್ಡಿ ಪಾವತಿಸಬೇಕೆಂದು ಕೇಂದ್ರ ಸರಕಾರದ 1966ರ ಕಬ್ಬು ನಿಯಂತ್ರಣ ಆದೇಶದಲ್ಲಿ ತಿಳಿಸಲಾಗಿದೆ.
ಆದರೆ, ಸಕ್ಕರೆ ಕಾರ್ಖಾನೆಗಳು ಈ ಸೂಚಿತ ಅವಧಿಯೊಳಗೆ ಕಬ್ಬು ಬೆಳೆಗಾರರಿಗೆ ಹಣ ಪಾವತಿಸುವುದಿಲ್ಲ. ಉದಾಹರಣೆಗೆ, 2017-18ರಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಬಾಕಿ ಮಾಡಿರುವ ಹಣ: ಉತ್ತರಪ್ರದೇಶದಲ್ಲಿ ರೂ.13,486 ಕೋಟಿ ಮತ್ತು ಮಹಾರಾಷ್ಟ್ರದಲ್ಲಿ ರೂ.1,908 ಕೋಟಿ. ಕಬ್ಬು ಬೆಳೆಗಾರರಿಗೆ ವಿಳಂಬಿತ ಅವಧಿಗೆ ಪಾವತಿಸಬೇಕಾದ ಬಡ್ಡಿ ಮನ್ನಾ ಮಾಡಲು ರಾಜ್ಯ ಸರಕಾರಗಳಿಗೆ ಅನುಮತಿ ನೀಡಲಾಗಿದೆ. ಹಾಗಾಗಿ, ರೈತರಿಗೆ ಈ ಬಡ್ಡಿ ಪಾವತಿಯನ್ನು ನಿರಾಕರಿಸುತ್ತಲೇ ಬರಲಾಗಿದೆ.
ಸಕ್ಕರೆ ಬೆಲೆ 2017ರಲ್ಲಿ ಕಿ.ಲೋಗೆ ರೂ.37ರಿಂದ 2018ರಲ್ಲಿ ರೂ.26ಕ್ಕೆ ಕುಸಿದದ್ದೇ ರೈತರಿಗೆ ಪಾವತಿಸಬೇಕಾದ ಹಣ ಬಾಕಿಯಾಗಲು ಕಾರಣ ಎಂಬುದು ಸಕ್ಕರೆ ಕಾರ್ಖಾನೆ ಮಾಲೀಕರವಾದ. ಆದರೆ, ರೈತರು ಇದನ್ನು ಒಪ್ಪಲು ತಯಾರಿಲ್ಲ. ಕಳೆದ ವರ್ಷ ಸಕ್ಕರೆ ಬೆಲೆ ಜಾಸ್ತಿಯಾಗಿದ್ದರೂ, 2016-17ರ ನಮ್ಮ ಹಣವನ್ನು ಒಂದು ವರ್ಷದ ನಂತರ, 2018ರಲ್ಲಿ ಪಾವತಿಸಿದ್ದು ಯಾಕೆ?ಎಂಬ ರೈತರ ಪ್ರಶ್ನೆಗೆ ಸಕ್ಕರೆ ಕಾರ್ಖಾನೆ ಮಾಲೀಕರ ಬಳಿ ಉತ್ತರವಿಲ್ಲ.ಈ ಬಿಕ್ಕಟ್ಟನ್ನು ಪರಿಹರಿಸಲಿಕ್ಕಾಗಿ, ರೂ.7,000 ಕೋಟಿಗಳ ಪರಿಹಾರ ಪ್ಯಾಕೇಜನ್ನು ಕೇಂದ್ರ ಸರಕಾರ 6 ಜೂನ್ 2018ರಂದು ಘೋಷಿಸಿದೆ. ಇದರಲ್ಲಿ ರೂ.4,000 ಕೋಟಿ ಎಲ್ಲ ಸಕ್ಕರೆ ಕಾರ್ಖಾನೆಗಳು ಒಟ್ಟಾಗಿ ಪಡೆಯಬಹುದಾದ ಬ್ಯಾಂಕ್ ಸಾಲ (ತಮ್ಮ ಎಥೆನಾಲ… ಉತ್ಪಾದನೆ ಹೆಚ್ಚಿಸಲಿಕ್ಕಾಗಿ). ಅದಲ್ಲದೆ, ರೂ.1,175 ಕೋಟಿ ಸಕ್ಕರೆಯ ಮೂವತ್ತು ಲಕ್ಷ$ ಟನ್ ಕಾಪು ದಾಸ್ತಾನಿಗಾಗಿ ಬಳಕೆ ಮಾಡಬೇಕಾಗಿದೆ. ಈಗ, ಪೆಟ್ರೋಲಿಯಮ… ಕಂಪೆನಿಗಳು ಎಥೆನಾಲನ್ನು ಲೀಟರಿಗೆ ರೂ.40.85 ದರದಲ್ಲಿ ಖರೀದಿಸುತ್ತಿವೆ; ಕೇಂದ್ರ ಸರಕಾರ ನಿಗದಿ ಪಡಿಸುವ ಈ ದರವನ್ನು ಏರಿಸದಿದ್ದರೆ, ಎಥೆನಾಲ… ಉತ್ಪಾದನೆ ಹೆಚ್ಚಿಸಲು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಉತ್ಸಾಹವಿಲ್ಲ. ಆ ಪರಿಹಾರ ಪ್ಯಾಕೇಜಿನಲ್ಲಿ ಸಕ್ಕರೆಯ ಮಾರಾಟ ಬೆಲೆಯನ್ನು ಕಿಲೋಕ್ಕೆ ರೂ.29 ಎಂದು ನಿಗದಿ ಪಡಿಸಲಾಗಿದೆ. ಇದು ಬಹಳ ಕಡಿಮೆ. ಏಕೆಂದರೆ, ಕಬ್ಬಿನ ನ್ಯಾಯದ ಮತ್ತು ಲಾಭದಾಯಕ ಬೆಲೆ ಕ್ವಿಂಟಾಲಿಗೆ ರೂ.290 ಎಂದು ಕೇಂದ್ರ ಸರಕಾರ ನಿಗದಿ ಪಡಿಸಿದೆ. ಈ ಬೆಲೆಯ ಆಧಾರದಿಂದ, ಒಂದು ಕಿಲೋ ಸಕ್ಕರೆಯ ಉತ್ಪಾದನೆಗೆ ತಗಲುವ ವೆಚ್ಚ 35 ರೂಪಾಯಿ. ಹಾಗಿರುವಾಗ, ಸಕ್ಕರೆಯನ್ನು ಕಿಲೋಕ್ಕೆ 29 ರೂಪಾಯಿ ದರದಲ್ಲಿ ಮಾರಿದರೆ ಭಾರೀ ನಷ್ಟ ಎನ್ನುತ್ತಾರೆ, ಅಭಿನಾಷ್ ವರ್ಮ, ಡೈರೆಕ್ಟರ್ ಜನರಲ…, ಭಾರತೀಯ ಸಕ್ಕರೆ ಕಾರ್ಖಾನೆಗಳ ಅಸೋಸಿಯೇಷನ್. ಅಂತೂ ಕಬ್ಬಿನ ಕೃಷಿ ಮತ್ತು ಸಕ್ಕರೆ ಉತ್ಪಾದನೆಯ ಬಿಕ್ಕಟ್ಟಿನ ಮೂಲಕ್ಕೆ ಹೋದರೆ, ಬೇಡಿಕೆಗಿಂತ ಅಧಿಕ ಸಕ್ಕರೆ ಉತ್ಪಾದನೆಯೇ ಹಲವು ಸಮಸ್ಯೆಗಳಿಗೆ ಕಾರಣ ಎಂಬುದು ಸ್ಪಷ್ಟವಾಗುತ್ತದೆ. ಯಾಕೆಂದರೆ, ಈ ವರ್ಷ ಒಂದರÇÉೇ ಬಳಕೆಗಿಂತ ಶೇ.60 ಜಾಸ್ತಿ ಸಕ್ಕರೆ ಉತ್ಪಾದಿಸಲಾಗಿದೆ. ಈ ಹೆಚ್ಚುವರಿ ಉತ್ಪಾದನೆಯನ್ನು ಕೇಂದ್ರ ಸರಕಾರ ಖರೀದಿಸಿದರೂ ರಫ್ತು ಮಾಡಲು ಸಾಧ್ಯವಿಲ್ಲ. ಕಾರಣ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸಕ್ಕರೆಯ ಬೆಲೆ ತುಂಬಾ ಕಡಿಮೆ ಇದೆ. ಆದ್ದರಿಂದ, ಕಬ್ಬಿನಿಂದ ಹೆಚ್ಚೆಚ್ಚು ಎಥೆನಾಲ… ಉತ್ಪಾದಿಸಿ, ಅದನ್ನು ಪೆಟ್ರೋಲಿಗೆ ಬೆರಸಿ ಬಳಕೆ ಮಾಡುವುದೇ ಬಿಕ್ಕಟ್ಟಿನ ಪರಿಹಾರಕ್ಕೆ ದಾರಿ. – ಅಡ್ಕೂರು ಕೃಷ್ಣ ರಾವ್