ಮಧ್ಯಪ್ರದೇಶ : ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಗಳು ನೂರು ರೂಪಾಯಿ ಗಡಿ ದಾಡುವ ದಿನಗಳು ಇನ್ನೇನು ದೂರ ಉಳಿದಿಲ್ಲ ಅನ್ನಿಸುತ್ತದೆ. ಯಾಕಂದರೆ ಮಂಧ್ಯಪ್ರದೇಶದಲ್ಲಿ ಪೆಟ್ರೋಲ್ ಬೆಲೆ ಈಗಾಗಲೇ 96.69 ರೂ,ಗೆ ಬಂದು ತಲುಪಿದೆ.
ದಿನದಿಂದ ದಿನಕ್ಕೆ ದೇಶದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ನಾಗಾಲೋಟ ಪ್ರಾರಂಭಿಸಿದ್ದು ಜನರಿಗೆ ಹೊರೆಯಾಗಿ ಪರಿಣಮಿಸುತ್ತಿವೆ. ಇಂದು ಮಧ್ಯಪ್ರದೇಶದ ಭೂಪಾಲ್ ನಲ್ಲಿ ಪ್ರತಿ ಲೀಟರ್ ಗೆ ಪೆಟ್ರೋಲ್ ಬೆಲೆ 96.69 ಹಾಗೂ ಡಿಸೇಲ್ ಬೆಲೆ ಲೀಟರ್ ಗೆ 87.20 ರೂ. ತಲುಪಿದೆ.
ಇದನ್ನೂ ಓದಿ :ಪ್ರಧಾನಿಯಿಂದ ಚೆನ್ನೈ ಸೇನೆಗೆ “ಮೈನ್ ಬ್ಯಾಟಲ್ ಟ್ಯಾಂಕ್ ಮಾರ್ಕ್ -1 ಎ” ಹಸ್ತಾಂತರ
ಇನ್ನು ನಿತ್ಯ ಏರುಮುಖದಲ್ಲಿರುವ ಇಂಧನ ಬೆಲೆಗೆ ಜನಸಾಮಾನ್ಯರು ತತ್ತರಿಸುತ್ತಿದ್ದಾರೆ. ಸರ್ಕಾರ ಈ ಕೂಡಲೇ ಹಣದುಬ್ಬರವನ್ನು ನಿಯಂತ್ರಿಸಿ, ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಗಳನ್ನು ತಗ್ಗಿಸಬೇಕೆಂದು ಅಲ್ಲಿಯ ಜನರು ಒತ್ತಾಯಿಸಿದ್ದಾರೆ.
ಇನ್ನು ಕೇವಲ ಮಧ್ಯಪ್ರದೇಶ ಮಾತ್ರವಲ್ಲದೆ ದೇಶದಲ್ಲಿ ಎಲ್ಲ ರಾಜ್ಯಗಳಲ್ಲಿಯೂ ಇಂಧನ ಬೆಲೆ ಗಗನಕ್ಕೇರುತ್ತಿವೆ.