Advertisement

ಡಾಲರ್‌ ನಾಡಿನ  ಅನುಭವಕ್ಕೆ ಬೆಲೆ ಕಟ್ಟಲುಂಟೆ !

08:15 AM Feb 11, 2018 | |

ಒಂದು ದೇಶದಿಂದ ಮತ್ತೂಂದು ದೇಶಕ್ಕೆ ಹೋಗಲು ಉದ್ಯೋಗ, ಪ್ರವಾಸ, ಸಂಶೋಧನೆಗಳಂಥ ಯಾವುದೇ ಕಾರಣವಿರ‌ಬಹುದು. ಆದರೆ, ಅಲ್ಲಿ ಹೊಂದಿಕೊಳ್ಳುವುದು ಮಾತ್ರ ಸವಾಲಿನ ಸಂಗತಿ. ಮೊದಲು ಅನೇಕ ಎಡವಟ್ಟುಗಳು ಸಂಭವಿಸುತ್ತವೆ. ಬಹುಕಾಲ ಕಳೆದ ಬಳಿಕ ಅದನ್ನು ನೆನೆಯುವುದರಲ್ಲಿಯೇ ಒಂದು ರೀತಿಯ ಸ್ವಾರಸ್ಯವಿರುತ್ತದೆ.

Advertisement

    ಅದೃಷ್ಟ ಅನ್ವೇಷಣೆಗೆಂದು ಅಮೆರಿಕಕ್ಕೆ ನಾನು ವಲಸೆ ಬಂದುದು 1969ರಲ್ಲಿ.  ಬೆಂಗಳೂರನ್ನು ಬಿಟ್ಟ ಮೇಲೆ ಅಮೆರಿಕದ ಲಾಸ್‌ ಏಂಜಲಿಸ್‌ ನಗರದ ಆಧುನಿಕತೆಗೆ ಒಮ್ಮೆಲೆ expose ಆದಾಗ ದಿಗ್ಭ್ರಮಿಸಿ ಹೋಗಿ¨ªೆ.  ಕೆಲವೊಮ್ಮೆ – ಅಮೆರಿಕದ ಬದುಕಿಗೆ ಹೇಗೆ ಹೊಂದಿಕೊಳ್ಳುವುದು? – ಎಂದೂ ವಿಸ್ಮಯ ಪಟ್ಟಿ¨ªೆ.  ಆದರೆ, ಸಮಯ ಸರಿದಂತೆ ಅಮೆರಿಕದ ಲೈಫ್ ಅದು ಹೇಗೋ ನನ್ನದೇ ರೀತಿಯಲ್ಲಿ ರೂಢಿಪಡಿಸಿಕೊಂಡಿದ್ದೇನೆ.  ಬಂದ ಹೊಸದರಲ್ಲಿ ಇಲ್ಲಿ ಶಾಪಿಂಗ್‌ ಮಾಡುವುದೇ ಒಂದು ಸಮಸ್ಯೆಯಾಗಿತ್ತು

    ನಮ್ಮ ಶಾಪಿಂಗ್‌ ಎಣಿಸಿದಾಗಲೆಲ್ಲ ಈ ಕೆಳಗಿನ ಒಂದು ಹಾಸ್ಯ ಪ್ರಕರಣ ನೆನಪಿಗೆ ಬಂದು ಈಗಲೂ ನಗು ಬರುತ್ತದೆ. ಇಲ್ಲಿ ತುಂಬ ಕಡೆ ಈ Donut Shop ಎಂಬ ಬೋರ್ಡನ್ನು ನೋಡುತ್ತಿದ್ದು, ಅದೆಂಥ ಛಟ do nut (ಅಥವಾ do not?) ಎಂದು ವಿಸ್ಮಯಪಡುತ್ತಿ¨ªೆ. ಅದು ನಮ್ಮೂರಿನಲ್ಲಿ ಹೋಟೆಲುಗಳಲ್ಲಿ ದೊರಕುತ್ತಿದ್ದ ಉದ್ದಿನ ವಡೆಯ ಅಕಾರವಿದ್ದಿದ್ದು, ಒಮ್ಮೆ ನನ್ನವಳು ನನ್ನನ್ನು ಕೇಳಿದಳು, “ಅದೇನು ಆ ವಡೆಯ ಹಾಗಿದ್ದುದು?’ಎಂದು. ನಾನು, ನನ್ನವಳ ಇದಿರು ಹೆಡ್ಡನಾಗಬಾರದೆಂದು, “ಅದೆಲ್ಲ ನಮ್ಮಂಥವರು ತಿನ್ನುವಂಥದಲ್ಲ’ ಎಂದು ದಬಾಯಿಸಿ¨ªೆ. ಆದರೂ, ಈ ವಡೆಯ ಬಗ್ಗೆ ತಿಳಿದುಕೊಳ್ಳಲು ನನ್ನ ಕುತೂಹಲ ಕೆರಳುತ್ತಲೇ ಇತ್ತು.  ಹಾಗಾಗಿ. ಒಮ್ಮೆ ನಾನೊಬ್ಬನೇ ಶಾಪಿಂಗ್‌ಗೆ ಹೋಗಿ ಎರಡು ಡಜನ್‌ ವಡೆಯ ಪ್ಯಾಕೆಟ್‌ನ್ನು ಕೊಂಡುಕೊಂಡೆ. ಹಾಗೆ ಕೌಂಟರ್‌ನಲ್ಲಿ ಹಣ ಪಾವತಿ ಮಾಡಲು ಬಂದೆ. ಯಾಕೋ ಆ ವಡೆಯ ಪ್ಯಾಕೆಟ್‌ನ ಮೇಲೆ ಬರೆದ ಅದರ ಬೆಲೆಯನ್ನು ನಾನು ನೋಡಿರಲಿಲ್ಲ. ಕೌಂಟರ್‌ನಲ್ಲಿ ಇದ್ದ ಹುಡುಗಿಯು ಬೆಲೆಯನ್ನು ರಿಂಗ್‌ ಮಾಡಿ ‘Dollar Ten’ ಎಂದು ಹಣಕ್ಕೆ ಕೈ ಚಾಚಿದಳು. ನನ್ನ ಎದೆ ಧಸಕ್‌ ಎಂದಿತು. ನನ್ನ ಜೇಬಿನಲ್ಲಿ ಬರಿಯ ಹತ್ತು ಡಾಲರ್‌ನ ಬಿಲ್‌ ಮಾತ್ರ ಇದ್ದಿತ್ತು. ನಾನು- ಈ ವಡೆಯಾದರೂ ಎಷ್ಟು ದುಬಾರಿಯಪ್ಪ ಎಂದುಕೊಂಡು, ಇದು ನಮ್ಮಂಥವರು ನಿಜಕ್ಕೂ ತಿನ್ನುವಂಥ ತಿಂಡಿಯಲ್ಲ ಎಂದೆಣಿಸಿ, ಜೇಬಿನಲ್ಲಿದ್ದ ಹತ್ತು ಡಾಲರ್‌ ಬಿಲ್ಲನ್ನು ಆ ಸೇಲ್ಸ್‌ ಗರ್ಲ್ಗೆ ಕೊಟ್ಟು, ಆ ಪ್ಯಾಕೆಟ್‌ ಹಿಡಿದು ಮನೆ ಕಡೆಗೆ ಹೊರಟೆ. ಆದರೆ, ಆ ಸೇಲ್ಸ… ಹುಡುಗಿ ನನ್ನನ್ನು ಕರೆಯುತ್ತ ‘Sir, You forgot to your change; here it is’ ಎಂದು ಎಂಟು ಡಾಲರು ತೊಂಬತ್ತು ಸೆಂಟ್ಸ್‌ಗಳನ್ನು ನನ್ನ ಕೈಗಿತ್ತಳು. ನನಗೆ ಆಶ್ಚರ್ಯವೇ ಆಯ್ತು. ಯಾಕೆಂದರೆ, ನಾನು ಆ ವಡೆಯ ಬೆಲೆಯೇ ಹತ್ತು ಡಾಲರ್‌ ಎಂತ ತಿಳಿದಿ¨ªೆ; ಕಾರಣ ನಮ್ಮ ದೇಶದಲ್ಲಿ ರುಪೀಸ್‌ ಟೆನ್‌ ಎಂದರೆ ಹತ್ತು ರೂಪಾಯಿಯಲ್ಲವೇ? ಹಾಗೆ ಡಾಲರ್‌ ಟೆನ್‌ ಎಂದರೆ ಹತ್ತು ಡಾಲರ್‌ ಎಂದು ತಿಳಿದಿ¨ªೆ. ಆದರೆ, ಅದು ಇಲ್ಲಿಯವರು ಹೇಳುವ ಒಂದು ಡಾಲರ್‌ ಮೇಲೆ ಹತ್ತು ಸೆಂಟ್ಸ್‌ಗಳೆಂದು ನನಗೆ ಹೇಗೆ ತಿಳಿಯಬೇಕು? 

    ಇಲ್ಲಿ ನನಗೆ ಮುಜಗರವಾದರೂ, ನಾನೊಂದು ಪಾಠ ಕಲಿತಿ¨ªೆ ಎನ್ನುವುದೇ ಮುಖ್ಯವಾಗಿ ಈಗ ತೋರುತ್ತಿದೆ. ಅಂದು ನಾನು ಆ ದಿನ ಸ್ವಲ್ಪ ಪೆಚ್ಚಾದರೂ ಒಂದು ಹೊಸ ನುಡಿಗಟ್ಟನ್ನು ಅರಿತೆ. ಇನ್ನು ಮನೆಗೆ ಬಂದು ಆ ವಡೆಯ ರುಚಿಯೇನು, ಅದಕ್ಕೆ ಚಟ್ನಿ ಅಥವಾ ಸಾಂಬಾರು ಬೇಕೆ, ಎಂದು ನಿರ್ಧರಿಸಬೇಕು. ಮನೆಗೆ ಬಂದವನೇ ನನ್ನವಳಿಗೆ “”ನೋಡು ನೀನು ಅಪೇಕ್ಷಿಸುತ್ತಿದ್ದ ವಡೆ ತಂದಿದ್ದೇನೆ, ಇದನ್ನು ತಿನ್ನಲು ಚಟ್ನಿ-ಸಾಂಬಾರು ತಯಾರಿಸು” ಎಂದು ಆಜ್ಞಾಪಿಸಿದೆ. ಆಕೆ ತಡೆಯಲಾರದೆ ಒಂದು ತುಂಡು ವಡೆಯನ್ನು ಮುರಿದು ತಿಂದಾಗಲೇ ಹೊಳೆದುದು ನಮ್ಮ ಹೆಡ್ಡುತನ! ಕಾರಣ ಅದು ಸಿಹಿಯಾಗಿ ಕೇಕ್‌ನ ರುಚಿಯಿದ್ದಿತ್ತು.  ವಡೆಯ ರುಚಿಗೂ ಅದಕ್ಕೂ ತೀರ ಭಿನ್ನ! ಅಂತೂ ಸಾಂಬಾರು – ಚಟ್ನಿ ಮಾಡುವ ಕೆಲಸ ನನ್ನವಳಿಗೆ ತಪ್ಪಿತು. ಎಲ್ಲರ ಬಾಯಿ ಸಿಹಿಯಾಗಿ ಸಂತೋಷ ಪಟ್ಟೆವು. ಆಮೇಲೆ ಪ್ರತಿ ಸಂಬಳ ಬಂದ ದಿನ ಒಂದು ಡಜನ್‌ ಡೋನಟ್‌ ವಡೆಯನ್ನು ತರುವುದು ರೂಢಿಯಾಯಿತು. Doughನಿಂದ ತಯಾರಿಸುವ ಆ ವಡೆಯನ್ನು, ಕಬ್ಬಿಣದ nutನಂತೆ ಮಧ್ಯೆ ತೂತು ಇರುವುದರಿಂದಲೋ ಏನೋ ಇಲ್ಲಿ ಡೋನಟ್‌ ಎಂದು ಕರೆಯುತ್ತಾರೆಂದು ನನ್ನ ಅನಿಸಿಕೆ.  Dough nut ಎಂಬುದು ಅಮೆರಿಕದ ಸುಲಭೀಕರಣದಲ್ಲಿ Donut ಆಗಿರಬೇಕು. 

ಸಾಮಾನ್ಯವಾಗಿ ಕಾಫಿಯ ಜತೆ ಅದನ್ನು ಉಪಯೋಗಿಸುತ್ತಾರೆಂದು ಆಮೇಲೆ ತಿಳಿಯಿತು.
ಈಗ ಎಣಿಸಿದರೆ, ಇವೆಲ್ಲ ಸ್ವಲ್ಪ ಸಿಲ್ಲಿಯಾಗಿ ಕಂಡೀತು.  ಆದರೆ, ಇದು ನಾವು ಇಲ್ಲಿನ ಲೈಫ್ ಜೊತೆ ಹೊಂದಿಕೊಳ್ಳುವ ಪ್ರಯತ್ನಕ್ಕೆ ಒಂದು ಪುಟ್ಟ ಉದಾಹರಣೆ, ಅಷ್ಟೆ ! 

Advertisement

ಅಮೆರಿಕದಲ್ಲಿ ಮಿನಿ ಕರ್ನಾಟಕ
ಕಳೆದ ಶತಮಾನದ 60ರ ದಶಕದಲ್ಲಿ, ತಮ್ಮ ಆರ್ಥಿಕ, ಔದ್ಯೋಗಿಕ ಅವಕಾಶಗಳನ್ನು ವೃದ್ಧಿಪಡಿಸಿಕೊಳ್ಳಲು, ಅಮೆರಿಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ವಲಸೆ ಬಂದಿರುತ್ತಾರೆ.

ಹಾಗೆ ಬರುತ್ತ, ತಮ್ಮ back packಗಳಲ್ಲಿ ಕನ್ನಡ ಸಂಸ್ಕೃತಿ, ಭಾಷೆ, ಸಂಪ್ರದಾಯ - ಇತ್ಯಾದಿಗಳನ್ನು ಹೊತ್ತೇ ತಂದಿರುತ್ತಾರೆ ಎಂಬುದೂ ಸಹಜ. ಅಮೆರಿಕದ ವಿವಿಧ ನಗರಗಳಲ್ಲಿ ಸ್ಥಾಪನೆಯಾದ ಹಲವಾರು ಕನ್ನಡ ಕೂಟಗಳು ಇದಕ್ಕೆ ಸಾಕ್ಷಿಯಾಗಿ ನಿಂತಿವೆ. ಅಂಥ ಕೂಟಗಳ ಚಟುವಟಿಕೆಗಳ ಅಂಗವಾಗಿ ಬೇರೆ-ಬೇರೆ ಹಬ್ಬ- ಆಚರಣೆಗಳನ್ನು ಆಚರಿಸಿ, ಕರ್ನಾಟಕದ ನೆನಪನ್ನು ಉಳಿಸಿಕೊಂಡು ವಿಶಿಷ್ಟ ತೃಪ್ತಿಯನ್ನು ಪಡೆದಿರುವುದೂ ನಿಜ! ಅಂದರೆ, ಇಲ್ಲಿ ವಿವಿಧ ನಗರ ಪ್ರದೇಶಗಳಲ್ಲಿ, ನಮ್ಮದೇ ಆದ ಕಿರು ಕರ್ನಾಟಕಗಳನ್ನು ಸ್ಥಾಪನೆ ಮಾಡಿಕೊಂಡಿದ್ದೇವೆ. ನಮ್ಮ ಸಂಸ್ಕೃತಿ, ಭಾಷೆಗಳನ್ನು ಉಳಿಸಿ, ಬೆಳೆಸಿಕೊಳ್ಳಲು ಇಂಥ ಪ್ರಯತ್ನಗಳು ತುಂಬಾ ಅನುಕೂಲ.

ನಾನಿಲ್ಲಿ ಅಂಥ ಮಿನಿ-ಕರ್ನಾಟಕ ಸ್ಥಾಪನೆಯನ್ನು ಸಮರ್ಥಿಸಿಕೊಳ್ಳಲೆಂದೋ ಏನೋ, ಇಲ್ಲಿಯ ಹಲವು ಪ್ರದೇಶಗಳಿಗೆ ಕರ್ನಾಟಕದ ಹೆಸರುಗಳನ್ನು ಇಟ್ಟಿರುತ್ತೇನೆ. ಅದೇನೂ ಅಧಿಕೃತವಲ್ಲ. ಆದರೆ, ನನ್ನ ಮನಸ್ಸಿಗೇನೋ ಒಂದು ರೀತಿಯ ಸಮಾಧಾನ! ಅಲ್ಲದೆ ನನ್ನೂರನ್ನು ನೆನೆಯಲು ಅಂಥ ಪ್ರಯತ್ನ ಸಹಾಯವಾಗಿದೆ! ಈ ಕೆಳಗೆ ಕೆಲವು ಉದಾಹರಣೆಗಳನ್ನು ಕೊಡುತ್ತಿದ್ದೇನೆ:

ನನ್ನ ಬಾಲ್ಯವನ್ನು ಕಳೆದುದು, ಕರಾವಳಿಯ ಕೋಟದಲ್ಲಿ. ಅಲ್ಲೊಂದು ಪುಟ್ಟ ಗ್ರಾಮ, “ಹರ್ತಟ್ಟು’ ಎಂಬ ನಾಮ. ಅದ್ಯಾಕೋ ನನಗೆ ಇಲ್ಲಿಯ Hartford ನಗರವನ್ನು ಎಣಿಸಿದಾಗಲೆಲ್ಲ, ಹರ್ತಟ್ಟು ಜ್ಞಾಪಕವಾಗುತ್ತದೆ; ಹಾಗೆ, Hartfordನ್ನು ಹರ್ತಟ್ಟು ಅಂತಲೇ ಕರೆಯುತ್ತಿದ್ದೇನೆ. ಅಂತೆಯೇ ನಾನು ಮೊದಲು ನೆಲೆಸಿದ ಶಿಕಾಗೋ ನಗರಕ್ಕೆ ನನ್ನ ಮಡದಿಯ ಊರಾದ ಶಿವಮೊಗ್ಗ (ಶಿಮೊಗ್ಗಾ)ದ ಹೆಸರು ಇಟ್ಟಿದ್ದೇನೆ. ಶಿಕಾಗೋ ಮತ್ತು ಶಿಮೊಗಾ – ಎರಡೂ hyames together.

ಇನ್ನು “ಬಫೆಲೋ’ಗೆ “ಕೋಣನೂರು’. ನಾವೀಗ ವಾಸವಾಗಿರುವ ಆರ್ಕೇಡಿಯವನ್ನು ನನ್ನ ಮಿತ್ರರಾದ ನಟರಾಜರ ಸಲಹೆಯಂತೆ, “ಅಡಿಕೆ ರಿಯ’ ಎಂದು ಕರೆಯಬಹುದು. ಹಾಗಾಗಿ, ನನ್ನವಳು. ಅಡಿಕೆ ಬೆಳೆಯುವ ಮಲೆನಾಡಿನ ಮೇಳಿಗೆಯಿಂದ ಬಂದುದಕ್ಕೆ ಒಂದು    justification.
ನಟರಾಜರ ಹೇಳಿಕೆಯಂತೆ, ಪೆನ್ಸಿಲ್ವೇನಿಯಾದ Potatownನ್ನು, “ಮಡಿಕೆ ರಿ’ ಎಂದು ಕರೆಯಬಹುದು. ಈ ಕೆಳಗೆ ಒಂದು ಪಟ್ಟಿಯನ್ನು ಕೊಟ್ಟಿದ್ದೇನೆ. ನಿಮಗೆ ಹೇಗನಿಸುತ್ತದೆ ಎಂದು ತಿಳಿಸಿ.
ಅವುಗಳಲ್ಲಿ ಕೆಲವು ಊರುಗಳನ್ನು ಭಾರತೀಕರಿಸಿದ್ದನ್ನು
ಗಮನಿಸಬೇಕು:

Hartford  – ಹರ್ತಟ್ಟು
Chikago    – ಶಿಮೊಗಾ
Montreal  – ಮಂತ್ರಾಲಯ
Boston – ಬಸವಸ್ಥಾನ
Indianapolis – ಇಂದ್ರಪ್ರಸ್ಥ 

ನಾಗ ಐತಾಳ ಲಾಸ್‌ಏಂಜಲೀಸ್‌

Advertisement

Udayavani is now on Telegram. Click here to join our channel and stay updated with the latest news.

Next