Advertisement

ನವರಾತ್ರಿ ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿ ; ತರಕಾರಿ, ಹೂವಿನ ಬೆಲೆ ಹೆಚ್ಚಳ

09:29 AM Sep 30, 2019 | Hari Prasad |

ಉಡುಪಿ: ಕರಾವಳಿಯಾದ್ಯಂತ ನವರಾತ್ರಿ ಉತ್ಸವದ ಸಂಭ್ರಮ ಕಳೆಗಟ್ಟಿದೆ. ಹಬ್ಬಕ್ಕೆ ಅಗತ್ಯವಿರುವ ಹೂವು, ಹಣ್ಣು ತರಕಾರಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಟೊಮೆಟೋಗೆ 35ರೂ., ಬಿನ್ಸ್‌ 40ರೂ., ಸೌತೆಕಾಯಿ 55ರೂ., ಕ್ಯಾರೇಟ್‌ 25ರೂ., ಈರುಳ್ಳಿ 50 ರೂ., ಬದನೆ 35 ರೂ., ಕ್ಯಾಲಿಫ್ಲವರ್‌ 35 ರೂ., ಕ್ಯಾಪ್ಸಿಕಂ 40 ರೂ., ಬೆಂಡೆ 40 ರೂ., ಸುವರ್ಣ ಗಡ್ಡೆ 40 ರೂ., ಶುಂಠಿ 50 ರೂ., ಕ್ಯಾಬೇಜ್‌ 35 ರೂ. ದರದಲ್ಲಿ ಮಾರಾಟವಾಗುತ್ತಿದೆ. ತರಕಾರಿ ಬೆಲೆ ಒಂದೇ ದಿನದಲ್ಲಿ ಕೆ.ಜಿ.ಗೆ 5 ರೂ.ನಿಂದ 10 ರೂ. ವರೆಗೆ ಏರಿಕೆಯಾಗಿದೆ.

Advertisement

ಹೂವು-ಹಣ್ಣಿನ ದರ ಏರಿಕೆ
ಶಂಕರಪುರ ಮಲ್ಲಿಗೆ ಒಂದು ಅಟ್ಟಿಗೆ 1,200 ರೂ., ಒಂದು ಮಾರು ಸೇವಂತಿಗೆ 80, ಜೀನಿಯಾ 40, ಗೊಂಡೆ 80, ಬಿಳಿ ಸೇವಂತಿಗೆ 80, ಗುಲಾಬಿ 100, ಮಾರಿಗೋಲ್ಡ್‌ 100 ರೂ. ಇದೆ. ಒಂದು ಕೆ.ಜಿ ಮೂಸಂಬಿ 80 ರೂ., ಕಿತ್ತಳೆ 160 ರೂ., ಸಪೋಟ 70 ರೂ., ದಾಳಿಂಬೆ 120 ರೂ., ಪಪ್ಪಾಯಿ 45 ರೂ., ಅನಾನಸು 60 ರೂ., ಮಾವು 100 ರೂ., ದ್ರಾಕ್ಷಿ 100 ರೂ., ಕಲ್ಲಂಗಡಿ 40 ರೂ., ಸೀಬೆಕಾಯಿ 100 ರೂ. ಇದೆ.

ವ್ಯಾಪಾರ ಜೋರು!
ನವರಾತ್ರಿ ವ್ಯಾಪಾರ ಜೋರಾಗಿದೆ. ಹೂವು ಒಂದೇ ದಿನದಲ್ಲಿ ಖಾಲಿಯಾಗುತ್ತಿದೆ. ಆದರೆ ಮಾರುಕಟ್ಟೆಗೆ ಉತ್ತಮ ಹೂವುಗಳು ಪೂರೈಕೆಯಾಗುತ್ತಿಲ್ಲ. ಕೆಲ ಹೂವು ಒಂದು ದಿನದಲ್ಲಿ ಬಾಡಿ ಹೋಗುತ್ತದೆ. ಇದರಿಂದಾಗಿ ಹೂವಿನ ವ್ಯಾಪಾರಿಗಳಿಗೆ ನಷ್ಟವುಂಟಾಗುತ್ತಿದೆ.
– ರವಿ, ಹೂವಿನ ವ್ಯಾಪಾರಿ, ಉಡುಪಿ.

ಬೆಲೆ ಏರಿಕೆ
ತರಕಾರಿ ಬೆಲೆ ಏಕಾಏಕಿಯಾಗಿ ಏರಿಕೆಯಾಗಿದೆ. ಆದರೂ ಜನರು ಖರೀದಿಗೆ ಮುಂದಾಗಿದ್ದಾರೆ. ಕೃಷ್ಣಾಷ್ಟಮಿ ಹಾಗೂ ಗಣೇಶೋತ್ಸವಕ್ಕಿಂತ ವ್ಯಾಪಾರ ಜೋರಾಗಿ ನಡೆಯುತ್ತಿದೆ.
– ಅಬೂಬಕ್ಕರ್‌, ತರಕಾರಿ ವ್ಯಾಪಾರಿ ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next